ಕಡಲ ಅಬ್ಬರಕ್ಕೆ ವಾರದೊಳಗೆ ಹಾನಿಯಾದ ರಾಜ್ಯದ ಪ್ರಥಮ ತೇಲುವ ಸೇತುವೆ..
Cnewstv.in / 09.05.2022 / ಉಡುಪಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಡಲ ಅಬ್ಬರಕ್ಕೆ ವಾರದೊಳಗೆ ಹಾನಿಯಾದ ರಾಜ್ಯದ ಪ್ರಥಮ ತೇಲುವ ಸೇತುವೆ..
ಉಡುಪಿ : ಕಡಲ ಅಬ್ಬರಕ್ಕೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿಯ ಮಲ್ಪೆ ಬೀಚ್ ನಲ್ಲಿ ಅನಾವರಣಗೊಂಡ ತೇಲುವ ಸೇತುವೆ ವಾರದೊಳಗೆ ಹಾನಿಯಾಗಿದೆ.
ನಿನ್ನೆ ಭಾನುವಾರ ರಜೆಯ ಹಿನ್ನಲೆಯಲ್ಲಿ ಮಲ್ಪೆ ಬೀಚ್ ನಲ್ಲಿ ