Breaking News

ಮಾಜಿ ಹಾಗೂ ಹಾಲಿ ಕಾರ್ಪೋರೇಟರ್ ಗಳ ನಡುವೆ ಜಟಾಪಟಿ…

ಬೊಮ್ಮನಕಟ್ಟೆಯಲ್ಲಿ ಪಾಲಿಕೆ ವತಿಯಿಂದ ಹೊಸ ಸೇತುವೆ ನಿರ್ಮಾಣದ ಉದ್ಘಾಟನೆಗೆ ಮಾಜಿ ಕಾರ್ಪೊರೇಟರ್ ಮಂಜುನಾಥ್ ಹಾಗೂ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಅವರಿಗೆ ಅಭಿನಂದನಾ ಫ್ಲೆಕ್ಸ್ ಅನ್ನು ಕಾರ್ಯಕರ್ತರು ಹಾಕಿದ್ದರೂ.
ಆದರೆ ಈ ಸೇತುವೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ ಹಾಗಾಗಿ ಹಾಕಿರುವ ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಕೆಂದು ಬಿಜೆಪಿಯ ಹಾಲಿ ಕಾರ್ಪೋರೇಟರ್ಗಳು ಒತ್ತಾಯಿಸಿದ್ದಾರೆ. ಆದರೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಯುವ ತನಕ ಬಂದಿದೆ. ಇಬ್ಬರು ಕಾರ್ಪೊರೇಟರ್ ಗಳು ಒಬ್ಬರ ಮೇಲೊಬ್ಬರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಒಟ್ಟಿನಲ್ಲಿ ಉದ್ಘಾಟನೆಗೂ ಮುನ್ನವೇ ಸೇತುವೆ ಸುದ್ದಿಯಾಗಿದೆ .

ನಾನು ಪಾಲಿಕೆ ಸದಸ್ಯರಾಗಿದ್ದಾಗ ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಅನುಮತಿ ದೊರೆತಿತ್ತು. ಅದರಂತೆ ಕಾಮಗಾರಿ ಆರಂಭಿಸಲು ನಾನು ನನ್ನ ಜಮೀನಿನಲ್ಲಿ ಪರ್ಯಾಯ ರಸ್ತೆಗೆ ಜಾಗ ಬಿಟ್ಟುಕೊಟ್ಟಿದ್ದೆ.ಪಾಲಿಕೆ ಸೇತುವೆ ಕಾಮಗಾರಿಗೆ ಮೂರು ತಿಂಗಳುವರೆಗೆ ಪರ್ಯಾಯ ರಸ್ತೆಗೆ ನನ್ನ ಜಮೀನು ಬಳಸಿಕೊಳ್ಳಲಾಗಿತ್ತು.
ಇಂದು ಈ ಕಾಮಗಾರಿ ಮುಗಿದ ನಂತರ ಫ್ಲೆಕ್ಸ್ ಹಾಕಿಸಿದಕ್ಕೆ ಬಿಜೆಪಿಯ ಹಾಲಿ ಪಾಲಿಕೆ ಸದಸ್ಯರುಗಳಾದ ವಿಶ್ವಾಸ, ಅಶಾ ಚನ್ನಬಸಪ್ಪ ಹಾಗು ಬೆಂಬಲಿಗರು ದಬ್ಬಾಳಿಕೆ ನಡೆಸಿ ನನ್ನ ಹಿಂಬಾಲಕರು ಹಾಗು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಮಂಜುನಾಥ್ (ಮಾಜಿ ಮಹಾನಗರ ಪಾಲಿಕೆ ಸದಸ್ಯರು)

 ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ ಅಲ್ಲದೆ ಈ ಕಾಮಗಾರಿಯಲ್ಲಿ ಬಹಳಷ್ಟು ನ್ಯೂನ್ಯತೆಗಳಿದ್ದು ಅದನ್ನು ಸರಿಪಡಿಸಬೇಕಾಗಿದೆ. ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ, ಯಾರಿಗೂ ಹೇಳದೇ ಸೇತುವೆ ಉದ್ಘಾಟನೆಗೆ ಮುಂದಾಗಿದ್ದರೆ ಅಲ್ಲದೇ ಮಾಜಿ ಕಾರ್ಪೊರೇಟರ್ ಮಂಜುನಾಥ್ ಅವರ ಪುತ್ರ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಈ ಕುರಿತು ನಾವು ಪ್ರಕರಣವನ್ನು ಸಹ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದೇವೆ

ವಿಶ್ವಾಸ್ ( ಮಹಾನಗರ ಪಾಲಿಕೆ ಸದಸ್ಯರು)

Leave a Reply

Your email address will not be published. Required fields are marked *

*