ಶಿವಮೊಗ್ಗ ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅತಿ ಹೆಚ್ಚು ಪತ್ತೆಯಾಗುತ್ತಿದ್ದು, ವಿವಿಧ ವಾಡ್ ಗಳಲ್ಲಿ ಸುಮಾರು ಸಕ್ರಿಯ 148 ಕಂಟೋನ್ಮೆಂಟ್ ಝೊನ್ ಗಳಿದ್ದು, ಅವುಗಳಲ್ಲಿ 250 ಕ್ಕೂ ಹೆಚ್ಚು ಮಂದಿ ಕೋವಿಡ್ 19 ಭಾದಿತರಾಗಿದ್ದಾರೆ. ಕ್ರಮೇಣ ಪ್ರಕರಣಗಳು ಹೆಚ್ಚಾಗುತ್ತಿದೆ ಈ ಹಿನ್ನಲೆಯಲ್ಲಿ
ಶಿವಮೊಗ್ಗದಲ್ಲಿ ಕೆಲ ಭಾಗಗಳಲ್ಲಿ ಬಿಗಿ ಲಾಕ್ ಡೌನ್ ನ್ನ ಜಾರಿಗೆ ತರಲು ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಹೊಸ ಆದೇಶವನ್ನ ಹೊರಡಿಸಿದ್ದಾರೆ.ಈ ಹೊಸ ಆದೇಶದ ಅನ್ವಯ ವಾರ್ಡ್ ನಂಬರ್ 22,23,29 ಹಾಗೂ 30 ವಾರ್ಡ್ ನಂಬರ್ 12, 13, 33 ರಲ್ಲಿ ಜು.23 ರಿಂದ 30 ರ ವರೆಗೆ ಸಂಪೂರ್ಣ ಲಾಕ್ ಡೌನ್ ನ್ನ ಜಾರಿಯಾಗಲಿದೆ.
ಹೊರಗಡೆ ವಾರ್ಡ್ ನಿಂದ ಬರುವವರು ಹಾಗೂ ಈ ವಾರ್ಡ್ ನಿಂದ ಹೊರಗಡೆ ಹೋಗುವವರಿಗೆ ನಿರ್ಬಂಧಿಸಲಾಗಿದ್ದು, ಇಲ್ಲಿ ಬರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಒಂದು ವಾರದ ವರೆಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.ಬೆಕ್ಕಿನ ಕಲ್ಮಠ, ಬಿ.ಹೆಚ್ ರಸ್ತೆ, ಅಮೀರ್ ಅಹಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ, ಒಟಿ ರಸ್ತೆ, ಬೈಪಾಸ್ ರಸ್ತೆ, ತುಂಗ ಹೊಸ ಬ್ರಿಡ್ಜ್ ನ ವರೆಗೆ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದು ಚಿದಾನಂದ ವಠಾರೆ ತಿಳಿಸಿದ್ದಾರೆ.
ಆದರೆ ಕೆಲ ಅಗತ್ಯ ವಸ್ತುಗಳಿಗೆ ವಿನಾಯಿತಿಯನ್ನ ನೀಡಲಾಗಿದೆ. ಹಾಲಿನ ಅಂಗಡಿ, ಆಸ್ಪತ್ರೆಗಳು, ಮೆಡಿಕಲ್ ಶಾಪ್ ಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ ತರಕಾರಿ ಮಾರಾಟಕ್ಕೆ ಸಮಯ ನಿಗದಿ ಪಡಿಸಲಾಗಿದೆ. ತರಕಾರಿ, ದಿನಸಿ ಹಾಗು ಹಣ್ಣು ಮಾರಾಟಕ್ಕೆ ಬೆಳಿಗ್ಗೆ 5 ಗಂಟೆಯಿಂದ 10 ರವರೆಗೆ ಮಾತ್ರ ಅವಕಾಶ ನೀಡಲಾಗಿದೆ.ಕೊರೋನ ಸೋಂಕು ಅತಿ ಹೆಚ್ಚು ಈ ಭಾಗದಲ್ಲಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
C News TV Kannada News Online in cnewstv