Breaking News

Tag Archives: Shivamoga

ಶಿವಮೊಗ್ಗದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

  ಶಿವಮೊಗ್ಗ: ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ರೈತ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ದಿನವಾದ ಇಂದು ಬೆಳಗಿನ ಜಾವದಿಂದಲೇ ಜನ ಜೀವನ ಎಂದಿನಂತಿತ್ತು. ಕೆಎಸ್ ಆರ್ ಟಿಸಿ ಹಾಗೂ ಖಾಸಗಿ ಬಸ್ ಸೇವೆ ಎಂದಿನಂತಿತ್ತು. ಆಟೋಗಳು ಸಹ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದ್ದವು. ಅಂಗಡಿ ಮುಂಗಟ್ಟುಗಳು ಎಂದಿನಂತೆಯೇ ತೆರೆದಿದ್ದು ವರ್ತಕರು ವ್ಯಾಪಾರ ಆರಂಭಿಸಿದ್ದಾರೆ. ಒಟ್ಟಾರೆ ಶಿವಮೊಗ್ಗದಲ್ಲಿ ಭಾರತ್ ಬಂದ್ ಎನ್ನುವುದು ಪ್ರತಿಭಟನೆಗಷ್ಟೇ ಸೀಮಿತವಾಗುವ ಸಾಧ್ಯತೆಯಿದೆ.

Read More »

ಕುವೆಂಪು ಆಶಿಸಿದ ಭಾರತ ಉಳಿಸಿಕೊಳ್ಳೋಣ: ಬಸವ ಮರಳಸಿದ್ದ ಸ್ವಾಮೀಜಿ

  ಶಿವಮೊಗ್ಗ: ಭಾರತದ ಬಲವೇ ಅನೇಕತೆಯಲ್ಲಿ ಏಕತೆ ಎಂಬುದಾಗಿದೆ. ಕುವೆಂಪು ಅವರಂಥ ಮಹಾಕವಿಗಳು ಹೇಳಿದಂತೆ ಹಿಂದೂ, ಕ್ರೈಸ್ತ, ಮುಸಲ್ಮಾನ ಪಾರಸಿಕ ಜೈನರುದ್ಯಾನವೆಂಬುದೇ ಭಾರತದ ಹೆಗ್ಗಳಿಕೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಶರಣರು ಹೇಳಿದರು‌. ನಗರದ ಪತ್ರಿಕಾ ಭವನದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ನಡೆದ ಸಂವಿಧಾನ ಪ್ರಸ್ತಾವನೆಯ ಓದು, ಕುವೆಂಪು ಗೀತಗಾಯನ, ನಾಡಗೀತೆ ವಾಚನ ಮತ್ತು ಸರ್ವಧರ್ಮ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಮತ-ಧರ್ಮ, ತತ್ವ, ಸಿದ್ಧಾಂತಗಳಿಗೂ ಈ ದೇಶ ನೆಲೆಯಾಗಿದೆ. ಎಲ್ಲವನ್ನೂ ಪೊರೆದಿದೆ. ಎಲ್ಲರ ಸಹಬಾಳ್ವೆಯ, ಸಾಮರಸ್ಯದಲ್ಲೇ ಎಲ್ಲರ ಹಿತವಿದೆ. ಏಳಿಗೆ ...

Read More »

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ 19ಕ್ಕೆ

ಶಿವಮೊಗ್ಗ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲವೇ. ಹೀಗೊಂದು ಪ್ರಶ್ನೆ ಇದೀಗ ಉದ್ಭವಿಸಿದೆ. ಎರಡು ದಿನಗಳ ಹಿಂದೆ ಕಾಯ್ದೆ ವಿರೋಧಿಸಿ ಶಿವಮೊಗ್ಗದ ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಡಿಸೆಂಬರ್ 19 ರಂದು ಜಿಲ್ಲಾ ಕಾಂಗ್ರೆಸ್ ನಿಂದ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಆದರೆ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ...

