ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಹಾಪ್‍ಕಾಮ್ಸ್ ತರಕಾರಿ ಮತ್ತು ಹಣ್ಣು ಮಾರಾಟ ಮಳಿಗೆ ಆರಂಭಿಸಲು ಸ್ಥಳ ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಅವರು ಶನಿವಾರ ಹಾಪ್‍ಕಾಮ್ಸ್ ಸಭಾಂಗಣದಲ್ಲಿ ಶಿವಮೊಗ್ಗ ನಗರದಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಸುಗಮ ಪೂರೈಕೆಗಾಗಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು. ಶಿವಮೊಗ್ಗ ನಗರದಲ್ಲಿ ಪ್ರಸ್ತುತ 15ಹಾಪ್‍ಕಾಮ್ಸ್ ಮಳಿಗೆಗಳಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಎಲ್ಲಾ 20 ವಾರ್ಡ್‍ಗಳಲ್ಲಿ ಸಹ ಹಾಪ್‍ಕಾಮ್ಸ್ ಮಳಿಗೆ ಆರಂಭಿಸಲು ಸೂಕ್ತ ಸ್ಥಳವನ್ನು ...
Read More »ಶಿವಮೊಗ್ಗ
ಜಿಲ್ಲೆಯಲ್ಲಿ ಇಂದಿನಿಂದ ಕೋಳಿ, ಮೊಟ್ಟೆ ಮಾರಾಟ ಪುನಾರಂಭ : ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಕಾರಣದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಬಂಧಿಸಲಾಗಿದ್ದ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ಇಂದಿನಿಂದ ಪುನಾರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೆರೆಯ ಜಿಲ್ಲೆಯಲ್ಲಿ ಹಕ್ಕಿಜ್ವರದ ಹೊಸ ಪ್ರಕರಣಗಳು ವರದಿಯಾಗದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ಇಂದಿನಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೊಳೆಗೇರಿ ನಿವಾಸಿಗಳು ಸೇರಿದಂತೆ ಬಡವರಿಗೆ ಪ್ರತಿ ಕುಟುಂಬಕ್ಕೆ ...
Read More »ನಗರದಲ್ಲಿ ಔಷಧಿ ಸಿಂಪಡಿಸುವ ವಾಹನದ ಉದ್ಘಾಟನೆ
ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಶ್ರೀ ಹೆಚ್ ಸಿ ಯೋಗೆಶ್ ರವರು ನಗರದಾದ್ಯಂತ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ತಮ್ಮ ಸ್ವಂತ ಖರ್ಚಿನಿಂದ ಔಷಧಿ ಸಿಂಪಡಿಸುವ ವಾಹನವನ್ನು ಸಿದ್ಧಪಡಿಸಿದು ಇಂದು ಬೆಳಗ್ಗೆ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಹತ್ತಿರ ವಾಹನವನ್ನು ಉದ್ಘಾಟನೆ ಮಾಡಿ ಹೊಸಮನೆ ಬಡಾವಣೆ ಸುತ್ತ ಮುತ್ತಲು ಔಷಧ ಸಿಂಪಡಿಸಲಾಯಿತು ಔಷಧಿ ಸಿಂಪಡಿಸುವ ಕಾರ್ಯದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಹೆಚ್.ಸಿ ಯೋಗೀಶ್ , ಹೊಸಮನೆ ವಾರ್ಡ್ ನ ಪಾಲಿಕೆ ಸದಸ್ಯರಾದ ರೇಖಾ ...
Read More »ಸಂಕಷ್ಟಕ್ಕೊಳಗಾದವರ ನೆರವಿಗೆ ಮಹಾನಗರಪಾಲಿಕೆ ಸಹಾಯಹಸ್ತ : ಚಿದಾನಂದ ಎಸ್.ವಟಾರೆ
ಶಿವಮೊಗ್ಗ :ಮಹಾನಗರಪಾಲಿಕೆಯು ಶಿವಮೊಗ್ಗ ಮಹಾನಗರದ ವ್ಯಾಪ್ತಿಯಲ್ಲಿ ಮಾರಾಣಾಂತಿಕ ಕೊರೋನ ವೈರಸ್‍ನ ನಿಯಂತ್ರಣಕ್ಕಾಗಿ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ 7ವಾರ್ಡುಗಳಿಗೆ ಓರ್ವರಂತೆ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದ್ದು, ಸಂಕಷ್ಟಕ್ಕೊಳಗಾದವರು ಈ ಕೆಳಕಂಡವರನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳುವಂತೆ ಮಹಾನಗರಪಾಲಿಕೆಯ ಆಯುಕ್ತ ಚಿದಾನಂದ ಎಸ್.ವಟಾರೆ ಅವರು ತಿಳಿಸಿದ್ದಾರೆ. ಒಂದರಿಂದ ಏಳನೇ ವಾರ್ಡ್‍ವರೆಗಿನ ಬಾಧಿತರು ಚಾಮರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮೊ.9448127454, ವಾರ್ಡ್ ಎಂಟರಿಂದ ಹದಿನಾಲ್ಕನೆ ವಾರ್ಡಿನ ಬಾಧಿತರು ಶ್ರೀಧರ್ ಜೆ., ಕಾರ್ಯಪಾಲಕ ಅಭಿಯಂತರರು, ಮೊ.8762288680, ವಾರ್ಡ್ ನಂಬರ್ ...
