ನಗರದ ಕೋಟೆ ರಸ್ತೆಯ ವಾಸವಿ ಶಾಲಾ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪೇಜಾವರ ಶ್ರೀಗಳು, ಹಿಂದೆ ಒಬ್ಬ ರಾಮನಿಂದ ರಾಮ ರಾಜ್ಯ ಆಯಿತು. ಈಗ ಎಲ್ಲರೂ ರಾಮನಾಗಬೇಕಿದೆ. ಇದು ಯಥಾ ರಾಜ ತಥಾ ಪ್ರಜಾ ಎಂಬ ಕಾಲ ಅಲ್ಲ. ಯಥಾ ಪ್ರಜಾ ತಥಾ ರಾಜ ಎಂಬ ಕಾಲ, ಹಾಗಾಗಿ ರಾಮ ಮಂದಿರದ ವಿಷಯದಲ್ಲಿ ಕೋರಿಕೆ ಆಗಬಾರದು. ಜನಾಗ್ರಹ ಮತ್ತು ಆದೇಶ ಆಗಬೇಕು. ನನಗೆ 88 ವರ್ಷ ನನಗೆ ಅಯೋಧ್ಯಯಲ್ಲಿ ರಾಮ ಮಂದಿರ ನೋಡುವ ಆಸೆ ನೆರವೇರಲಿ ಎಂದರು..pಇದು ಸರ್ಕಾರಕ್ಕೂ ಒಳ್ಳೆಯ ಅವಕಾಶ. ಸುಗ್ರೀವಾಜ್ಜೆ ಹೊರಡಿಸಿ ಏನಾದರೂ ಅದನ್ನು ಸುಪ್ರೀಂ ಕೋರ್ಟ್ ತಡೆ ಹಾಕಿದರೆ ಅದರಿಂದ ಮುಂದಿನ ಚುನಾವಣೆಯಲ್ಲಿ ಒಳ್ಳೆಯದಾಗುತ್ತದೆ. ರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್ ವಿರೋಧಿಸುವುದಿಲ್ಲ. ಒಂದೊಮ್ಮೆ ವಿರೋಧಿಸಿದರೆ ಮುಂದಿನ ಚುನಾವಣೆಯಲ್ಲಿ ಅದಕ್ಕೆ ಹಿನ್ನಡೆಯಾಗಲಿದೆ. ಹಾಗೆಯೇ ಮುಸ್ಲಿಮರೂ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ರಾಮಮಂದಿರ ನಿರ್ಮಾಣಕ್ಕೆ ಮುಸ್ಲೀಂರು ಸಹ ವಿರೋಧ ವ್ಯಕ್ತಪಡಿಸೊಲ್ಲ. ಅವರಿಗೂ ಸಹ ಹಿಂದೂಗಳ ಜೊತೆಭಾಂದ್ಯವ್ಯದೊಂದಿಗೆ ಬದುಕಲು ಒಳ್ಳೆಯ ಅವಕಾಶ ಅವರು ಸಹ ಇದನ್ನ ಕಳೆದುಕೊಂಡು ಬದಕುವುದಿಲ್ಲವೆಂಬ ಭರವಸೆ ಇದೆ.ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಗೇರಿನ ಹಣ್ಣಿನಲ್ಲಿ ಬೀಜ ಹೊರಗಿರುವಂತೆ ಎಲ್ಲಾ ಸಾಧು ಸಂತರು ರಾಜಕೀಯದಿಂದ ಹೊರಗಿದ್ದಾರೆ ಎಂದರು…
ರಾಮ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ನೀಡಿದ ಮನವಿಯನ್ನು ಸ್ವೀಕರಿಸಿದ ಸಂಸದರಾದ ಶ್ರೀ ಬಿವೈ ರಾಘವೇಂದ್ರ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸುತ್ತೆನೆಂದು ಸಭೆಯಲ್ಲಿ ತಿಳಿಸಿದರು.
Recent Comments