ರೋಚಕ ಜಯ ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ : ಪ್ಲೇಆಫ್ ಪ್ರವೇಶ ಖಚಿತ.
Cnewstv.in / 19.05.2022 / ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರೋಚಕ ಜಯ ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ : ಪ್ಲೇಆಫ್ ಪ್ರವೇಶ ಖಚಿತ.
ಮುಂಬೈ : ಇಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಎದುರು ಲಕ್ನೋ ಸೂಪರ್ ಜೈಂಟ್ಸ್ ತಂಡ ರೋಚಕ ಜಯ ಸಾಧಿಸಿದೆ.
ಲಖನೌ ಸೂಪರ್ ಜೈಂಟ್ಸ್ 2 ರನ್ ಗಳ ವಿರೋಚಿತ ಜಯ ದಾಖಲಿಸುವ ಮೂಲಕ ಪ್ಲೇಆಫ್ ಪ್ರವೇಶ ಅಧಿಕೃತಗೊಂಡಿದೆ. ಉಳಿದಿರುವ ಎರಡು ಸ್ಥಾನಗಳಲ್ಲಿ ಒಂದು ರಾಜಸ್ಥಾನಕ್ಕೆ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಬೆಂಗಳೂರು, ಡೆಲ್ಲಿ, ಹೈದರಾಬಾದ್ ನಡುವೆ ಪೈಪೋಟಿಯಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಒಂದೂ ವಿಕೆಟ್ ಕಳೆದುಕೊಳ್ಳದೇ 20 ಓವರ್‌ಗಳಲ್ಲಿ 210 ರನ್ ಪೇರಿಸಿತು. ಇದನ್ನು ಬೆನ್ನತ್ತಿದ ಕೋಲ್ಕತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 208 ರನ್ ಗಳಿಸಿತು. ಇಡೀ ಪಂದ್ಯ ಅತ್ಯಂತ ರೋಚಕವಾಗಿ ನಡೆಯಿತು. ಕಡೆಯ ಓವರ್‌ನ ಕಡೆಯ ಎಸೆತದವರೆಗೂ ಕೋಲ್ಕತ ಗೆಲುವು ಸಾಧಿಸಲು ಪೂರ್ಣ ಅವಕಾಶಗಳಿತ್ತು. ಆದರೆ ಕಡೆಯೆರಡು ಎಸೆತಗಳಲ್ಲಿ ಮಾರ್ಕಸ್ ಸ್ಟಾಯಿನಿಸ್ ಎರಡು ವಿಕೆಟ್ ಕಿತ್ತು ಪರಿಸ್ಥಿತಿಯನ್ನು ಬದಲಿಸಿದರು.
ಇದನ್ನು ಒದಿ : https://cnewstv.in/?p=9859
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2022-05-18
Recent Comments