ಅಡಿಕೆ ಇಂದು ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುವ ಮುಖ್ಯ ಬೆಳೆ. ಇದೊಂದು ತೋಟಗಾರಿಕ ಬೆಳೆಯಾಗಿದ್ದು, ಇದರ ಮೂಲ ಮಲೇಷ್ಯಾ ದೇಶ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. ಅದರೆ ಕರ್ನಾಟಕ ರಾಜ್ಯದ್ದೇ ಅಡಿಕೆ ಬೆಳೆಯಲ್ಲಿ ಸಿಂಹಪಾಲು. ಶಿವಮೊಗ್ಗ ಜಿಲ್ಲೆಯ ಸಾಗರ, ತೀಧಹಳ್ಳಿ, ಶಿರಸಿ ಭಾಗಗಳಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಾರೆ. ಅನೇಕ ರೈತರ ಬದುಕು ಈ ಅಡಿಕೆ ಬೆಳೆಯನ್ನೇ ಅವಲಂಬಿಸಿದೆ..ಮಾಹಿತಿಗಳ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ೨೦,೦೦೦ ಹೆಕ್ಟೇರ್ ಪ್ರದೇಶಗಳಲ್ಲಿ ಅಡಿಕೆ ಬೆಳೆಯುತ್ತಿದ್ದರು. ಅದರೆ ಈಗ ೪೭ ಹೆಕ್ಟೇರ್` ಪ್ರದೇಶಕ್ಕೆ ವಿಸ್ತಾರಗೊಂಡಿದೆ. ನಮ್ಮ ಜಿಲ್ಲೆಯ ವಾರ್ಷಿಕ ಸರಾಸರಿ ಉತ್ಪಾದನೆ ಒಂದು ಲಕ್ಷ ಟನ್ ದಾಟಿದೆ. ರಾಜ್ಯದ ಅಡಿಕೆ ಉತ್ಪಾದನೆಯಲ್ಲಿ ನಮ್ಮ ಜಿಲ್ಲೆಯ ಉತ್ಪಾದನೆ ಶೇ.೨೮ ಕ್ಕೂ ಮೀರುತ್ತದೆ..
ನಮ್ಮ ಜಿಲ್ಲೆಯ ಅಡಿಕೆಗಳು ಹೊರರಾಜ್ಯಕ್ಕೆ ಹೋಗುವುದು, ಹೊರ ರಾಜ್ಯದ ಅಡಿಕೆಗಳು ನಮ್ಮ ಜಿಲ್ಲೆಗೆ ಬರುವುದು ಸಾಮಾನ್ಯ. ಅದರೆ ಈ ಬಾರಿ ಶಿವಮೊಗ್ಗ ಎಪಿಎಂಸಿಗೆ ಅಕ್ರಮವಾಗಿ ಹೊರರಾಜ್ಯಗಳ ಕಳಪೆ ಅಡಕೆಗಳು ಬರುತ್ತೀವೆ. ಪ್ರತಿ ದಿನ ಶಿವಮೊಗ್ಗಕ್ಕೆ ಸರಿಸುಮಾರು 1200 ಲೋಡ್ ಕಳಪೆ ಅಡಿಕೆಗಳು ಬರುತ್ತೀವಿ. ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳದಿಂದ ಶಿವಮೊಗ್ಗಕ್ಕೆ ಕಳಪೆ ಅಡಕೆಗಳು ಬರುತ್ತಿದೆ ಎನ್ನಲಾಗುತ್ತಿದೆ.ಇವುಗಳನ್ನು ನಮ್ಮ ಮಲೆನಾಡಿನ ಉತ್ಕೃಷ್ಟ ಅಡಕೆಯೊಂದಿಗೆ ಸೇರಿಸಿ ಮಾರಾಟ ಮಾಡುತ್ತಿದ್ದಾರೆ.
ಶಿವಮೊಗ್ಗದಿಂದ ಗುಜರಾತ್ ಗೆ ಮಾರಾಟವಾಗಿದ್ದ ಐದು ಲೋಡ್ ಅಡಕೆ ಇದೀಗ ತಿರಸ್ಕೃತವಾಗಿದೆ. ಶ್ರೀಲಂಕಾ ಮಾಜಿ ಕ್ರಿಕೆಟಿಗ ಜಯಸೂರ್ಯ ಬೇನಾಮಿ ಕಂಪನಿ ಮೂಲಕ ಮಲೇಷ್ಯಾದಿಂದ ಅಡಕೆ ಖರೀದಿಸಿ ಶ್ರೀಲಂಕಾ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನದಲ್ಲಿ ಶಿವಮೊಗ್ಗದಲ್ಲೂ ಸಹ ಈ ಕಳಪೆ ಅಡಿಕೆಗಳ ಪ್ರಕರಣ ಬೆಳಕಿಗೆ ಬಂದಿರುವುದು ಶೋಚನೀಯ ಎಂದರು ತಪ್ಪಲ್ಲ. ಮಲೇಷ್ಯಾದಿಂದ ಭಾರತಕ್ಕೆ ಅಡಕೆ ಆಮದು ಮಾಡಿಕೊಳ್ಳಲು ಶೇಕಡಾ 110 ರಷ್ಟು ಆಮದು ಸುಂಕ ಪಾವತಿಸಬೇಕು.ಅದೇ ಶ್ರೀಲಂಕಾದಿಂದ ಅಡಿಕೆ ಆಮದು ಮಾಡಿಕೊಳ್ಳಲು ಆಮದು ಸುಂಕವಿಲ್ಲ.ಇದೇ ಕಾರಣವನ್ನು ದುರುಪಯೋಗ ಮಾಡಿಕೊಂಡು ಕಳಪೆ ಅಡಿಕೆಗಳನ್ನು ಮಾರಟ ಮಾಡಲಾಗುತ್ತಿದೆ ಎಂಬ ಶಂಖೆ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಕ್ಕೆ ಅಸ್ಸಾಂ, ಪಶ್ಚಿಮ ಬಂಗಾಳದಿಂದ ಕಳಪೆ ಗುಣಮಟ್ಟದ ಅಡಕೆ ಸರಬರಾಜಾಗುತ್ತಿರುವುದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಶ್ರೀಲಂಕಾದಿಂದ ನಾಗ್ಪುರಕ್ಕೆ ಬರುತ್ತಿದ್ದ ಮಲೇಷ್ಯಾದ ಕಳಪೆ ಅಡಕೆ ಈ ಮೂರು ರಾಜ್ಯಗಳಿಂದ ಶಿವಮೊಗ್ಗಕ್ಕೆ ಬರುತ್ತಿದೆಯೇ ಎಂಬ ಬಗ್ಗೆ ಅನುಮಾನಗಳು ಆರಂಭಗೊಂಡಿವೆ. ಆಮದು ಶುಲ್ಕವನ್ನು ಬಂಡವಾಳ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ.
ದುಗ್ಗಪ್ಪ ಗೌಡ, ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ
ಒಟ್ಟಿನಲ್ಲಿ ಮಲೆನಾಡಿನ ಉತ್ಕೃಷ್ಟ ಬೆಳೆಯಾದ ಅಡಿಕೆ ಬೆಳೆಯಲು ವಂಚಕರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇನ್ನಾದರು ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮಗೊಳ್ಳಲಿ ಎಂಬುದು ನಮ್ಮ ಅಶಯ..
Recent Comments