ಇನ್ನೂ ಮುಂದೆ ಸಾಕು ಪ್ರಾಣಿಗಳಿಗೂ ಕೋವಿಡ್ ಟೆಸ್ಟ್…
Cnewstv.in / 09.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇನ್ನೂ ಮುಂದೆ ಸಾಕು ಪ್ರಾಣಿಗಳಿಗೂ ಕೋವಿಡ್ ಟೆಸ್ಟ್…
ಬೆಂಗಳೂರು : ಇನ್ನು ಮುಂದೆ ಸಾಕುಪ್ರಾಣಿಗಳಿಗೂ ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ನಾಲ್ಕನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.
ಸೋಂಕಿತ ವ್ಯಕ್ತಿ ಸಮೀಪಕ್ಕೆ ಬರುವ ಸಾಕುನಾಯಿಗಳು ಹಾಗೂ ಬೆಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಮೃಗಾಲಯದ ಪ್ರಾಣಿಗಳನ್ನು ಸಹ ಪರೀಕ್ಷೆಗೆ ಒಳಪಡಿಸಿ ಅವುಗಳು ಕೂಡ ಸೋಂಕಿಗೆ ತುತ್ತಾಗುತ್ತಿದೆ ಎಂದು ಖಚಿತ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಥೈಲ್ಯಾಂಡಿನ ಖಾಸಗಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಕೊರೊನಾ ಕ್ಚಾರಂಟೈನ್ ಸಮಯದಲ್ಲಿ ಪಶುವೈದ್ಯಕೀಯ ನಾಯಿ ಹಾಗೂ ಬೆಕ್ಕುಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೈದ್ರಾಬಾದ್ ಮತ್ತು ಚೆನ್ನೈ ಮೃಗಾಲಯಗಳಲ್ಲಿ ನ ಪ್ರಾಣಿಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅವುಗಳಿಗೂ ಸಹ ಸೋಂಕು ದೃಢಪಟ್ಟಿದೆ.
ಪ್ರಾಣಿಗಳ ಆರೋಗ್ಯ ಹಿತಾಸಕ್ತಿಯ ಮೇರೆಗೆ ಪ್ರಾಣಿಗಳಿಗೆ ಯಾವ ಮೂಲದಿಂದ ಸೋಂಕು ಬಂದಿದೆ ಹಾಗೂ ಇದು ಮನುಷ್ಯನಿಂದ ಹರಡುತ್ತದೆಯೇ ಎನ್ನುವುದನ್ನು ಅಧ್ಯಯನ ಮಾಡಬೇಕಾಗಿದೆ. ಹೀಗಾಗಿ ಪ್ರಾಣಿಗಳಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಲಹೆ ನೀಡಲಾಗಿದೆ.
ಇದನ್ನು ಒದಿ : https://cnewstv.in/?p=9753
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಇನ್ನೂ ಮುಂದೆ ಸಾಕು ಪ್ರಾಣಿಗಳಿಗೂ ಕೋವಿಡ್ ಟೆಸ್ಟ್... 2022-05-09
Recent Comments