Breaking News

ಮುದ್ದಿನಕೊಪ್ಪ ಗ್ರಾಮದ ಕೆರೆಯಲ್ಲಿ ಶವ ಪತ್ತೆ

 

ಶಿವಮೊಗ್ಗದ ಹೊರವಲಯ ಮುದ್ದಿನಕೊಪ್ಪ ಗ್ರಾಮದ ದಾಸನಕಟ್ಟೆ ಕೆರೆಯಲ್ಲಿ ಶವವೊಂದು ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನು ಸೋಮಿನಕೊಪ್ಪದ ವಾಸಿ ಸುರಹೊನ್ನೆ ಬಾಬು ಎಂದು ಗುರುತಿಸಲಾಗಿದೆ. ಯಾರೋ ದುಷ್ಕರ್ಮಿಗಳು ಹಗ್ಗದಿಂದ ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ , ಯಾರಿಗೂ ತಿಳಿಯಬಾರದು ಎಂದು ಕೆರೆಯಲ್ಲಿ ತಂದು ಹಾಕಿದ್ದಾರೆ ಈ ಘಟನೆ ನಡೆದು ಸುಮಾರು 5 ರಿಂದ 6 ದಿನಗಳು ಆಗಿದೆ. ಶವವನ್ನು ಕೆರೆಯ ನೀರಿನಲ್ಲಿ ಹಾಕಿದ್ದರಿಂದ ಊದಿಕೊಂಡು ಕೊಳೆತು ವಾಸನೆ ಬರುತ್ತಿದೆ. ಪ್ರಕರಣವು ಶಿವಮೊಗ್ಗ ಕುಂಸಿ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

*