Read More »

ಜನರು ಇಟ್ಟ ನಂಬಿಕೆ ಗೆ ನಾವು ಮೋಸ ಮಾಡಿಲ್ಲ, ಉತ್ತಮ ಆಡಳಿತ ನಡೆಸಿದ್ದೇವೆ- ಎಸ್ ಎನ್ ಚನ್ನಬಸಪ್ಪ

ಶಿವಮೊಗ್ಗ: ಇಂದು ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು ಮಹಾನಗರ ಪಾಲಿಕೆ ಉಪಮೇಯರ್ ಎಸ್ ಎನ್ ಚನ್ನಬಸಪ್ಪ,, ಮಹಾನಗರಪಾಲಿಕೆಯಲ್ಲಿ ಕಳೆದ ಒಂದು ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಆಡಳಿತ ಮಂಡಳಿ ಉತ್ತಮ ಕೆಲಸ ಮಾಡುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಿವಮೊಗ್ಗ ನಗರದಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇವುಗಳನ್ನು ಮಾಡುವ ಸಂದರ್ಭದಲ್ಲಿ ನಾಗರಿಕರಿಗೆ ಒಂದಿಷ್ಟು ತೊಂದರೆಯಾಗಿರುವುದು ನಿಜ. ಆದರೆ ಅಭಿವೃದಿಯಾಗಬೇಕಾದರೆ ಸಣ್ಣಪುಟ್ಟ ತೊಂದರೆಗಳು ಸಹಜವಾಗಿರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತವೆ. ಈಗಾಗಲೇ ಅಭಿವೃದಿಯ ಉತ್ತಮ ಹೆಜ್ಜೆ ಇಟ್ಟಿದ್ದೇವೆ. ಮುಂದಿನ ಎರಡು ವರ್ಷಗಳ ಅವಧಿ ಯಲ್ಲಿ ...

Read More »

ಮಾತೃ ವಂದನಾ ಯೋಜನೆ ಪ್ರಯೋಜನ ಎಲ್ಲಾ ಗರ್ಭಿಣಿ, ಬಾಣಂತಿಯರು ಪಡೆದುಕೊಳ್ಳಬೇಕು: ಎಂ.ಎಲ್.ವೈಶಾಲಿ

  ಶಿವಮೊಗ್ಗ: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಲಾಭವನ್ನು ಎಲ್ಲಾ ಗರ್ಭಿಣಿಯರು ಹಾಗೂ ಬಾಣಂತಿಯರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು. ಅವರು ಸೋಮವಾರ ಶರಾವತಿ ನಗರದ ಅಂಗನವಾಡಿಯಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಮಗುವಿನ ಜನನ ಪೂರ್ವ ಹಾಗೂ ನಂತರದ ಆರೈಕೆಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಗರ್ಭಿಣಿ/ಬಾಣಂತಿ ಮಹಿಳೆಯರಿಗೆ 5ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುವುದು. ಈ ಯೋಜನೆ ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತವಾಗಿದೆ. ...

Read More »

ISAFF India ಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸ್ಟೆಪ್ ಹೊಲ್ಡರ್ಸ್ ನೃತ್ಯ ಸಂಸ್ಥೆಯ 43 ಪ್ರತಿಭೆಗಳು.

  ಹೈದರಾಬಾದ್ ನಲ್ಲಿ ನಡೆಯುತ್ತಿರುವ ಇಂಡಿಯನ್ ಸ್ಪೋರ್ಟ್ಸ್ ಏರೋಬಿಕ್ಸ್ ಅಂಡ್ ಫಿಟ್ನೆಸ್ ಫೆಡರೇಶನ್ ಅವರು ನಡೆಸುತ್ತಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಟೆಪ್ ಹೊಲ್ಡರ್ಸ್ ನೃತ್ಯ ಸಂಸ್ಥೆಯ 43 ಮಕ್ಕಳು ಕರ್ನಾಟಕವನ್ನ ಪ್ರತಿನಿಧಿಸಲಿದ್ದಾರೆ. ನವೆಂಬರ್ 29 ರಿಂದ ಡಿಸೆಂಬರ್ 4ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಅಂಡರ್ 10, 12, 14, 19 ವಯೋಮಿತಿಯ ನಾಲ್ಕು ವಿಭಾಗದಲ್ಲಿ ಶಿವಮೊಗ್ಗದ ಸ್ಪರ್ಧಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ISAFF ನಾ ಕಾರ್ಯದರ್ಶಿ ಶುಭ ಹಾಗೂ ಜಿಲ್ಲಾ ಕಾರ್ಯದರ್ಶಿ ಅರುಣ್ ರಾಜ್ ಶೆಟ್ಟಿ ಸಾರಥ್ಯದಲ್ಲಿ ತಂಡ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ...

Read More »

ಸರ್ಕಾರಿ ನೌಕರರೇ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದರೇ?

