Breaking News

ಶಿವಮೊಗ್ಗ

ಶಿವಮೊಗ್ಗದಲ್ಲಿ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿದಿನದಂತೆ ಅಂಗಡಿ, ಮುಂಗಟ್ಟುಗಳು ತೆರೆದಿವೆ. ಹೂವಿನ ಅಂಗಡಿಗಳು, ತಿಂಡಿ ಗಾಡಿಯವರು, ಚಿಲ್ಲರೆ ವ್ಯಾಪಾರಸ್ಥರು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾರೆ.   ನಗರದಲ್ಲಿ ಎಂದಿನಂತೆ ಆಟೋ, ಖಾಸಗಿ ಬಸ್, ಲಾರಿ ಸಂಚಾರವಿದೆ..ಬಂದ್‌ ಗೆ ಕೆಎಸ್‌ಆರ್‌ಟಿಸಿ ಬೆಂಬಲ ಸೂಚಿಸಿದೆ ಹಾಗಾಗಿ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಉಳಿದಂತೆ, ಎಲ್ಲಾ ಖಾಸಗಿ ಬಸ್ ಗಳ ಸಂಚಾರವಿದೆ. ಬಂದ್ ಗೆ ಬೆಂಬಲ ನೀಡುತ್ತಿರುವ ಅಂಚೆ ಕಚೇರಿ, ಬ್ಯಾಂಕ್ ಗಳನ್ನೂ ಹೊರತುಪಡಿಸಿ ಜನಜೀವನದ ಎಂದಿನಂತೆ ಇದೆ.

Read More »

ಭಾರತ್ ಬಂದ್ ಹಿನ್ನೆಲೆ…ಶಿವಮೊಗ್ಗ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ…ಜಿಲ್ಲಾಧಿಕಾರಿ ಕೆ.ಎ.ದಯಾನಂದ್

  ಪರೀಕ್ಷೆ ಹತ್ತಿರವಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಖಾಸಗಿ ವಲಯದ ವಾಹನಗಳ ಅವಲಂಬನೆ ಹೆಚ್ಚಿರುವುದರಿಂದ ಖಾಸಗಿ ವಾಹನ ಮಾಲಿಕರು ಯಾವುದೇ ಬಂದ್ ನಲ್ಲಿ ಭಾಗವಹಿಸದೆ ಇರುವುದರಿಂದ ನಾಳೆ ಶಾಲಾ ಕಾಲೇಜುಗಳಿಗೆ ರಜೆ ನೀಡುವುದಿಲ್ಲ ಎಂದು ತಿಳಿಸಿದರು.

Read More »

ಮಂಗನ ಜ್ವರಕ್ಕೆ ಮತ್ತೊಂದು ಬಲಿ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಮಂಗನ ಜ್ವರದ ಪ್ರಮಾಣ ಹೆಚ್ವಾಗತೊಡಗಿದ್ದು ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣತೊಡಗಿದೆ.ಇಂದು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಜ್ವರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಸಾಗರ ತಾಲೂಕು ಅರಲಗೋಡು ಗ್ರಾಮದ ಶ್ವೇತಾ (17) ಮಂಗನ ಜ್ವರದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಮಧ್ಯಾಹ್ನ ಇದೇ ತಾಲೂಕಿನ ವಾಟೆಮಕ್ಕಿ ಗ್ರಾಮದ ರಾಮಕ್ಕ ಒಂದು ವಾರದಿಂದ ಮಂಗನ ಜ್ವರದಿಂದ ಬಳಲುತಿದ್ದು ಇಂದು ಮೃತಪಟ್ಟಿದ್ದಾರೆ.ರಾಮಕ್ಕನ ಮಗ ಮಂಜುನಾಥ ಕಳೆದ ವಾರ ಮಂಗನ ಜ್ವರಕ್ಕೆ ಬಲಿಯಾಗಿದ್ದರು.ಮಂಗನಕಾಯಿಲೆಗೆ ಇದೂವರೆಗೂ ಜಿಲ್ಲೆಯಲ್ಲಿ ಏಳು ...

Read More »

ಹತ್ತು ವರ್ಷಗಳ ನಂತರ ಮತ್ತೆ ಆರಂಭವಾಗಲಿರುವ ಸಹ್ಯಾದ್ರಿ ಉತ್ಸವದ ಲಾಂಚನ ಅನಾವರಣ.

