ಸದ್ಯ ಶಿವಮೊಗ್ಗದಲ್ಲಿ ಹಾಟ್ ಸುದ್ದಿಯಾಗಿರುವುದು ಟಿಪ್ಪು ಜಯಂತಿ. ಜಿಲ್ಲಾಡಳಿತ ರಾಜ್ಯ ಸರ್ಕಾರದ ಸೂಚನೆಯಂತೆ ಟಿಪ್ಪು ಜಯಂತಿಯನ್ನು ನಾಳೆ ನಗರದ ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಗುತ್ತಿದೆ . ಇದಕ್ಕೆ ಪ್ರೊಟೋಕಾಲ್ ಪ್ರಕಾರ ಜನಪ್ರತಿನಿಧಿಗಳಿಗೆ ಆಹ್ವಾನವನ್ನು ನೀಡಲಾಗಿದೆ.ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಟಿಪ್ಪು ಜಯಂತಿ ಆಚರಣೆಯ ಬಗ್ಗೆ ವಿರೋಧವಿರುವ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತನ್ನು ಮಾಡಲಾಗಿದೆ.ಜಯಂತಿಯಲ್ಲಿ ವೇದಿಕೆ ಕಾರ್ಯಕ್ರಮ ಮಾತ್ರ ಇದ್ದು, ಯಾವುದೇ ರೀತಿಯ ಮೆರವಣಿಗೆ ಇರುವುದಿಲ್ಲ .ರಂಗಮಂದಿರದೊಳಗೆ ಪ್ರವೇಶಿಸಲು ಪಾಸ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ...
Read More »ಶಿವಮೊಗ್ಗ
ಸಮ್ಮಿಶ್ರ ಪಕ್ಷದ ಎದುರು ಅರಳಿದ ಕಮಲ
ಬಹಳ ಕುತೂಹಲ ಕೆರಳಿಸಿದ್ದ ಹಾಗೂ ರಾಷ್ಟ್ರ ಮತ್ತು ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು 52148 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ .ಇಂದು ನಡೆದ ಮತ ಎಣಿಕೆ ಕಾರ್ಯದ ಆರಂಭದಲ್ಲಿ ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ನಡುವೆ ತೀವ್ರ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿತ್ತು ..ಬಿವೈ ರಾಘವೇಂದ್ರ ಅವರು 5,43,306ಮತಗಳನ್ನು ಪಡೆದಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪನವರು 4,91,158 ಮತಗಳನ್ನು ಪಡೆದಿದ್ದಾರೆ. ಇನ್ನು ಜೆಡಿಯು ಅಭ್ಯರ್ಥಿ ಮಹಿಮಾ ಪಾಟೀಲ್ ಅವರು ಕೇವಲ 8,713 ...
Read More »ಬಿಜೆಪಿಯಲ್ಲಿ ಸ್ಫೋಟಗೊಂಡ ಭಿನ್ನಮತ..
ಶಿವಮೊಗ್ಗ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು, ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಇಂದಿಗೂ ನಾನು ಒಪ್ಪಿಕೊಂಡಿಲ್ಲ. ಇದ್ದಕ್ಕಿದ್ದಂತೆ ಒಂದೂವರೆ ವರ್ಷದ ಹಿಂದೆ ನನ್ನನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿದ್ರು. ಇದೀಗ ಚುನಾವಣೆ ಬರುತ್ತಿದ್ದಂತೆ ಮತ್ತೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಹೀಗಾಗಿ ನಾನು ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿಲ್ಲ.ಯಡಿಯೂರಪ್ಪ ಅವರು ಸರ್ಕಾರ ಉಳಿಸಬಹುದು ಹಾಗೆಯೇ ಕೆಡವಬಹುದು. ಆದ್ರೆ, ಮನಸುಗಳನ್ನು ಕಟ್ಟಲು ಆಗುವುದಿಲ್ಲ ನನ್ನ ಸೈದ್ದಾಂತಿಕ ನಿಲುವು ಹಾಗೂ ನನ್ನ ಮನಸಾಕ್ಷಿ ಒಪ್ಪುವುದಿಲ್ಲ. ನಾನು ...
Read More »ಶಿವಮೊಗ್ಗದಲ್ಲಿ ಮತದಾನ ಮಾಡಿದ ರಾಜಕೀಯ ಮುಖಂಡರು..
ಶಿವಮೊಗ್ಗ ಲೋಕಸಭಾ ಉಪ-ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು. ನಕ್ಸಲ್ ಏರಿಯಾದಲ್ಲೂ ಕೂಡ ಶಾಂತಿಯುತ ಮತದಾನವಾಗಿದೆ. ಯಾವುದೇ ರೀತಿಯ ಅಹಿಿಂತ ಕರ ಘಟನೆೆಗಳು ನಡೆದಿಲ್ಲ.ದುರಸ್ಥಿ ಹಿನ್ನೆಲೆಯಲ್ಲಿ 20 ಬಿಯು, 36ಸಿಯು, 53 ವಿವಿ ಪ್ಯಾಟ್ ಬದಲಾಯಿಸಲಾಗಿದೆ ಎಂದರು.ಇನ್ನೂಶಿ ವಮೊಗ್ಗ ಗ್ರಾಮಾಂತರ ಭಾಗದಲ್ಲಿ 69.91%. ಭದ್ರಾವತಿ 56.98%. ಶಿವಮೊಗ್ಗ ನಗರ 51.45%. ಶಿಕಾರಿಪುರ 79.19%.ಸೊರಬ 78.05%,ತೀರ್ಥಹಳ್ಳಿ 66.08%, ಸಾಗರ 58.38%,ಬೈಂದೂರು 55.78% ಹಾಗೂ ಒಟ್ಟು ಜಿಲ್ಲೆಯಲ್ಲಿ 65.82 % ಮತದಾನ ವಾಗಿದೆ.
Read More »ಮುದ್ದಿನಕೊಪ್ಪ ಗ್ರಾಮದ ಕೆರೆಯಲ್ಲಿ ಶವ ಪತ್ತೆ
ಶಿವಮೊಗ್ಗದ ಹೊರವಲಯ ಮುದ್ದಿನಕೊಪ್ಪ ಗ್ರಾಮದ ದಾಸನಕಟ್ಟೆ ಕೆರೆಯಲ್ಲಿ ಶವವೊಂದು ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನು ಸೋಮಿನಕೊಪ್ಪದ ವಾಸಿ ಸುರಹೊನ್ನೆ ಬಾಬು ಎಂದು ಗುರುತಿಸಲಾಗಿದೆ. ಯಾರೋ ದುಷ್ಕರ್ಮಿಗಳು ಹಗ್ಗದಿಂದ ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ , ಯಾರಿಗೂ ತಿಳಿಯಬಾರದು ಎಂದು ಕೆರೆಯಲ್ಲಿ ತಂದು ಹಾಕಿದ್ದಾರೆ ಈ ಘಟನೆ ನಡೆದು ಸುಮಾರು 5 ರಿಂದ 6 ದಿನಗಳು ಆಗಿದೆ. ಶವವನ್ನು ಕೆರೆಯ ನೀರಿನಲ್ಲಿ ಹಾಕಿದ್ದರಿಂದ ಊದಿಕೊಂಡು ಕೊಳೆತು ವಾಸನೆ ಬರುತ್ತಿದೆ. ಪ್ರಕರಣವು ಶಿವಮೊಗ್ಗ ಕುಂಸಿ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ
Read More »ಕಣ್ಣೀರು ಒರೆಸಬೇಕಾದ ಸಿಎಂ ಕಣ್ಣೀರು ಸುರಿಸುತ್ತಿದ್ದಾರೆ
ರಾಜ್ಯದ ಜನರ ಹಾಗೂ ಬಡವರ ಕಣ್ಣೀರು ಒರೆಸಬೇಕಾದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾವೇ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತೀ ಶೆಟ್ಟಿ ಲೇವಡಿ ಮಾಡಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಣ್ಣೀರು ಸುರಿಸುವ ಮೂಲಕ ಜನರಲ್ಲಿ ಸಿಂಪತಿಯನ್ನು ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಇವರು, ಬಡವರ, ಶೋಷಿತರ ಹಾಗೂ ಸಂಕಷ್ಟದಲ್ಲಿರುವ ಜನರ ಕಣ್ಣೀರನ್ನು ಒರೆಸಬೇಕು. ಆ ಕೆಲಸ ಇವರಿಂದ ಆಗಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ...
Read More »ಯಡಿಯೂರಪ್ಪನವರೇ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ – ಹೆಚ್.ಡಿ.ಕೆ.
