Breaking News

ಸಮ್ಮಿಶ್ರ ಪಕ್ಷದ ಎದುರು ಅರಳಿದ ಕಮಲ

ಬಹಳ ಕುತೂಹಲ ಕೆರಳಿಸಿದ್ದ ಹಾಗೂ ರಾಷ್ಟ್ರ ಮತ್ತು ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು 52148 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ .ಇಂದು ನಡೆದ ಮತ ಎಣಿಕೆ ಕಾರ್ಯದ ಆರಂಭದಲ್ಲಿ ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ನಡುವೆ ತೀವ್ರ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿತ್ತು ..ಬಿವೈ ರಾಘವೇಂದ್ರ ಅವರು 5,43,306ಮತಗಳನ್ನು ಪಡೆದಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪನವರು 4,91,158 ಮತಗಳನ್ನು ಪಡೆದಿದ್ದಾರೆ. ಇನ್ನು ಜೆಡಿಯು ಅಭ್ಯರ್ಥಿ ಮಹಿಮಾ ಪಾಟೀಲ್ ಅವರು ಕೇವಲ 8,713 ಮತಗಳನ್ನು ಪಡೆದಿದ್ದಾರೆ ಹಾಗೆ ಪ್ರತ್ಯೇಕ ಅಭ್ಯರ್ಥಿಯ ಆಗಿರುವಂತಹ ಶಶಿಕುಮಾರ್ ಗೌಡ ಅವರು 17,189 ಮತಗಳನ್ನು ಪಡೆದಿದ್ದಾರೆ ಇನ್ನು ನೋಟಾಗೆ 10,687 ಮತಗಳು ದೊರೆತಿವೆ.. ಬಿವೈ ರಾಘವೇಂದ್ರ ಅವರು ಗೆಲ್ಲುವ ಮೂಲಕ ಶಿವಮೊಗ್ಗ ಬಿಜೆಪಿಯ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ

ಸಮ್ಮಿಶ್ರ ಪಕ್ಷದ ಎದುರು ಅರಳಿದ ಕಮ

Leave a Reply

Your email address will not be published. Required fields are marked *

*