Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
🎙️ ಶಿವಮೊಗ್ಗ ದಸರಾ | ಕ್ರೇಜಿಸ್ಟಾರ್ ರವಿಚಂದ್ರನ್ ಭಕ್ತಿ ಗೀತೆ ವಿಶೇಷ
ಶಿವಮೊಗ್ಗ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದ ಕ್ರೇಜಿಸ್ಟಾರ್ ವಿ. ರವಿಚಂದ್ರನ್!
ನಟನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರವಿಚಂದ್ರನ್, ಶಿವಮೊಗ್ಗ ಯುವ ದಸರಾ ವೇದಿಕೆಯಲ್ಲಿ ವಿಶೇಷವಾಗಿ ಗಮನ ಸೆಳೆದರು.
ಶಿವಮೊಗ್ಗ ದಸರಾಗಾಗಿಯೇ ಭಕ್ತಿ ಪ್ರಧಾನ ಗೀತೆಯೊಂದನ್ನು ರಚಿಸಿ, ವೇದಿಕೆಯಲ್ಲೇ ಅದನ್ನು ಪ್ರಸ್ತುತಪಡಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು.

ನಾಡದೇವತೆ ಚಾಮುಂಡೇಶ್ವರಿಯ ಆಶೀರ್ವಾದ, ಹೆಣ್ಣುಮಕ್ಕಳಿಗೆ ಗೌರವ, ತಂದೆ-ತಾಯಿಯ ಪ್ರೀತಿ ಹಾಗೂ ಇತರರ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಸಂತೋಷ ಎಂಬ ಸಂದೇಶವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಅವರೊಂದಿಗಿನ ಆತ್ಮೀಯ ನೆನಪುಗಳನ್ನೂ ಮೆಲುಕು ಹಾಕಿದರು.
ಒಟ್ಟಿನಲ್ಲಿ, ಶಿವಮೊಗ್ಗ ಯುವ ದಸರಾ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಾತು, ಸಂಗೀತ ಹಾಗೂ ಭಕ್ತಿಭಾವ ಪ್ರೇಕ್ಷಕರ ಗಮನ ಸೆಳೆದವು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv