Breaking News

ಲಾಕ್ ಡೌನ್ ಉಲ್ಲಂಘಿಸಿ ಬೀದಿಗಿಳಿದವರ 176 ಬೈಕ್ ಸೀಸ್

ಶಿವಮೊಗ್ಗ: ಕರೋನಾ ಭೀತಿ ಹಿನ್ನೆಲೆಯಲ್ಲಿ ಇಡಿ ಇಂಡಿಯಾದಲ್ಲೇ‌ ಲಾಕ್ ಡೌನ್ ಜಾರಿಯಲ್ಲಿದೆ. ಶಿವಮೊಗ್ಗದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಬೀದಿಗಿಳಿದವರ ಬೈಕ್ ಗಳನ್ನು ಪೊಲೀಸರು ಸೀಸ್ ಮಾಡಲಾರಂಭಿಸಿದ್ದಾರೆ. ಹೌದು ಲಾಕ್ ಡೌನ್ ಆರಂಭದಲ್ಲಿ ಬೀದಿಗಿಳಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದರು. ಆದರೂ ಜನ ಬೀದಿಗಿಳಿಯುವುದು ಕಡಿಮೆಯಾಗಿರಲಿಲ್ಲ ಆಗ ಪೊಲೀಸರು ಬೀದಿಗಿಳಿದ ಬೈಕ್ ಸವಾರರ ಮೇಲೆ‌ ಕೇಸು ದಾಖಲಿಸಲು ಆರಂಭಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಅನಾವಶ್ಯಕವಾಗಿ ಬೈಕ್ ನಲ್ಲಿ ಓಡಾಡುವವರ ಮೇಲೆ ಕೇಸ್ ದಾಖಲಿಸುವ ಜೊತೆಗೆ ಬೈಕ್ ಗಳನ್ನು ಸೀಸ್ ಮಾಡಲಾರಂಭಿಸಿದ್ದಾರೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ ಬರೋಬ್ಬರಿ 176 ಬೈಕ್ ಗಳನ್ನು ಸೀಸ್ ಮಾಡಲಾಗಿದೆ. ಹೀಗಾಗಿ ಲಾಕ್ ಡೌನ್ ಮಧ್ಯೆ ಅನಾವಶ್ಯಕವಾಗಿ ಓಡಾಡುವ ಬೈಕ್ ಸವಾರರಲ್ಲಿ‌ ನಡುಕ ಉಂಟಾಗಿದೆ.

Leave a Reply

Your email address will not be published. Required fields are marked *

*