ಬುದ್ಧ ಪೂರ್ಣಿಮೆ ವಿಶೇಷ…
Cnewstv.in / 16.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬುದ್ಧ ಪೂರ್ಣಿಮೆ ವಿಶೇಷ…
ವೈಶಾಖ ಮಾಸದ ಹುಣ್ಣಿಮೆಯ ದಿನಾಂಕದಂದು ಭಗವಾನ್ ಗೌತಮ ಬುದ್ಧನ (Buddha) ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ಭಗವಾನ್ ಬುದ್ಧನಿಗೂ ಜ್ಞಾನೋದಯವಾಯಿತು ಎಂದು ಹೇಳಲಾಗುತ್ತದೆ. ಇಂದು ಬುದ್ದ ಜಯಂತಿ. ಅನೇಕ ದೇಶಗಳಲ್ಲಿ ಬುದ್ಧ ಪೂರ್ಣಿಮೆಯನ್ನು ಆಚರಿಸುವ ವಿಭಿನ್ನ ವಿಧಾನಗಳಿವೆ. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ಅನುಯಾಯಿಗಳು ಗೌತಮ ಬುದ್ಧನ ಜನ್ಮದಿನ ಆಚರಿಸಲಾಗುತ್ತದೆ.
ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.
ಕಪಿಲ ವಸ್ತುವಿನ ಸಿಂಹಹನುವಿನ ಮಗ ಶುದ್ಧೋದನ. ಶುದ್ಧೋದನನಿಗೆ ತಂದೆ ಸಿಂಹಹನು ತನ್ನ ನೆರೆಯ ರಾಜ್ಯದ ದೊರೆ ಸುಪ್ರಬುದ್ಧನ ಮಕ್ಕಳಾದ ಪ್ರಜಾಪತಿದೇವಿ ಮತ್ತು ಮಾಯಾದೇವಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿದರು. ಶುದ್ಧೋದನನ ಪಟ್ಟ ಮಹಿಷಿ ಮಾಯಾದೇವಿ. ಬುದ್ಧ ಲುಂಬಿನಿ ವನದಲ್ಲಿ, ವೈಶಾಖ ಶುದ್ಧ ಪೌರ್ಣಮಿಯಂದು ಶುದ್ಧೋದನ ಮತ್ತು ಮಾಯಾದೇವಿಯ ಮಗನಾಗಿ ಜನಿಸುತ್ತಾನೆ.
ಮಗುವಿಗೆ ಏಳು ದಿನವಾದಾಗ, ತಾಯಿ ಮಾಯಾದೇವಿ ಅಸುನೀಗಿದಳು. ನಂತರ ಮಗುವನ್ನು ಎರಡನೆ ತಾಯಿ ಪ್ರಜಾಪತಿದೇವಿ ಸಾಕಿ ಸಲಹುತ್ತಾಳೆ. (ಸಿದ್ದಾರ್ಥ ಕ್ರಿ.ಪೂ.೫೪೪ರಲ್ಲಿ, ಕ್ರಿ.ಪೂ.೫೫೦ರಲ್ಲಿ, ಕ್ರಿ.ಪೂ.೫೬೦ರಲ್ಲಿ ಜನಿಸಿದನೆಂದು ಭಿನ್ನಾಭಿಪ್ರಾಯಗಳಿವೆ. ಕ್ರಿ.ಪೂ.೬೨೩ನೇ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧ ಜನಿಸಿದನೆಂದು.
ಬುದ್ದನಾ ಮೊದಲ ಹೆಸರು ಸಿದ್ದಾರ್ಥ. ಪ್ರಜಾಪತಿದೇವಿ ಸಾಕಿದ್ದರಿಂದ ಪ್ರಜಾಪತಿ ಗೌತಮನೆಂದೂ, ಜ್ಞಾನ ಸಂಪಾದನೆಯಾದ ಮೇಲೆ ಬುದ್ಧನೆಂದು ಕರೆಯಲಾಗಿದೆ. ಬೌದ್ಧಧರ್ಮದಲ್ಲಿ ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ. ಗೌತಮ ಬುದ್ಧನೆಂಬ ಹೆಸರು ಜನಪ್ರಿಯವಾಗಿದೆ.
ಸಿದ್ದಾರ್ಥ ಜನಿಸಿದಾಗಲೇ ಅವನಲ್ಲಿ ಅಪೂರ್ವವಾದ ಮಾಹಾಪುರುಷನ ಲಕ್ಷಣ ಇರುವುದನ್ನು ದೈವಜ್ಞರು ಅರಿತಿದ್ದರು. ಸಿದ್ದಾರ್ಥನಿಗೆ ೩೨ ಚಿನ್ಹೆಗಳಿದ್ದು, ನೀಳಬಾಹು, ವಿಶಾಲವಾದ ಎದೆ, ಊರ್ಧ್ವಮುಖ ರೋಮಧಾರೆ, ದೇಹವನ್ನು ಬಾಗಿಸದೆ ಮಂಡಿ ಮುಟ್ಟುವಷ್ಟು ನೀಳವಾದ ಕೈಗಳು, ಉದ್ದವಾದ ಬೆರಳುಗಳು, ಅತೀ ಮೃದುವಾದ ಹಸ್ತ ಮತ್ತು ನವಿರಾದ ಪಾದಗಳನ್ನು ಹೊಂದಿದ್ದನೆಂದು ವಿಭೂತಿ ಪುರುಷರಲ್ಲಿ ಇರಬೇಕಾದ ಸರ್ವಲಕ್ಷಣಗಳನ್ನು ದಿಗ್ಗನಿಕಾಯ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.ಅವರ ಮುಖವಿನ ನಗು ಕಮಲ ಅರಳಿದಂತೆ.
ಇದನ್ನು ಒದಿ : https://cnewstv.in/?p=9828
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2022-05-16
Recent Comments