10ವರ್ಷಗಳ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಸಹ್ಯಾದ್ರಿ ಉತ್ಸವವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಲಾಂಚನ ಹಾಗೂ ಘೋಷ ವಾಕ್ಯವನ್ನು ಇಂದು ಜಿಲ್ಲಾಧಿಕಾರಿಗಳಾದ ಕೆ.ಎ. ದಯಾನಂದ್ ಅನಾವರಣಗೊಳಿಸಿದ್ದರು. ಹಳೆ ಜೈಲು ಆವರಣದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು,ಲಭ್ಯವಿರುವ ಅನುದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಹ್ಯಾದ್ರಿ ಉತ್ಸವವನ್ನು ಆಯೋಜಿಸಲು ಸಿದ್ಧತೆಗಳನ್ನು ಮಾಡಲಾಗಿದೆ. ರಾಷ್ಟ್ರ,ರಾಜ್ಯಮಟ್ಟದ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗುತ್ತಿದೆ. ಉತ್ಸವ ಆಚರಣೆಯಿಂದ ಕಲಾವಿದರಿಗೆ ಆರ್ಥಿಕ ಸಹಾಯ ಸಿಗುವುದು ಮಾತ್ರವಲ್ಲದೆ ಸ್ಥಳೀಯ ಕಲೆಗಳಿಗೆ ಪ್ರೋತ್ಸಾಹ ನೀಡಲು ಸಾಧ್ಯವಿದೆ. ಸಾಹಸ ಕ್ರೀಡೆಗಳು, ಜನಪದ ಕ್ರೀಡೆಗಳು, ಮ್ಯಾರಥಾನ್, ...

Read More »

ಸುತ್ತೂರು ಜಯಂತ್ಯುತ್ಸವಕ್ಕೆ ಸಜ್ಜಾದ ಶಿವಮೊಗ್ಗ ನಗರ

ಇದೇ ಮೊದಲ ಬಾರಿಗೆ ಸುತ್ತೂರು ಶಿವರಾತ್ರಿಶ್ವರ ಆದಿ ಜಗದ್ಗುರುಗಳ 1059ನೇ ಜಯಂತ್ಯುತ್ಸವ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯಲಿದ್ದು (ಹಳೆ ಜೈಲು ಆವರಣ) ಅಲ್ಲಮ್ಮ ಪ್ರಭು ಬಯಲು ಸಜ್ಜಾಗಿದೆ. ಇಂದು ಆದಿಜಗದ್ಗುರುಗಳ ಮೂರ್ತಿ ಹಾಗೂ ಸುತ್ತೂರು ಶ್ರೀಗಳು ಪುರ ಪ್ರವೇಶವನ್ನು ನಡೆಸಿದ್ದು, ನಾಳೆ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.   ಜಯಂತ್ಯೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು , ಪೇಜಾವರ ಸ್ವಾಮೀಜಿ , ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರುಗಳು ಉಪಸ್ಥಿತರಿರುತ್ತಾರೆ. ಜಯಂತಿ ...

Read More »

ಆಯುಷ್ಮಾನ್ – ಉಜ್ವಲ್ ಯೋಜನೆಯ ಲಾಭ ಪಡೆಯಿರಿ : ಬಿವೈ ರಾಘವೇಂದ್ರ

ಆಯುಷ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುತ್ತಿದೆ ರಾಜ್ಯ ಸರ್ಕಾರದ ಶೇ 40 ಕೇಂದ್ರ ಸರ್ಕಾರದ ಶೇ 60 ರಷ್ಟು ಹಣವನ್ನು ಒದಗಿಸಿರುವುದರಿಂದ ಈ ಯೋಜನೆಗೆ ಆಯುಷ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಎಂದು ಕರೆಯಲಾಗುತ್ತಿದೆ. ಪ್ರತಿ ವರ್ಷ ರಾಜ್ಯ ಸರ್ಕಾರ 286 ಕೋಟಿ ರು ಕೇಂದ್ರ ಸರ್ಕಾರ 782 ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 42600 ಆರೋಗ್ಯ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಆಯುಷ್ ಭಾರತ ಆರೋಗ್ಯ ಯೋಜನೆ ಮತ್ತು ಪ್ರಧಾನಮಂತ್ರಿ ಯವರ ಉಜ್ವಲ ...

Read More »

ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಯುವಕರು.

ಗಾಂಜಾ ಮತ್ತಿನಲ್ಲಿದ್ದ ಇಬ್ಬರು ಯುವಕರು ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕುಂಸಿ ‍ ಪೊಲೀಸ್ ಠಾಣೆ ಪೇದೆ ಮಂಜುನಾಥ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಯುವಕರು ಇವರ ಬಳಿ ಹಣವನ್ನು ಕೇಳಿದ್ದಾರೆ ಹಣ ನೀಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಯುವಕರು ಮಂಜುನಾಥರವರ ಕೈಕಾಲು ಕುತ್ತಿಗೆ ಭಾಗಕ್ಕೆ ಬ್ಲೇಡಿನಲ್ಲಿ ಕೊಯ್ದಿದ್ದಾರೆ. ಜನ ಸೇರುತ್ತಿದ್ದಂತೆ ಇಬ್ಬರೂ ಯುವಕರು ಸ್ಥಳದಿಂದ ಪರಾರಿ ಆಗಿದ್ದಾರೆ. ತಕ್ಷಣ ಗಾಯಗೊಂಡ ಮಂಜುನಾಥ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ...

