Breaking News

ಮನೆಯ ಗೃಹಪ್ರವೇಶದ ದಿನ ಬಲಿ ಕೊಡಲು ತಂದ ಕೋಳಿಯಿಂದಲೇ ತನ್ನ ಪ್ರಾಣವನ್ನು ಕಳೆದುಕೊಂಡ ವ್ಯಕ್ತಿ..

Cnewstv.in / 28.10.2022 /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮನೆಯ ಗೃಹಪ್ರವೇಶದ ದಿನ ಬಲಿ ಕೊಡಲು ತಂದ ಕೋಳಿಯಿಂದಲೇ ತನ್ನ ಪ್ರಾಣವನ್ನು ಕಳೆದುಕೊಂಡ ವ್ಯಕ್ತಿ..

ಬಲಿ ಕೊಡಲೆಂದು ತಂದ ಕೋಳಿಯಿಂದಲೇ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನ ಕಳೆದುಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.‌

ಹೊಸದಾಗಿ ನಿರ್ಮಾಣ ಮಾಡಿದ್ದ ಮನೆಗೆ ಯಾರ ದೃಷ್ಟಿ ಬೀಳದಿರಲಿ ಎಂದು ಕೋಳಿಯನ್ನು ಬಲಿಕೊಡಲು ಖರೀದಿ ಮಾಡಲಾಗಿತ್ತು. ಅದರಂತೆ ಬೆಳಿಗ್ಗೆ 4 ಗಂಟೆಯ ಸಮಯಕ್ಕೆ ಕೋಳಿಯನ್ನ ಬಲಿ ನೀಡುವ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಮನೆಯ ಮೂರನೇ ಮಹಡಿಯಿಂದ ಕೋಳಿಯು ಇದ್ದಕ್ಕಿದ್ದಂತೆ ಅವರಿಂದ ತಪ್ಪಿಸಿಕೊಂಡಿದೆ. ಆ ಕೋಳಿಯನ್ನು ಹಿಡಿಯಲು ಹೋದ 70 ವರ್ಷದ ರಾಜೇಂದ್ರ ಅದೇ ಹೊಸ ಮನೆಗೆ ಲಿಫ್ಟ್ ಅಳವಡಿಸಲು ಅಗೆದಿದ್ದ 20 ಅಡಿ ಆಳದ ಹೊಂಡಕ್ಕೆ ಬಿದ್ದಿದ್ದಾರೆ.

ಕೋಳಿಯನ್ನು ಹಿಡಿಯಲು ಹೋದವರು ಎಷ್ಟು ಹೊತ್ತಾದರೂ ಬರದ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಆತನನ್ನ ಹುಡುಕಿಕೊಂಡು ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜೇಂದ್ರನನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ದಾಖಲೆಸಿದ್ದಾರೆ ಆದರೆ ಅಷ್ಟರಲ್ಲಿ ರಾಜೇಂದ್ರನ ಪ್ರಾಣಪಕ್ಷಿ ಹಾರಿಹೋಗಿತ್ತು.

ಒಟ್ಟಿನಲ್ಲಿ ಹೊಸ ಮನೆಗೆ ಯಾರ ದೃಷ್ಟಿ ಕೂಡ ಬೀಳಬಾರದು ಎಂದು ಬಲಿಕೊಡಲು ತಂದಿದ್ದ ಕೋಳಿಯನ್ನು ಹಿಡಿಯಲು ಹೋಗಿದ ವ್ಯಕ್ತಿಯು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*