Breaking News

ಜಿಲ್ಲೆಯಲ್ಲಿ ಒಂದೇ ದಿನ 126 ಕೊರೊನಾ ಪ್ರಕರಣಗಳು

 

ಶಿವಮೊಗ್ಗ : ಇಂದು ಜಿಲ್ಲೆಯಲ್ಲಿ ಬರೊಬ್ಬರಿ 126 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 1143 ಕ್ಕೆ ಏರಿಕೆಯಾಗಿದೆ. ಈ ಪೈಕಿ 589 ಜನರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ 534 ಸಕ್ರಿಯಾ ಪ್ರಕರಣಗಳಿವೆ.

ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಶಿವಮೊಗ್ಗ ನಗರದ ಹಳೆ ಶಿವಮೊಗ್ಗ ನಗರವನ್ನು ಸೀಲ್ ಡೌನ್ ಮಾಡಲಾಗಿದ್ದು, ಅದರೆ ಇಂದು ಸಚಿವ ಕೆ ಎಸ್ ಈಶ್ಚರಪ್ಪನವರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಆದೇಶವನ್ನು ರದ್ದುಗೊಳಿಸಿದ್ದಾರೆ.

ಸ್ಥಳೀಯರಿಂದ ಸೀಲ್ ಡೌನ್ ಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಸಹ ಇಲ್ಲ ಹೀಗಿರುವಾಗ ಹಳೇ ಶಿವಮೊಗ್ಗ ಸೀಲ್ ಡೌನ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳೂ ಎದ್ದಿದ್ದವು. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 8.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹಳೆ ಶಿವಮೊಗ್ಗ ಭಾಗದಲ್ಲಿನ ಸೀಲ್ ಡೌನ್ ವಾಪಸ್ ಪಡೆಯಲಾಗಿದೆ. ಇನ್ನುಮುಂದೆ ಎಲ್ಲಿಯೇ ಕರೋನಾ ಪಾಸಿಟಿವ್ ಕೇಸ್ ಕಂಡುಬಂದರೆ ಆ ಮನೆಯನ್ನು ಹಾಗೂ ಅಕ್ಕ ಪಕ್ಕದ ಪ್ರದೇಶವನ್ನು ಮಾತ್ರ ಸೀಲ್ ಡೌನ್ ಮಾಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

*