Breaking News

ಆಯುಷ್ಮಾನ್ – ಉಜ್ವಲ್ ಯೋಜನೆಯ ಲಾಭ ಪಡೆಯಿರಿ : ಬಿವೈ ರಾಘವೇಂದ್ರ

ಆಯುಷ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುತ್ತಿದೆ ರಾಜ್ಯ ಸರ್ಕಾರದ ಶೇ 40 ಕೇಂದ್ರ ಸರ್ಕಾರದ ಶೇ 60 ರಷ್ಟು ಹಣವನ್ನು ಒದಗಿಸಿರುವುದರಿಂದ ಈ ಯೋಜನೆಗೆ ಆಯುಷ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಎಂದು ಕರೆಯಲಾಗುತ್ತಿದೆ. ಪ್ರತಿ ವರ್ಷ ರಾಜ್ಯ ಸರ್ಕಾರ 286 ಕೋಟಿ ರು ಕೇಂದ್ರ ಸರ್ಕಾರ 782 ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 42600 ಆರೋಗ್ಯ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಆಯುಷ್ ಭಾರತ ಆರೋಗ್ಯ ಯೋಜನೆ ಮತ್ತು ಪ್ರಧಾನಮಂತ್ರಿ ಯವರ ಉಜ್ವಲ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಹಾಗೂ ಆರೋಗ್ಯ ಕಾರ್ಡ್‌ಗಳು ಎಪಿಎಲ್ , ಬಿಪಿಎಲ್ ನವರಿಗೆ ಅಂಚೆ ಮೂಲಕ ತಲುಪುತ್ತದೆ. ಅದನ್ನು ತೆಗೆದುಕೊಂಡು ಆರೋಗ್ಯ ಕೇಂದ್ರ ,ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ , ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಒನ್ ಮೂಲಕ ಆರೋಗ್ಯ ಕಾರ್ಡುಗಳನ್ನು ಪಡೆಯಬಹುದು ಎಂದು ಬಿವೈ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..

Leave a Reply

Your email address will not be published. Required fields are marked *

*