Read More »ಲಾಕ್ ಡೌನ್ ಉಲ್ಲಂಘಿಸಿ ಬೀದಿಗಿಳಿದವರ 176 ಬೈಕ್ ಸೀಸ್
ಶಿವಮೊಗ್ಗ: ಕರೋನಾ ಭೀತಿ ಹಿನ್ನೆಲೆಯಲ್ಲಿ ಇಡಿ ಇಂಡಿಯಾದಲ್ಲೇ ಲಾಕ್ ಡೌನ್ ಜಾರಿಯಲ್ಲಿದೆ. ಶಿವಮೊಗ್ಗದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಬೀದಿಗಿಳಿದವರ ಬೈಕ್ ಗಳನ್ನು ಪೊಲೀಸರು ಸೀಸ್ ಮಾಡಲಾರಂಭಿಸಿದ್ದಾರೆ. ಹೌದು ಲಾಕ್ ಡೌನ್ ಆರಂಭದಲ್ಲಿ ಬೀದಿಗಿಳಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದರು. ಆದರೂ ಜನ ಬೀದಿಗಿಳಿಯುವುದು ಕಡಿಮೆಯಾಗಿರಲಿಲ್ಲ ಆಗ ಪೊಲೀಸರು ಬೀದಿಗಿಳಿದ ಬೈಕ್ ಸವಾರರ ಮೇಲೆ ಕೇಸು ದಾಖಲಿಸಲು ಆರಂಭಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಅನಾವಶ್ಯಕವಾಗಿ ಬೈಕ್ ನಲ್ಲಿ ಓಡಾಡುವವರ ಮೇಲೆ ಕೇಸ್ ದಾಖಲಿಸುವ ಜೊತೆಗೆ ಬೈಕ್ ಗಳನ್ನು ಸೀಸ್ ಮಾಡಲಾರಂಭಿಸಿದ್ದಾರೆ. ...
Read More »ಕರೋನಾ ತಡೆಗಾಗಿ ಕಾಶಿ ಶ್ರೀಗಳಿಂದ ದೇಣಿಗೆ
ಶಿವಮೊಗ್ಗ: ಕರೋನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಹಾಗೂ ಕರೋನಾ ಎಫೆಕ್ಟ್ ನಿಂದ ಸಂತ್ರಸ್ಥರಾದವರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಕಾಶಿ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ದೇಣಿಗೆ ನೀಡಿದರು. ಕಳೆದ 20 ದಿನಗಳಿಂದ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿರುವ ಕಾಶಿ ಶ್ರೀಗಳು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ದೇಣಿಗೆಯ ಚೆಕ್ಕನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ನೀಡಿದರು. ಶ್ರೀಗಳು ವಾಸ್ತವ್ಯ ಹೂಡಿರುವ ಶಿವಮೊಗ್ಗ ಹೊರವಲಯದ ಮತ್ತೋಡು ...
