ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯ ಆಡಂಬರದ ಜೀವನದ ಶೈಲಿಗೆ ಮಾರು ಹೋಗುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಇದರಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು. ಮಹಾತ್ಮಾ ಗಾಂಧೀಜಿ , ಸರ್ದಾರ್ ವಲ್ಲಭಾಯಿ ಪಟೇಲ್, ಜವಾಹರ್ ಲಾಲ್ ನೆಹರು, ಮುಂತಾದವರು ತಮ್ಮ ಜೀವನವನ್ನೇ ತ್ಯಾಗ ಮಾಡಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡವರು ಅಂತಹವರು ನಮಗೆ ಮಾದರಿಯಾಗಬೇಕು. ಹಣ ಮಾಡಬೇಕೆಂಬ ಯೋಚನೆಯನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಹೊಂದಿರಬಾರದು ದೇಶಾಭಿಮಾನ ಹಾಗೂ ಸಮಾಜದ ಬಗ್ಗೆ ಕಳಕಳಿಯನ್ನು ಹೊಂದಿರಬೇಕು.ಸಮಾಜ ನಮಗೇನು ಕೊಡುತ್ತದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಡಬೇಕು ಎಂಬುದರ ಬಗ್ಗೆ ಚಿಂತಿಸಬೇಕು
ನಾವು ಹಣವನ್ನು ಹೇಗೆ ವ್ಯವಹಾರಕ್ಕೆ ವಿನಿಯೋಗಿಸಿ ಹಣ ಗಳಿಸುತ್ತೇವೆಯೇ ಹಾಗೆ ಶಿಕ್ಷಣವನ್ನು ಪಡೆದು ಶಿಕ್ಷಣವನ್ನು ನೀಡಬೇಕು. ನಾವು ಒಬ್ಬ ವಿದ್ಯಾರ್ಥಿಯನ್ನು ದತ್ತು ಪಡೆದು ಶಿಕ್ಷಣವನ್ನು ನೀಡಬೇಕು ಈಚ್ ಒನ್ ಟೀಚ್ ಒನ್ ಎಂಬುದು ನಮ್ಮ ಗುರಿಯಾಗಬೇಕು ಆಗ ಮಾತ್ರ ನಮ್ಮೊಂದಿಗೆ ದೇಶವೂ ಸಹ ಬೆಳೆಯಲಿದೆ. ಇದು ನಾವು ದೇಶಕ್ಕೆ ನೀಡುವ ಅತ್ಯಮೂಲ್ಯ ಕೊಡುಗೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.
Recent Comments