Breaking News

ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಕರಿಯಣ್ಣ ಇನ್ನಿಲ್ಲ.

  ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದ ಕರಿಯಣ್ಣ ( 74 )ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗ ವಿನೋಬನಗರದಲ್ಲಿರುವ ಮನೆಯಲ್ಲಿ ಮೃತರ ಅಂತಿಮ‌ ದರ್ಶನಕ್ಕೆ ಅವಕಾಶವಿದ್ದು, ನಾಳೆ‌ ಅಂತ್ಯಕ್ರಿಯೆ ನಡೆಯಲಿದೆ.

Read More »

ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಪಡೆಯುತ್ತಿದ್ದಂತೆ, ಶಿವಮೊಗ್ಗದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ, ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ರಾಹುಲ್ ಗಾಂಧಿ, ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಘೋಷಣೆ ಕೂಗಿದರು.

Read More »

ಕೇಂದ್ರ ಸರ್ಕಾರಕ್ಕೆ ರಾಮ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು : ಪೇಜಾವರ ಸ್ವಾಮೀಜಿ

  ನಗರದ ಕೋಟೆ ರಸ್ತೆಯ ವಾಸವಿ ಶಾಲಾ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪೇಜಾವರ ಶ್ರೀಗಳು, ಹಿಂದೆ ಒಬ್ಬ ರಾಮನಿಂದ ರಾಮ ರಾಜ್ಯ ಆಯಿತು. ಈಗ ಎಲ್ಲರೂ ರಾಮನಾಗಬೇಕಿದೆ. ಇದು ಯಥಾ ರಾಜ ತಥಾ ಪ್ರಜಾ ಎಂಬ ಕಾಲ ಅಲ್ಲ. ಯಥಾ ಪ್ರಜಾ ತಥಾ ರಾಜ ಎಂಬ ಕಾಲ, ಹಾಗಾಗಿ ರಾಮ ಮಂದಿರದ ವಿಷಯದಲ್ಲಿ ಕೋರಿಕೆ ಆಗಬಾರದು. ಜನಾಗ್ರಹ ಮತ್ತು ಆದೇಶ ಆಗಬೇಕು. ನನಗೆ ...

Read More »

ಮಾಜಿ ಹಾಗೂ ಹಾಲಿ ಕಾರ್ಪೋರೇಟರ್ ಗಳ ನಡುವೆ ಜಟಾಪಟಿ…

ಬೊಮ್ಮನಕಟ್ಟೆಯಲ್ಲಿ ಪಾಲಿಕೆ ವತಿಯಿಂದ ಹೊಸ ಸೇತುವೆ ನಿರ್ಮಾಣದ ಉದ್ಘಾಟನೆಗೆ ಮಾಜಿ ಕಾರ್ಪೊರೇಟರ್ ಮಂಜುನಾಥ್ ಹಾಗೂ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಅವರಿಗೆ ಅಭಿನಂದನಾ ಫ್ಲೆಕ್ಸ್ ಅನ್ನು ಕಾರ್ಯಕರ್ತರು ಹಾಕಿದ್ದರೂ. ಆದರೆ ಈ ಸೇತುವೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ ಹಾಗಾಗಿ ಹಾಕಿರುವ ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಕೆಂದು ಬಿಜೆಪಿಯ ಹಾಲಿ ಕಾರ್ಪೋರೇಟರ್ಗಳು ಒತ್ತಾಯಿಸಿದ್ದಾರೆ. ಆದರೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಯುವ ತನಕ ಬಂದಿದೆ. ಇಬ್ಬರು ಕಾರ್ಪೊರೇಟರ್ ಗಳು ಒಬ್ಬರ ಮೇಲೊಬ್ಬರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ...

