Breaking News

ಸುತ್ತೂರು ಜಯಂತ್ಯುತ್ಸವಕ್ಕೆ ಸಜ್ಜಾದ ಶಿವಮೊಗ್ಗ ನಗರ

ಇದೇ ಮೊದಲ ಬಾರಿಗೆ ಸುತ್ತೂರು ಶಿವರಾತ್ರಿಶ್ವರ ಆದಿ ಜಗದ್ಗುರುಗಳ 1059ನೇ ಜಯಂತ್ಯುತ್ಸವ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯಲಿದ್ದು (ಹಳೆ ಜೈಲು ಆವರಣ) ಅಲ್ಲಮ್ಮ ಪ್ರಭು ಬಯಲು ಸಜ್ಜಾಗಿದೆ. ಇಂದು ಆದಿಜಗದ್ಗುರುಗಳ ಮೂರ್ತಿ ಹಾಗೂ ಸುತ್ತೂರು ಶ್ರೀಗಳು ಪುರ ಪ್ರವೇಶವನ್ನು ನಡೆಸಿದ್ದು, ನಾಳೆ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

 

ಜಯಂತ್ಯೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು , ಪೇಜಾವರ ಸ್ವಾಮೀಜಿ , ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರುಗಳು ಉಪಸ್ಥಿತರಿರುತ್ತಾರೆ. ಜಯಂತಿ ಉತ್ಸವದಲ್ಲಿ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಟಾಲ್ ಗಳು ಹಾಗೂ ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕೃಷಿಗೆ ಆದ್ಯತೆ ನೀಡುವ ಸಲುವಾಗಿ ಇನ್ನೂರಕ್ಕೂ ಹೆಚ್ಚು ಸ್ಟಾಲ್ ಗಳನ್ನು ನಿರ್ಮಿಸಲಾಗಿದ್ದು ಅದರಲ್ಲಿ ಐವತ್ತು ಸ್ಟಾಲ್ ಗಳನ್ನು ಕೈಗಾರಿಕೆಗೆ ಮೀಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಸಹ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

 

Leave a Reply

Your email address will not be published. Required fields are marked *

*