cnewstv | 23.01.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗದಲ್ಲಿ ಪ್ರತ್ಯೇಕ ಸ್ಟುಡಿಯೋ ಸ್ಥಾಪಿಸಲಾಗುತ್ತದೆ – ಕೇಂದ್ರ ಸಚಿವ ಡಾ.ಮುರುಗನ್.
ಶಿವಮೊಗ್ಗ : ಸಂಸದರ ನಿರಂತರ ಪ್ರಯತ್ನದ ಫಲವಾಗಿ ಮರು ಪ್ರಸಾರ ಟ್ರಾನ್ಸ್ ಮೀಟರ್ ಸ್ಥಾಪನೆ ಸಾಧ್ಯವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತ್ಯೇಕ ಸ್ಟುಡಿಯೋ ಸ್ಥಾಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಅಗತ್ಯ ನೆರವು ನೀಡಲಿದೆ ಎಂದು
ಕೇಂದ್ರ ಸಚಿವ ಡಾ.ಮುರುಗನ್ ಹೇಳಿದ್ದಾರೆ.
ಇಂದಿ ಶಿವಮೊಗ್ಗದಲ್ಲಿ ದೂರದರ್ಶನ ಅಧಿಕ ಶಕ್ತಿ ಮರು ಪ್ರಸಾರ ಕೇಂದ್ರದಲ್ಲಿ ಭದ್ರಾವತಿ ಆಕಾಶವಾಣಿಯ ೧೦ ಕೆವಿ ಎಫ್ ಎಂ ಟ್ರಾನ್ಸ್ ಮಿಷನ್ ಅಳವಡಿಕೆ ಕಾರ್ಯಕ್ರಮಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಡಾ.ಎಲ್.ಮುರುಗನ್ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಡಿಡಿಯನ್ನು ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಉನ್ನತೀಕರಿಸಲಾಗುತ್ತಿದೆ.
ಉನ್ನತೀಕರಣಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ಕೇಂದ್ರ ನೀಡುತ್ತಿದೆ.
ರಾಣೆಬೆನ್ನೂರು, ಉಡುಪಿ ಸೇರಿದಂತೆ ರಾಜ್ಯದ 4 ಕಡೆ ಕೇಂದ್ರ ಕಾರ್ಯಾರಂಭ ಮಾಡಲಿದೆ. ಶಿವಮೊಗ್ಗದ ಈ ಕೇಂದ್ರ 20 ಕಿ.ಮೀ.ವ್ಯಾಪ್ತಿಯಲ್ಲಿ ತನ್ನ ಪ್ರಸಾರ ಮಾಡಲಿದೆ.ಮಾಹಿತಿ, ಸರ್ಕಾರದ ಯೋಜನೆ ಮತ್ತಿತರ ಮಾಹಿತಿ ಹಂಚಿಕೊಳ್ಳಲು ನೆರವಾಗಲಿದೆ.ಸ್ಥಳೀಯ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ದೂರದರ್ಶನ ಹಾಗೂ ಆಕಾಶವಾಣಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039
ಇದನ್ನು ಇದಿ…
C News TV Kannada News Online in cnewstv