Breaking News

ಒಂದು ಗಂಟೆಯ ಮಳೆಗೆ ಪ್ರತಿಷ್ಟಿತರ ಬಡಾವಣೆಗೆ ನುಗ್ಗಿದ ನೀರು

 

ಶಿವಮೊಗ್ಗ: ಕೇವಲ ಒಂದು ಗಂಟೆ ಸುರಿದ ಮಳೆಗೆ ಶಿವಮೊಗ್ಗದ ಪ್ರತಿಷ್ಟಿತ ಬಡಾವಣೆಯೊಂದರ ಮನೆಯೊಳಗೆ ನೀರು ನುಗ್ಗಿದೆ.‌ ಕೇವಲ ಒಂದು ಗಂಟೆಯ ಮಳೆಗೆ ಪ್ರತಿಷ್ಟಿತ ಬಡಾವಣೆಯ ಮನೆಗಳಿಗೆ ನೀರು ನುಗ್ಗಲು ಕಾರಣವೇನು ಎಂಬ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. ಹೌದು ಇಂದು ಮಧ್ಯಾಹ್ನದ ಬಳಿಮ ಸುರಿದ ಮಳೆಗೆ ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಮೂಲ ಕಾರಣ ಬಾಕ್ಸ್ ಚರಂಡಿಗಳು ಸರಿಯಾಗಿ ಇಲ್ಲದಿರುವುದೇ ಕಾರಣವಾಗಿದೆ.

ಇಲ್ಲಿ ಪ್ರತಿಷ್ಟಿತರೇ ವಾಸವಾಗಿದ್ದಾರೆ. ಆದರೆ ಬಾಕ್ಸ್ ಚರಂಡಿಗಳನ್ನು ಸರಿಯಾಗಿ ಮಾಡಿಸಬೇಕಾದ ಮಹಾನಗರ ಪಾಲಿಕೆಯ ಈ ವಾರ್ಡ್ ನ ಸದಸ್ಯರು ನಾಪತ್ತೆಯಾಗಿದ್ದಾರೆ. ಹೀಗಾಗಿ ಚರಂಡಿ ಕಾಮಗಾರಿಗಳು ಒಂದೂ ಸರಿಯಾಗಿ ನಡೆದಿಲ್ಲ‌. ಈ ಕಾರಣದಿಂದಾಗಿ ಪ್ರತಿವರ್ಷ ಜೋರಾಗಿ ಮಳೆ ಬಂತೆಂದರೆ ಸಾಕು ಪ್ರತಿಷ್ಟಿತರೇ ಇರುವ ಗೋಪಾಲಗೌಡ ಬಡಾವಣೆ ಜಲಾವೃತವಾಗುತ್ತದೆ. ಇದು ಗೊತ್ತಿದ್ದರೂ ಈ ವಾರ್ಡ್ ನ ಪಾಲಿಕೆ‌ ಸದಸ್ಯ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ಪಾಲಿಕೆ ಸದಸ್ಯರು ಕಣ್ತೆರೆದು ಚರಂಡಿ ಸಮಸ್ಯೆ ಪರಿಹರಿಸಿ ಮನೆಗೆ ನೀರು ನುಗ್ಗುವುದನ್ನು ತಪ್ಪಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

*