ಶಿವಮೊಗ್ಗ: ಸರ್ಕಾರಿ ನೌಕರರೇ ಅಂಗಡಿ ಮಾಲೀಕರೊಬ್ಬರ ಮೇಲೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ವಿನೋಬನಗರದ ಪೊಲೀಸ್ ಚೌಕಿ ಬಳಿಯ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಸರ್ಕಾರಿ ನೌಕರರು ಹಲ್ಲೆ ನಡೆಸಿರುವ ಸಿಸಿ ಟಿವಿ ದೃಷ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ನೌಕರರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಆತನ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿ ಕೇಸನ್ನೂ ದಾಖಲಿಸಿ ಜೈಲಿಗೂ ಕಳಿಸಿದ್ದಾರೆ. ಶಿವಮೊಗ್ಗದ ವಿನೋಬನಗರದ ಪೊಲೀಸ್ ಚೌಕಿ ಬಳಿಯಿರುವ ಬಟ್ಟೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಇರಬಹುದು ...

Read More »

ಲೋಕಕಲ್ಯಾಣಾರ್ಥ ಕೆಎಸ್ ಈಶ್ವರಪ್ಪ ಮನೆಯಲ್ಲಿ ಚಂಡಿಕಾಯಾಗ.

  ಲೋಕಕಲ್ಯಾಣಾರ್ಥ ಪ್ರತಿವರ್ಷದಂತೆ ಈ ಬಾರಿಯೂ ಸಹ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆಎಸ್ ಈಶ್ವರಪ್ಪನವರ ಮನೆಯಲ್ಲಿ ಚಂಡಿಕಾಯಾಗವನ್ನು ನಡೆಸಲಾಯಿತು‌. ಯಾಗಕ್ಕೆ ಮೊದಲು ತಮ್ಮ ಮನೆ ದೇವರಾದ ಮಲ್ಲೇಶ್ವರ ದೇವರನ್ನು ಸಚಿವ ಕೆಎಸ್ ಈಶ್ವರಪ್ಪ ತಲೆಯಮೇಲೆ ಹೊತ್ತು ತಂದರು ನಂತರ ದೇವರುಗಳಾದ ಮಲ್ಲೇಶ್ವರ ಹಾಗೂ ಚೌಡಮ್ಮ ದೇವಿಗೆ ಕುಟುಂಬದವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ‌ಬಳಿಕ ಚಂಡಿಕಾಯಾಗ ನೆರವೇರಿಸಲಾಯಿತು.

Read More »

ಸರ್ಕಾರಿ ಶಾಲೆಗಳ ದುರಸ್ತಿ, ಶೌಚಾಲಯ ನಿರ್ಮಾಣಕ್ಕೆ 14.61 ಕೋಟಿ ರೂ. ಅನುದಾನ: ಸಚಿವ ಕೆ.ಎಸ್.ಈಶ್ವರಪ್ಪ

  ಶಿವಮೊಗ್ಗ : ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿಗೆ ಸರ್ಕಾರ 14.61 ಕೋಟಿ ರೂ. ಅನುದಾನ ಒದಗಿಸಿದ್ದು, ಮೂರು ತಿಂಗಳ ಒಳಗಾಗಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತಾಗಿ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ನಗರ ವ್ಯಾಪ್ತಿಯಲ್ಲಿ 86ಶಾಲೆಗಳಲ್ಲಿ ಕೊಠಡಿ ದುರಸ್ತಿಗಾಗಿ ...

Read More »

ಹುತಾತ್ಮರ ದಿನಾಚರಣೆ

ಶಿವಮೊಗ್ಗ: ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಕರ್ತವ್ಯದ ವೇಳೆ‌ ಹುತಾತ್ಮರಾದ ಪೊಲೀಸರಿಗೆ ಹುತಾತ್ಮರ‌ ಸ್ಮಾರಕಕ್ಕೆ ಪುಷ್ಪಗುಚ್ಛವನ್ನಿರಿಸಿ ನಮನ ಸಲ್ಲಿಸಲಾಯಿತು ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ, ಜಿಲ್ಲಾ‌ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು,‌ಎಎಸ್ ಪಿ ಶೇಖರ್ ಸ್ಮಾರಕಕ್ಕೆ ಹೂಚ್ಛವನ್ನಿಟ್ಟು ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಸಂದರ್ಭದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆಯನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ರಕ್ಷಣೆ ಮಾಡುವಾಗ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕರ್ತವ್ಯ ನಿರ್ವಹಿಸುವ ...

Read More »