ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಗೆ ನೋಂದಣಿ ಕಾರ್ಯವನ್ನು ಜಿಲ್ಲೆಯ ಶಿವಮೊಗ್ಗ ಭದ್ರಾವತಿ ಸಾಗರ ಸೊರಬ ಶಿಕಾರಿಪುರ ಹೊಸನಗರ ಮತ್ತು ತೀರ್ಥಹಳ್ಳಿಯ, 7 ಎಪಿಎಂಸಿಗಳಲ್ಲಿ ಡಿಸೆಂಬರ್ 5 ರಿಂದ 15 ರವರೆಗೆ ನಡೆಯಲಿದೆ. ಸಾಮಾನ್ಯ ಭತ್ತಕ್ಕೆ 1750 ರೂಪಾಯಿ ಹಾಗೂ 1770 ರೂಪಾಯಿ ಎ ಗ್ರೇಡ್ ಭತ್ತಕ್ಕೆ ನಿಗದಿಪಡಿಸಲಾಗಿದೆ. ಮತ್ತು ಭತ್ತ ಖರೀದಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ರೈತರು ನೋಂದಣಿ ಸಂದರ್ಭದಲ್ಲಿ ಅರ್ಧ ದಿಂದ 1 ಕೆಜಿವರೆಗೆ ಭತ್ತದ ಸ್ಯಾಂಪಲ್ ನೀಡಬೇಕು. ಸ್ಯಾಂಪಲ್ ಆಧರಿಸಿ ಗುಣಮಟ್ಟ ನಿರ್ಮಿಸಿದ ನಂತರ ಅದೇ ಗುಣಮಟ್ಟದ ಭತ್ತವನ್ನು ರೈತರು ಅಕ್ಕಿ ಗಿರಣಿಗಳಿಗೆ ನೇರವಾಗಿ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು
C News TV Kannada News Online in cnewstv