Read More »

ಏಕ ಕಾಲಕ್ಕೆ 5ಸಾವಿರ ಅಧಿಕಾರಿ ಹಾಗು ಸಿಬ್ಬಂದಿಗಳಿಗೆ ಜೊತೆ ಕಾನ್ಫರೆನ್ಸ್ ಕಾಲ್ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಚಾಲನೆ

  ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಕ ಕಾಲಕ್ಕೆ 5ಸಾವಿರ ಸರ್ಕಾರಿ ಅಧಿಕಾರಿ ಹಾಗು ಸಿಬ್ಬಂದಿಗಳೊಂದಿಗೆ ನೇರ ದೂರವಾಣಿ ಕರೆ ಮಾಡಬಹುದಾದ `ಕಾನ್ಫರೆನ್ಸ್ ಕಾಲ್’ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಚಾಲನೆ ನೀಡಿದರು. ಮೊಬೈಲ್ ಮೂಲಕ ನಿರ್ದಿಷ್ಟ ಗ್ರೂಪ್‍ಗಳಿಗೆ ಏಕ ಕಾಲಕ್ಕೆ ಕರೆ ಮಾಡುವ ಸೌಲಭ್ಯ ಇದಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳ ಗ್ರೂಪ್‍ಗಳನ್ನು ಸಿದ್ಧಪಡಿಸಲಾಗಿದ್ದು, ಈ ಗ್ರೂಪ್‍ಗಳಿಗೆ ಏಕಕಾಲಕ್ಕೆ ಕರೆ ಮಾಡಬಹುದಾಗಿದೆ. ತಕ್ಷಣಕ್ಕೆ ಎಲ್ಲರ ಸಂಪರ್ಕ ಸಾಧ್ಯವಾಗುವುದರಿಂದ ಆಡಳಿತಕ್ಕೆ ವೇಗ ದೊರಕಲಿದೆ ಎಂದು ಅವರು ...

Read More »

ನಿವೇಶನ ಹಂಚಿಕೆಯಲ್ಲಿ ಅಕ್ರಮ, ಸೂಕ್ತ ತನಿಖೆಗೆ ಒತ್ತಾಯ – ಅಣ್ಣಾ ಹಜಾರೆ ಹೋರಾಟ ಸಮಿತಿ

ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಅಕ್ರಮ ನಡೆದಿರುವುದು ನಿವೃತ್ತ ನ್ಯಾ. ರವೀಂದ್ರನಾಥ್ ವರದಿ ಆಧಾರದಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಾಧಿಕಾರದಿಂದ 1801 ನಿವೇಶನಗಳ ಬಡಾವಣೆ ನಿರ್ಮಾಣ ಮಾಡಿ, 2010 ರಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿ 2012 ರಲ್ಲಿ ನಿವೇಶನದ ಹಂಚಿಕೆ ಮಾಡಲಾಗಿದೆ. ಶೇ 80 ಕ್ಕಿಂತ ಹೆಚ್ಚು ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು. ಈ ಸಂಪೂರ್ಣ ವಿಚಾರ ಹಾಗೂ ಕಡತಗಳು ಲೋಕಾಯುಕ್ತ ಇಲಾಖೆಯ ಅಂಗಳದಲ್ಲಿ ನನೆಗುದ್ದಿಗೆ ಬಿದ್ದಿದ್ದು ನಾಲ್ಕು ವರ್ಷಗಳಿಂದ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ತನಿಖೆ ...

Read More »

ಜೀವನದಲ್ಲಿ ಸಾಧನೆ ಮಾಡಬೇಕಾದರೆ ವ್ಯಸನ ಹಾಗೂ ಆಡಂಬರವನ್ನು ತ್ಯಜಿಸಬೇಕು – ರಾಜ್ಯಪಾಲ ವಜುಭಾಯಿ ವಾಲಾ

ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯ ಆಡಂಬರದ ಜೀವನದ ಶೈಲಿಗೆ ಮಾರು ಹೋಗುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಇದರಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು. ಮಹಾತ್ಮಾ ಗಾಂಧೀಜಿ , ಸರ್ದಾರ್ ವಲ್ಲಭಾಯಿ ಪಟೇಲ್, ಜವಾಹರ್ ಲಾಲ್ ನೆಹರು, ಮುಂತಾದವರು ತಮ್ಮ ಜೀವನವನ್ನೇ ತ್ಯಾಗ ಮಾಡಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡವರು ಅಂತಹವರು ನಮಗೆ ಮಾದರಿಯಾಗಬೇಕು. ಹಣ ಮಾಡಬೇಕೆಂಬ ಯೋಚನೆಯನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಹೊಂದಿರಬಾರದು ದೇಶಾಭಿಮಾನ ಹಾಗೂ ಸಮಾಜದ ...

Read More »