ರಾಜಕೀಯ ಪ್ರೇರಿತವಾಗಿ ವಕೀಲರಾಗಿದ್ದ ಸಿರಾಜುದ್ದೀನ್ ಭಾಷ ಹಾಗೂ ಬಾಲರಾಜ್ ಅವರು ಜೆಡಿಎಸ್ ಪಕ್ಷದ ಬೆಂಬಲದಿಂದ ಬಿಎಸ್ ವೈ ವಿರುದ್ದ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಹಿಂದಿನ ರಾಜ್ಯಪಾಲ ಭಾರದ್ವಾಜ್ ರ ಅನುಮತಿ ಪಡೆದು ನ್ಯಾಯಾಲಯದಲ್ಲಿ ಬಿಎಸ್ ವೈ ವಿರುದ್ದ ರಾಜಕೀಯ ಪ್ರೇರಿತವಾಗಿ ದಾವೆ ಹೂಡಲಾಗಿತ್ತು. ರಾಜ್ಯ ಹೈಕೋರ್ಟ್ ನಲ್ಲಿ ಡಿನೋಟಿಫಕೇಷನ್ ಪ್ರಕರಣ ವಜಾಗೊಳಿಸಿತ್ತು. ಮತ್ತೆ ಸುಪ್ರೀಂ ಕೋರ್ಟ್ ಗೆ ದಾವೆ ಹೂಡಿದ್ದು ಅದನ್ನು ಸಹ ನಿನ್ನೆ ನ್ಯಾಯಾಲಯ ವಜಾಗೊಳಿಸಿದೆ. ಇನ್ನು ಮುಂದೆ ಬಿಎಸ್ ವೈ ನ ಜೈಲಿಗೆ ಹೋಗಿಬಂದರು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮಾತನಾಡಿದರೆ ಅದು ನ್ಯಾಯಾಂಗ ನಿಂದನೆ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
C News TV Kannada News Online in cnewstv