Read More »

ಬಿಎಸ್ ವೈ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ : ಆಯನೂರು ಮಂಜುನಾಥ್

ರಾಜಕೀಯ ಪ್ರೇರಿತವಾಗಿ ವಕೀಲರಾಗಿದ್ದ ಸಿರಾಜುದ್ದೀನ್ ಭಾಷ ಹಾಗೂ ಬಾಲರಾಜ್ ಅವರು ಜೆಡಿಎಸ್ ಪಕ್ಷದ ಬೆಂಬಲದಿಂದ ಬಿಎಸ್ ವೈ ವಿರುದ್ದ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಹಿಂದಿನ ರಾಜ್ಯಪಾಲ ಭಾರದ್ವಾಜ್ ರ ಅನುಮತಿ ಪಡೆದು ನ್ಯಾಯಾಲಯದಲ್ಲಿ ಬಿಎಸ್ ವೈ ವಿರುದ್ದ ರಾಜಕೀಯ ಪ್ರೇರಿತವಾಗಿ ದಾವೆ ಹೂಡಲಾಗಿತ್ತು. ರಾಜ್ಯ ಹೈಕೋರ್ಟ್ ನಲ್ಲಿ ಡಿನೋಟಿಫಕೇಷನ್ ಪ್ರಕರಣ ವಜಾಗೊಳಿಸಿತ್ತು. ಮತ್ತೆ ಸುಪ್ರೀಂ ಕೋರ್ಟ್ ಗೆ ದಾವೆ ಹೂಡಿದ್ದು ಅದನ್ನು ಸಹ ನಿನ್ನೆ ನ್ಯಾಯಾಲಯ ವಜಾಗೊಳಿಸಿದೆ. ಇನ್ನು ಮುಂದೆ ಬಿಎಸ್ ವೈ ನ ಜೈಲಿಗೆ ಹೋಗಿಬಂದರು ಎಂದು ...

Read More »

ಸುತ್ತೂರು ಮಠ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆ.

ಶಿವಮೊಗ್ಗ ವೆಂಕಟೇಶನಗರದ ಬಸವಕೇಂದ್ರದಲ್ಲಿ ಇಂದು ಸುತ್ತೂರು ಮಠ ಕಾರ್ಯಕ್ರಮದ ಕಾರ್ಯಾಲಯವನ್ನು ಶಿವಮೊಗ್ಗ ಬಿಜೆಪಿ ನೂತನ ಲೋಕಸಭಾ ಸಂಸದರಾದ ಬಿ.ವೈ ರಾಘವೇಂದ್ರ ರವರು ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ಎಸ್ ರುದ್ರೇಗೌಡ್ರು. ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಮಹಾಸ್ವಾಮಿಗಳು. ರಾಜಶೇಖರ್. ಬೆನಕಪ್ಪ.  ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Read More »

ಭತ್ತ ಖರೀದಿಗೆ ನೋಂದಣಿ ಕಾರ್ಯ ಆರಂಭ: ಕೆ.ಎ ದಯಾನಂದ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಗೆ ನೋಂದಣಿ ಕಾರ್ಯವನ್ನು ಜಿಲ್ಲೆಯ ಶಿವಮೊಗ್ಗ ಭದ್ರಾವತಿ ಸಾಗರ ಸೊರಬ ಶಿಕಾರಿಪುರ ಹೊಸನಗರ ಮತ್ತು ತೀರ್ಥಹಳ್ಳಿಯ, 7 ಎಪಿಎಂಸಿಗಳಲ್ಲಿ ಡಿಸೆಂಬರ್ 5 ರಿಂದ 15 ರವರೆಗೆ ನಡೆಯಲಿದೆ. ಸಾಮಾನ್ಯ ಭತ್ತಕ್ಕೆ 1750 ರೂಪಾಯಿ ಹಾಗೂ 1770 ರೂಪಾಯಿ ಎ ಗ್ರೇಡ್ ಭತ್ತಕ್ಕೆ ನಿಗದಿಪಡಿಸಲಾಗಿದೆ. ಮತ್ತು ಭತ್ತ ಖರೀದಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ರೈತರು ನೋಂದಣಿ ಸಂದರ್ಭದಲ್ಲಿ ಅರ್ಧ ದಿಂದ 1 ಕೆಜಿವರೆಗೆ ಭತ್ತದ ಸ್ಯಾಂಪಲ್ ನೀಡಬೇಕು. ಸ್ಯಾಂಪಲ್ ಆಧರಿಸಿ ಗುಣಮಟ್ಟ ನಿರ್ಮಿಸಿದ ನಂತರ ಅದೇ ಗುಣಮಟ್ಟದ ಭತ್ತವನ್ನು ...