Read More »ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ಕಾಮತ್ ಕಾಂಡಿಮೆಂಟ್ಸ್ ಬೆಂಕಿಗಾಹುತಿ
ಶಿವಮೊಗ್ಗ : ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಕಾಮತ್ ಮಂಡಕ್ಕಿ ಅಂಗಡಿಯು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಇಂದು ಬೆಳಗಿನ ಜಾವ ಸುಮಾರು 3.30 ಕ್ಕೆ ಘಟನೆ ನಡೆದ್ದಿದ್ದು, ಅಂಗಡಿ ಮತ್ತು ಮನೆ ಒಂದೇ ಕಡೆ ಇರುವುದರಿಂದ ಸುಮಾರು ಏಳರಿಂದ ಹತ್ತು ಲಕ್ಷ ರೂಪಾಯಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Read More »ಬಡವರಿಗೆ ಕೈ ತುತ್ತು ನೀಡಲು ಮುಂದಾದ ಶಿವಮೊಗ್ಗ ಕಾಂಗ್ರೆಸ್
ಶಿವಮೊಗ್ಗ : ಮಹಾಮಾರಿ ಕೊರೊನಾ ವೈರಸ್ ದಿನೇದಿನೇ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿವ ಸರ್ಕಾರ ಇಡೀ ದೇಶವನ್ನೇ ಲಕ್ ಡೌನ್ ಮಾಡಿದೆ. ಆದರೆ ಅದು ಅಂದೇ ದುಡಿದು ಅಂದೇ ತಿನ್ನುವಂತಹ ಬಡ ವರ್ಗದ ಜನತೆಗೆ ಕೆಲಸವಿಲ್ಲದಂತಾಗಿದೆ ಅಂಥವರು ಜೀವನ ನಡೆಸುವುದೇ ಕಷ್ಟವಾಗಿದೆ. ಆ ರೀತಿಯಾ ಬಡವರ್ಗದ ಜನರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ಶಿವಮೊಗ್ಗ ಕಾಂಗ್ರೆಸ್ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ದೇವೇಂದ್ರಪ್ಪ ಕೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್ ಕಿರಣ್, ಎಂ ಪ್ರವೀಣ್ ಕುಮಾರ್ , ...
Read More »ಕಾನೂನು ಉಲ್ಲಂಘಿಸಿ ರಸ್ತೆಗೆ ಬಂದರೆ ಇನ್ಮುಂದೆ ಲಾಠಿ ಏಟಿಲ್ಲ ಬರೀ ಕೇಸ್
ಶಿವಮೊಗ್ಗ: ಕರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಇಡೀ ಇಂಡಿಯಾ ಲಾಕ್ ಡೌನ್ ಆಗಿದೆ. ಜೊತೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಂಥ ಸಂದರ್ಭದಲ್ಲಿ ಇದುವರೆಗೆ ಯಾರಾದರೂ ಕಾನೂನು ಉಲ್ಲಂಘಿಸಿ ರಸ್ತೆಗೆ ಬಂದರೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಆದರೆ ಇನ್ಮುಂದೆ ಪೊಲೀಸರು ಲಾಠಿ ರುಚಿ ತೋರಿಸುವುದಿಲ್ಲ. ಬದಲಿಗೆ ಅಂಥವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆಗ ಅನಿವಾರ್ಯವಾಗಿ ಜೈಲು ಸೇರಬೇಕಾಗುತ್ತದೆ. ಹೌದು ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ಸಕಾರಣವಿಲ್ಲದೆ ರಸ್ತೆಗೆ ಗುಂಪಾಗಿ ಬರುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾರಂಭಿಸಿದ್ದಾರೆ. ಶಿವಮೊಗ್ಗ ಗಾಂದಿ ಬಜಾರ್ ನಲ್ಲಿ ಕಾನೂನು ಉಲ್ಲಂಘಿಸಿ ...
Read More »ತಮ್ಮ ಒಂದು ತಿಂಗಳ ಸಹಾಯಧನವನ್ನು ಕರೋಮಾ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ನೀಡಿದ ಮಹಾನಗರ ಪಾಲಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು.
ಶಿವಮೊಗ್ಗ: ವಿಶ್ವದಾದ್ಯಂತ ತಲ್ಲಣ ಮೂಡಿಸಿದ ಕರೋನಾ ವೈರಸ್ ತಡೆಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ಸರ್ಕಾರಕ್ಕೆ ನೀಡಿದ್ದಾರೆ. ಹೌದು ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪಾಲಿಕೆಯ 10 ಸದಸ್ಯರು ತಲಾ ತಮ್ಮ ಒಂದು ತಿಂಗಳ ಗೌರವ ಧನ 6000 ರೂಪಾಯಿಯನ್ನು ಅಂದರೆ ಒಟ್ಟು 60 ಸಾವಿರ ರೂಪಾಯಿಯನ್ನು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದರು. ಈ ಗೌರವ ಧನವನ್ನು ಆಹಾರ ಪದಾರ್ಥಗಳ ಸರಬರಾಜಿಗೆ ...
Read More »
C News TV Kannada News Online in cnewstv