Breaking News

ಮಂಗನ ಜ್ವರಕ್ಕೆ ಮತ್ತೊಂದು ಬಲಿ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಮಂಗನ ಜ್ವರದ ಪ್ರಮಾಣ ಹೆಚ್ವಾಗತೊಡಗಿದ್ದು ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣತೊಡಗಿದೆ.ಇಂದು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಜ್ವರಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಸಾಗರ ತಾಲೂಕು ಅರಲಗೋಡು ಗ್ರಾಮದ ಶ್ವೇತಾ (17) ಮಂಗನ ಜ್ವರದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಮಧ್ಯಾಹ್ನ ಇದೇ ತಾಲೂಕಿನ ವಾಟೆಮಕ್ಕಿ ಗ್ರಾಮದ ರಾಮಕ್ಕ ಒಂದು ವಾರದಿಂದ ಮಂಗನ ಜ್ವರದಿಂದ ಬಳಲುತಿದ್ದು ಇಂದು ಮೃತಪಟ್ಟಿದ್ದಾರೆ.ರಾಮಕ್ಕನ ಮಗ ಮಂಜುನಾಥ ಕಳೆದ ವಾರ ಮಂಗನ ಜ್ವರಕ್ಕೆ ಬಲಿಯಾಗಿದ್ದರು.ಮಂಗನಕಾಯಿಲೆಗೆ ಇದೂವರೆಗೂ ಜಿಲ್ಲೆಯಲ್ಲಿ ಏಳು ಜನ ಮೃತಪಟ್ಟಿದ್ದಾರೆ.ಸಾಗರ ತಾಲೂಕಿನ ಐದು ಜನ ಮೃತಪಟ್ಟರೆ ತೀರ್ಥಹಳ್ಳಿ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಸಾಗರ, ತೀರ್ಥಹಳ್ಳಿ ತಾಲೂಕಿನ ಐವತ್ತಕ್ಕೂ ಹೆಚ್ಚು ಜನ ಸ್ಥಳೀಯ ಹಾಗೂ ಶಿವಮೊಗ್ಗ, ಮಣಿಪಾಲ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

Leave a Reply

Your email address will not be published. Required fields are marked *

*