ಶಿವಮೊಗ್ಗ : ಟಿಪ್ಪು ನಗರದಲ್ಲಿ 15 ದಿನದ ನವಜಾತ ಶಿಶುವನ್ನು ಮಾರಾಟ ಮಾಡಲು ಮುಂದಾಗಿದ್ದ ಆರೋಪಿಗಳನ್ನು ತುಂಗಾ ನಗರ ಪೊಲೀಸ್ ಠಾಣೆಯ ಪೋಲಿಸರು ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಲಕ್ಷದ 50 ಸಾವಿರ ರೂಪಾಯಿಗೆ ಮಗುವನ್ನು ಮಾರಟ ಮಾಡಲು ಯತ್ನಿಸಿದ್ದ ಶೈಲ, ಸುಮಾ, ತುಳಸಿ, ಉಷಾ ಹಾಗೂ ಷಣ್ಮುಗ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಶ್ರೀನಿವಾಸ್ ಮತ್ತು ಉಷಾ ದಂಪತಿಗಳಿಗೆ ಕಳೆದ 15 ದಿನಗಳ ಹಿಂದೆ ಗಂಡು ಮಗುವಾಗಿದೆ. ಬಡತನದ ಹಿನ್ನೆಲೆಯಲ್ಲಿ ಈ ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದ್ದು ಒಂದು ಒಳ್ಳೆಯ ಕಡೆ ಮಗುವನ್ನು ಕೊಟ್ಟುಬಿಡೋಣ ಎಂದು ತೀರ್ಮಾನಿಸಿ ಬೇರೆಯವರಿಗೆ ನೀಡಲು ಮುಂದಾಗಿರುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.
ಅದೇನೇ ಆಗಲಿ ಜಗತ್ತನೇ ಕಾಣದ ಅ ಪುಟ್ಟ ಕಂದನನ್ನ ಮಾರುವುದು ಅದೆಷ್ಟರ ಮಟ್ಟಿಗೆ ಸರಿಯಾಗಿದೆ.