ಕೋವಿಡ್ ಸುರಕ್ಷಾ ಪಡೆ ನೇತೃತ್ವದಲ್ಲಿ ಶಿವಮೊಗ್ಗ ನಗರದ ನಾಲ್ಕು ಲಕ್ಷ ಜನರಿಗೆ ರೋಗ ನಿರೋಧಕ ಮತ್ತು ಶಕ್ತಿವರ್ಧಕ ಔಷಧಿ ಕಿಟ್‍ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜುಲೈ 29ರಂದು ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ ಅವರು ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಡಿದ ಸಚಿವ ಈಶ್ವರಪ್ಪ, ಶಿವಮೊಗ್ಗ ನಗರದಲ್ಲಿ ಸುಮಾರು 85 ಸಾವಿರ ಮನೆಗಳಿವೆ. ಪ್ರತಿ ವಾರ್ಡ್‍ನ ಕಾರ್ಪೊರೇಟರ್‍ಗಳು, ಸ್ವಯಂ ಸೇವಕರು ಪ್ರತಿ ಮನೆಗೂ ಔಷಧಿ ಕಿಟ್ ವಿತರಿಸಲಿದ್ದಾರೆ. ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಉಚಿತ ಆರೋಗ್ಯ ಕಿಟ್ ವಿತರಿಸಲಾಗುತ್ತದೆ ಎಂದರು.
ಆಯುಷ್ ಇಲಾಖೆ ಮಾರ್ಗಸೂಚಿಯಂತೆ ಔಷಧಿ ಕಿಟ್ ಸಿದ್ಧಪಡಿಸಿಲಾಗುತ್ತಿದೆ. ಸಂಶಮನಿವಟಿ 60 ಮಾತ್ರೆ, ಆಯುರ್ವೇದ ಕ್ವಾಥಾಚೂರ್ಣ 100 ಗ್ರಾಂ, ಆರ್ಸೆನಿಕಮ್ ಆಲ್ಬಮ್ 30 ಸತ್ವದ 10 ಮಾತ್ರೆಗಳ ಒಂದು ಸ್ಟ್ರಿಪ್ ನೀಡಲಾಗುತ್ತದೆ ಎಂದು ತಿಳಿಸಿದರು. ಕಿಟ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಆಧಾರ್ ಕಾರ್ಡ್ ತೋರಿಸಿದರೆ ಔಷಧಿ ಕಿಟ್ ವಿತರಿಸಲಾಗುತ್ತದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಅವರಿಗೆ ಕಾರ್ಡ್ ಮಾಡಿಸಿ, ಬಳಿಕ ಕಿಟ್ ನೀಡಲಾಗುತ್ತದೆ ಎಂದರು.
Recent Comments