Breaking News

ಪ್ರತಿ ವಾರ್ಡ್‍ನಲ್ಲಿ ಹಾಪ್‍ಕಾಮ್ಸ್ ಮಳಿಗೆ ಆರಂಭಕ್ಕೆ ನೆರವು: ಸಚಿವ ಕೆ.ಎಸ್.ಈಶ್ವರಪ್ಪ

 

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಹಾಪ್‍ಕಾಮ್ಸ್ ತರಕಾರಿ ಮತ್ತು ಹಣ್ಣು ಮಾರಾಟ ಮಳಿಗೆ ಆರಂಭಿಸಲು ಸ್ಥಳ ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಅವರು ಶನಿವಾರ ಹಾಪ್‍ಕಾಮ್ಸ್ ಸಭಾಂಗಣದಲ್ಲಿ ಶಿವಮೊಗ್ಗ ನಗರದಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಸುಗಮ ಪೂರೈಕೆಗಾಗಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು.

ಶಿವಮೊಗ್ಗ ನಗರದಲ್ಲಿ ಪ್ರಸ್ತುತ 15ಹಾಪ್‍ಕಾಮ್ಸ್ ಮಳಿಗೆಗಳಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಎಲ್ಲಾ 20 ವಾರ್ಡ್‍ಗಳಲ್ಲಿ ಸಹ ಹಾಪ್‍ಕಾಮ್ಸ್ ಮಳಿಗೆ ಆರಂಭಿಸಲು ಸೂಕ್ತ ಸ್ಥಳವನ್ನು ತಕ್ಷಣ ಗುರುತಿಸಬೇಕು. ನೆಲಬಾಡಿಗೆ ಆಧಾರದಲ್ಲಿ ಸ್ಥಳವನ್ನು ನೀಡಿದರೆ ಹಾಪ್‍ಕಾಮ್ಸ್ ತನ್ನ ವೆಚ್ಚದಲ್ಲಿ ಮಳಿಗೆ ನಿರ್ಮಿಸಲಿದೆ ಎಂದು ಸಚಿವರು ಹೇಳಿದರು.

ಕರೋನಾ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಒಟ್ಟು 32 ವಾಹನಗಳನ್ನು ಬಳಸಿಕೊಂಡು ಎಲ್ಲಾ ಬಡಾವಣೆ, ವಾರ್ಡ್‍ಗಳಲ್ಲಿ ಹಣ್ಣು ಹಂಪಲು ಮತ್ತು ತರಕಾರಿ ಮಾರಾಟ ನಡೆಸಲಾಗುತ್ತಿದೆ. ಬೇಡಿಕೆ ಬಂದರೆ ಇನ್ನಷ್ಟು ವಾಹನಗಳಿಗೆ ಅನುಮತಿಯನ್ನು ನೀಡಲಾಗುವುದು. ಈ ವಾಹನಗಳಲ್ಲಿ ಉತ್ಪನ್ನಗಳ ದರವನ್ನು ನಿಗದಿಪಡಿಸಿದ ಪಟ್ಟಿಯನ್ನು ಅಂಟಿಸಲಾಗಿದ್ದು, ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಬೆಳೆಗಾರರಿಂದ ಉತ್ಪನ್ನಗಳನ್ನು ಖರೀದಿಸಲು ಹಾಪ್‍ಕಾಮ್ಸ್‍ಗೆ ತಕ್ಷಣ 50ಲಕ್ಷ ರೂ. ದುಡಿಯುವ ಬಂಡವಾಳವನ್ನು ಒದಗಿಸುವಂತೆ ಹಾಪ್‍ಕಾಮ್ಸ್ ಪ್ರತಿನಿಧಿಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ, ತೋಟಗಾರಿಕಾ ಇಲಾಖಾ ಸಚಿವರು ಹಾಗೂ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು ಆದಷ್ಟು ಬೇಗನೆ ದುಡಿಯುವ ಬಂಡವಾಳ ಒದಗಿಸುವುದಾಗಿ ತಿಳಿಸಿದರು.

 

Leave a Reply

Your email address will not be published. Required fields are marked *

*