ಚಾಲಕನ ಎಡವಟ್ಟು, ಕೊಲ್ಲೂರಿಗೆ ಹೊರಟ ಯಾತ್ರಾರ್ಥಿಗಳು ತಲುಪಿದ್ದು ಗೋವಾ ಬೀಚ್..
Cnewstv.in / 18.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚಾಲಕನ ಎಡವಟ್ಟು, ಕೊಲ್ಲೂರಿಗೆ ಹೊರಟ ಯಾತ್ರಾರ್ಥಿಗಳು ತಲುಪಿದ್ದು ಗೋವಾ ಬೀಚ್..
ಬೆಂಗಳೂರು : ಚಾಲಕನ ಎಡವಟ್ಟಿನಿಂದ ಕೊಲ್ಲೂರಿಗೆ ಹೊರಟವರು ಗೋವಾ ಬೀಚ್ ತಲುಪಿದ ಘಟನೆ ನಡೆದಿದೆ.
ಹೌದು ಚಾಲಕನ ಸಣ್ಣ ಎಡವಟ್ಟಿನಿಂದಾಗಿ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನವನ್ನು ಮಾಡಲು ಹೊರಟಿದ್ದ ಯಾತ್ರಾರ್ಥಿಗಳು ಗೋವಾ ಬೀಚ್ ತಲುಪಿದ್ದಾರೆ.
ಮೇ 15ರಂದು ತಿರುವನಂತಪುರಂ ನಿಂದ ಕೊಲ್ಲೂರಿಗೆ ಯಾತ್ರಾರ್ಥಿಗಳು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮೂಲಕ ಹೊರಟಿದ್ದಾರೆ. ಎರ್ನಾಕುಲಂ ವರೆಗೆ ಒಬ್ಬ ಚಾಲಕ ಬಸ್ ಚಲಾಯಿಸಿದ್ದು, ಅಲ್ಲಿಂದ ಮತ್ತೋರ್ವ ಚಾಲಕ ಕೊಲ್ಲೂರಿನ ಬದಲಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಗೋವಾಗೆ ಬಂದಿದ್ದಾನೆ.
ಬಸ್ಸಿನಲ್ಲಿದ್ದ ಯಾತ್ರಾರ್ಥಿಗಳು ಬೆಳಿಗ್ಗೆ ಕಣ್ಣು ತೆರೆದಾಗ ಕೊಲ್ಲೂರಿನ ಬದಲಾಗಿ ಗೋವಾ ಬೀಚ್ ನಲ್ಲಿದ್ದಾರೆ. ನಂತರ ಚಾಲಕನನ್ನು ತರಾಟೆಗೆ ತೆಗೆದುಕೊಂಡಾಗ ಗೂಗಲ್ ಮ್ಯಾಪ್ ನಿಂದ ತಪ್ಪಾಗಿ ಇಲ್ಲಿಯ ಬಂದಿದ್ದಾಗಿ ತಿಳಿಸಿದ್ದಾನೆ. ನಂತರ ಪ್ರಯಾಣಿಕರನ್ನು ಕೊಲ್ಲೂರಿಗೆ ಕರೆದುಕೊಂಡು ಹೋಗಿದ್ದಾರೆ. ದೇವರ ದರ್ಶನವನ್ನು ಮಾಡಿ ನಂತರ ಊರಿಗೆ ವಾಪಸಾಗಿದ್ದಾರೆ.
ಇದನ್ನು ಒದಿ : https://cnewstv.in/?p=9855
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಕೊಲ್ಲೂರಿಗೆ ಹೊರಟ ಯಾತ್ರಾರ್ಥಿಗಳು ತಲುಪಿದ್ದು ಗೋವಾ ಬೀಚ್.. ಚಾಲಕನ ಎಡವಟ್ಟು 2022-05-18
Recent Comments