ಶಿವಮೊಗ್ಗ ಮೇಯರ್ ಆಗಿ ಬಿಜೆಪಿಯ ಲತಾಗಣೇಶ್ ಮತ್ತು ಉಪಮೇಯರ್ ಅಗಿ ಎಸ್ ಎನ್ ಚನ್ನಬಸಪ್ಪ ಆಯ್ಕೆಗೊಂಡರು.ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ಚುನಾವಣೆ ಅಧಿಕಾರಿಗಳಾಗಿ ಭಾಗವಹಿಸಿ ಚುನಾವಣೆ ಪ್ರಕ್ರಿಯೆ ಆರಂಭ ಮಾಡಿದರು.
ಮೇಯರ್ ಸ್ಥಾನ ಎಸ್.ಸಿ. ಮಹಿಳೆಗೆ ಮೀಸಲಾತಿ ಆದುದರರಿಂದ ಬಿಜೆಪಿಯಿಂದ ಲತಾ ಗಣೇಶ್ ಮತ್ತು ಕಾಂಗ್ರೆಸ್ ನಿಂದ ಮಂಜುಳಾ ಶಿವಣ್ಣ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯ ಲತಾಗಣೇಶ್ (6 ನೇ ವಾರ್ಡ್) 26 ಮತಗಳಿಸಿದ್ದರು. ಕಾಂಗ್ರೆಸ್ ನ ಮಂಜುಳಾ ಶಿವಣ್ಣರವರಿಗೆ (26ನೇ ವಾರ್ಡ್ ) 12 ಮತಗಳು ಹಾಗೂ ಸ್ವತಂತ್ರ ಅಭ್ಯರ್ಥಿಯ ಒಂದು ಮತ ತಟಸ್ಥವಾಗಿ ಚಲಾವಣೆಗೊಂಡಿದ್ದವು. ಇದರಿಂದ ಶಿವಮೊಗ್ಗದ ಆರನೇ ಮೇಯರ್ ಆಗಿ ಬಿಜೆಪಿಯ ಲತಾಗಣೇಶ್ ಅತಿ ಹೆಚ್ಚು ಮತಗಳಿಸಿ ಅಯ್ಕೆಯಾದರು.
ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಎಸ್ ಎನ್ ಚನ್ನಬಸಪ್ಪ ( 8ನೇ ವಾರ್ಡ) ಕಾಂಗ್ರೆಸ್ ನ ಹೆಚ್.ಸಿ.ಯೋಗೇಶ್ ( 4ನೇ ವಾರ್ಡ) ನಾಮಪತ್ರ ಸಲ್ಲಿಸಿದ್ದು, ಚನ್ನಬಸಪ್ಪನವರಿಗೆ 26 ಮತ ಹಾಗೂ ಯೋಗೀಶ್ ಗೆ 12 ಮತ ಮತ್ತು ಸ್ವತಂತ್ರ ಅಭ್ಯರ್ಥಿಯ ಒಂದು ಮತ ತಟಸ್ಥವಾಗಿ ಮತಚಲಾಯಿಸಿದ್ದರಿಂದ ಚನ್ನಬಸಪ್ಪ ಉಪಮೇಯರ್ ಆಗಿ ಆಯ್ಕೆಯಾದರು.
40 ಜನ ಸದಸ್ಯರಲ್ಲಿ 39 ಜನ ಪಾಲ್ಗೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯಿಂದ 23 ಕಾಂಗ್ರೆಸ್ ಜೆಡಿಎಸ್ ಮತ್ತು ಓರ್ವ ಜೆಡಿಎಸ್ ಸದಸ್ಯರು ಸೇರಿ12 ಜನರು ಇಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.
Recent Comments