Read More »

ಮಲೆನಾಡಿನ ಉತ್ಕೃಷ್ಟ ಬೆಳೆಗು ಬಂತು ಕಂಟಕ…

ಅಡಿಕೆ ಇಂದು ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುವ ಮುಖ್ಯ ಬೆಳೆ. ಇದೊಂದು ತೋಟಗಾರಿಕ ಬೆಳೆಯಾಗಿದ್ದು, ಇದರ ಮೂಲ ಮಲೇಷ್ಯಾ ದೇಶ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. ಅದರೆ ಕರ್ನಾಟಕ ರಾಜ್ಯದ್ದೇ ಅಡಿಕೆ ಬೆಳೆಯಲ್ಲಿ ಸಿಂಹಪಾಲು. ಶಿವಮೊಗ್ಗ ಜಿಲ್ಲೆಯ ಸಾಗರ, ತೀಧಹಳ್ಳಿ, ಶಿರಸಿ ಭಾಗಗಳಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಾರೆ. ಅನೇಕ ರೈತರ ಬದುಕು ಈ ಅಡಿಕೆ ಬೆಳೆಯನ್ನೇ ಅವಲಂಬಿಸಿದೆ..ಮಾಹಿತಿಗಳ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ೨೦,೦೦೦ ಹೆಕ್ಟೇರ್ ಪ್ರದೇಶಗಳಲ್ಲಿ ಅಡಿಕೆ ಬೆಳೆಯುತ್ತಿದ್ದರು. ಅದರೆ ಈಗ ೪೭ ಹೆಕ್ಟೇರ್` ಪ್ರದೇಶಕ್ಕೆ ವಿಸ್ತಾರಗೊಂಡಿದೆ. ನಮ್ಮ ಜಿಲ್ಲೆಯ ...

Read More »

ಪಾಲಿಕೆಯಲ್ಲಿ ಅರಳಿದ ಕಮಲ…

ಶಿವಮೊಗ್ಗ ಮೇಯರ್ ಆಗಿ ಬಿಜೆಪಿಯ ಲತಾಗಣೇಶ್ ಮತ್ತು ಉಪಮೇಯರ್ ಅಗಿ ಎಸ್ ಎನ್ ಚನ್ನಬಸಪ್ಪ ಆಯ್ಕೆಗೊಂಡರು.ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ಚುನಾವಣೆ ಅಧಿಕಾರಿಗಳಾಗಿ ಭಾಗವಹಿಸಿ ಚುನಾವಣೆ ಪ್ರಕ್ರಿಯೆ ಆರಂಭ ಮಾಡಿದರು. ಮೇಯರ್ ಸ್ಥಾನ ಎಸ್.ಸಿ. ಮಹಿಳೆಗೆ ಮೀಸಲಾತಿ ಆದುದರರಿಂದ ಬಿಜೆಪಿಯಿಂದ ಲತಾ ಗಣೇಶ್ ಮತ್ತು ಕಾಂಗ್ರೆಸ್ ನಿಂದ ಮಂಜುಳಾ ಶಿವಣ್ಣ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಲತಾಗಣೇಶ್ (6 ನೇ ವಾರ್ಡ್) 26 ಮತಗಳಿಸಿದ್ದರು. ಕಾಂಗ್ರೆಸ್ ನ ಮಂಜುಳಾ ಶಿವಣ್ಣರವರಿಗೆ (26ನೇ ವಾರ್ಡ್ ) 12 ಮತಗಳು ಹಾಗೂ ಸ್ವತಂತ್ರ ಅಭ್ಯರ್ಥಿಯ ಒಂದು ಮತ ...

Read More »