ಬೆಂಗಳೂರು, ಅಕ್ಟೋಬರ್ 01: ಹಿರಿಯ ನಾಗರೀಕರು ಹಾಗೂ ಗರ್ಭಿಣಿಯರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ 5000 ಮಾಸಾಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರೀಕರ ದಿನ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರೀಕರಿಗೆ 5000 ನೀಡುವುದು ನನ್ನ ಕನಸಾಗಿತ್ತು. ಆದರೆ ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ ಎಂದು ಅವರು ಹೇಳಿದರು.
ನಾವು ಮೈತ್ರಿ ಸರ್ಕಾರದಲ್ಲಿದ್ದೇವೆ, ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ, ಎಲ್ಲವನ್ನೂ ಒಮ್ಮೆಲೆ ಮಾಡಲು ಸಾಧ್ಯವಿಲ್ಲ ಹಾಗಾಗಿ ಹಂತ-ಹಂತವಾಗಿ ಕಾರ್ಯ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
600 ಇದ್ದ ಮಾಸಾಸನವನ್ನು ಈಗಾಗಲೇ 1000 ಕ್ಕೆ ಏರಿಸಲಾಗಿದೆ. ಮುಂದಿನ ವರ್ಷ ಅದನ್ನು ಎರಡು ಸಾವಿರಕ್ಕೆ ಏರಿಸಲಾಗುವುದು. ಅದರ ಮುಂದಿನ ವರ್ಷ 3000 ಕ್ಕೆ ಏರಿಸುತ್ತೇವೆ ಹೀಗೆ ಪ್ರತಿ ವರ್ಷ ಮಾಆಶನ ಏರಿಸುತ್ತೇವೆ ಎಂದು ಅವರು ಹೇಳಿದರು.
ನಮ್ಮ ಸರ್ಕಾರ 45 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ಸಾಲಮನ್ನಾ ಮಾಡಿದ್ದೇವೆ ಎಂದು ಬೇರೆ ಯೋಜನೆಗಳನ್ನು ಬದಿಗೆ ಸರಿಸಿಲ್ಲ, ನಾವು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ, ಅದು ಟೀಕಾಕಾರರಿಗೆ ಕಾಣುತ್ತಿಲ್ಲ ಎಂದು ಅವರು ಹೇಳಿದರು.
Recent Comments