ದಸಾರದಲ್ಲಿ ಮೂಸಿಕ್ದ ನೈಟ್ : ಸಾಧು ಕೋಕಿಲ​ ಸಂಗೀತಕ್ಕೆ ಮನಸೋತ ಜನ..‌

Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ದಸಾರದಲ್ಲಿ ಮೂಸಿಕ್ದ ನೈಟ್ : ಸಾಧು ಕೋಕಿಲ​ ಸಂಗೀತಕ್ಕೆ ಮನಸೋತ ಜನ..‌

ಶಿವಮೊಗ್ಗ : ಯುವ ದಸರಾ ಅಂಗವಾಗಿ ಬಹುಮುಖ ಪ್ರತಿಭೆ ಸಾಧು ಕೋಕಿಲ​ ಅವರ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.‌ ಅವರು ವೇದಿಕೆಗೆ ಬರುವ ಮುನ್ನ ಹಾಡುಗಾರ ಚನ್ನಪ್ಪ ಸೇರಿದಂತೆ ಇತರರು ತಮ್ಮ ಕಲೆಯನ್ನು ಪ್ರದರ್ಶಿಸಿದರು.‌ ನಂತರ ಎಂಟ್ರಿ‌ ಕೊಟ್ಟ ಸಾಧು ಅವರು ‘ರಕ್ತಕಣ್ಣಿರು’ ಚಿತ್ರದ ಡೇಂಜರ್ ಎನ್ನುವ ಹಾಡನ್ನು ಹಾಡುತ್ತಾ ವೇದಿಕೆಗೆ ಆಗಮಿಸಿದರು. ನಂತರ ‘ನಿನೊಂದು ಮುಗಿಯದ ಮೌನ’ ಎಂಬ ಗೀತೆಯನ್ನು ಹಾಡಿದರು. ವೇದಿಕೆ ಮೇಲೆ ಕಚಗುಳಿ ಮಾತಿನಿಂದ ಶಿವಮೊಗ್ಗ ಜನತೆಯನ್ನು ನಗುವಿನ ಕಡಲಲ್ಲಿ ತೇಲಿಸಿದರು.

ವೇದಿಕೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಡಿ.ಎಸ್.ಅರುಣ್, ಡಾ.ಧನಂಜಯ್ ಸರ್ಜಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೀಶ್, ಆಯುಕ್ತರಾದ ಮಾಯಣ್ಣ ಗೌಡ ಸೇರಿ ಇತರರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌.ಎನ್.ಚನ್ನಬಸಪ್ಪ ವಹಿಸಿದ್ದರು. ಕಾರ್ಯಕ್ರಮ‌ ನೋಡಲು ಲಕ್ಷಾಂತರ ಮಂದಿ ಆಗಮಿಸಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*