ಶಿವಮೊಗ್ಗ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್.ಡಿ.ಕೆ.ಯಡಿಯೂರಪ್ಪನವರು ಮಾತನಾಡುವ ವೇಳೆ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದರು. ಯಡಿಯೂರಪ್ಪ ಎಲ್ಲೆಲ್ಲಿ ಏನೇನು ಮಾಡಿದ್ದಿರಿ ಎಂಬುದನ್ನು ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ ಕುಳಿತು ಎಲ್ಲವನ್ನು ನೆನಪಿಸಿಕೊಳ್ಳಿ. ನಾನು ಅಧಿಕಾರಿಗಳನ್ನು ಜಾತಿ ಹೆಸರಿನಲ್ಲಿ ಗುರುತಿಸಿಲ್ಲ. ಬದಲಾಗಿ ಅವರ ಮೆರಿಟ್ ಆಧಾರದಲ್ಲಿ ವರ್ಗಾವಣೆ ಮಾಡಿದ್ದೇನೆ. ವರ್ಗಾವಣೆ ಬಗ್ಗೆ ಮಾತನಾಡುವ ಯಡಿಯೂರಪ್ಪ ನೀವು ಮೊದಲು ದಾಖಲೆ ಪರಿಶೀಲಿಸಿ ಎಂದರು. ಇನ್ನೂ ನಿಮ್ಮ ರೀತಿಯಲ್ಲಿ ನಾನು ಅಧಿಕಾರ ನಡೆಸಿಲ್ಲ. ನಾನು ಗ್ರಾಮ ವಾಸ್ತವ್ಯ ಮಾಡುತ್ತಿದ್ದರೆ, ನೀವು ಬೆಂಗಳೂರಲ್ಲಿ ಕುಳಿತು ಏನು ...
Read More »ಹೆಚ್.ಡಿ ಕುಮಾರಸ್ವಾಮಿ ವಿರುದ್ಧ MeToo ಆರೋಪ ಬರಬಹುದು – ಕುಮಾರ್ ಬಂಗಾರಪ್ಪ
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಒಂದು ಪಕ್ಷದವರ ವಿರುದ್ಧ ಮತ್ತೊಂದು ಪಕ್ಷದವರು ಕೆಸರೆರಚಾಟ ಮಾಡುವುದು ಸಾಮಾನ್ಯವಾಗಿತ್ತು.ಎಷ್ಟೇ ರಾಜಕೀಯ ವೈಷಮ್ಯವಿದ್ದರೂ ಯಾವೊಬ್ಬ ನಾಯಕರು ಸಹ ವೈಯಕ್ತಿಕ ವಿಚಾರವನ್ನು ಇದುವರೆಗೂ ತೆಗೆದಿರಲಿಲ್ಲ. ಅದರೆ ಸೊರಬದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಬಂಗಾರಪ್ಪ ಕುಟುಂಬದ ವೈಯಕ್ತಿಕ ವಿಚಾರ ಮಾತನಾಡಿರುವುದನ್ನು ಕುಮಾರ ಕುಮಾರ ಗಂಭೀರವಾಗಿ ತೆಗೆದುಕೊಂಡಿದ್ದಾರೆ.ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಆಧಾರವಿಲ್ಲದೆ ನಿಂದನೆಗೆ ಮುಂದಾಗಿದ್ದಾರೆ.. ಇತ್ತೀಚಿಗೆ ಬಹಳ ಸುದ್ದಿಯಾಗಿರುವ MeToo ಅಭಿಯಾನದ ಉದಾಹರಣೆ ತೆಗೆದುಕೊಂಡಿರೋ ಕುಮಾರ್ ಬಂಗಾರಪ್ಪ, ಹೆಚ್.ಡಿ ಕುಮಾರಸ್ವಾಮಿ ವಿರುದ್ಧಾನೂ MeToo ಆರೋಪ ಕೇಳಿ ಬರಬಹುದು ಎಂದು ಗಂಭೀರ ಆರೋಪ ...
Read More »ಅಭ್ಯರ್ಥಿಯ ಪರ ಪ್ರಚಾರ ಕಾರ್ಯದಲ್ಲಿ ನಟಿ ಪೂಜಾ ಗಾಂಧಿ
ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಇಂದು ಚಿತ್ರನಟಿ ಪೂಜಾ ಗಾಂಧಿ ತಮ್ಮ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಪಕ್ಷದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಪರ ಪ್ರಚಾರವನ್ನು ನಡೆಸಿದರು
Read More »
C News TV Kannada News Online in cnewstv