ಶಿವಮೊಗ್ಗ: ವಿಶ್ವದಾದ್ಯಂತ ತಲ್ಲಣ ಮೂಡಿಸಿದ ಕರೋನಾ ವೈರಸ್ ತಡೆಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ಸರ್ಕಾರಕ್ಕೆ ನೀಡಿದ್ದಾರೆ. ಹೌದು ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪಾಲಿಕೆಯ 10 ಸದಸ್ಯರು ತಲಾ ತಮ್ಮ ಒಂದು ತಿಂಗಳ ಗೌರವ ಧನ 6000 ರೂಪಾಯಿಯನ್ನು ಅಂದರೆ ಒಟ್ಟು 60 ಸಾವಿರ ರೂಪಾಯಿಯನ್ನು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದರು. ಈ ಗೌರವ ಧನವನ್ನು ಆಹಾರ ಪದಾರ್ಥಗಳ ಸರಬರಾಜಿಗೆ ಉಪಯೋಗಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ಮೆಹಾಕ್ ಶರೀಫ್, ಆರ್.ಸಿ. ನಾಯ್ಕ್, ಶಾಮೀರ್ ಖಾನ್,
ಮಂಜುಳ ಶಿವಣ್ಣ, ಆರ್. ಸತ್ಯನಾರಾಯಣ ರಾಜು, ಕಾಂಗ್ರೆಸ್ ಮುಖಂಡರಾದ ಕೆ.ರಂಗನಾಥ್ , ರಂಗೇಗೌಡ , ಹೆಚ್.ಪಿ.ಗಿರೀಶ್ , ಶಿವಣ್ಣ , ಎಂ.ಡಿ.ಷರೀಫ್ , ಶರತ್ ಮತ್ತಿತರರಿದ್ದರು.
C News TV Kannada News Online in cnewstv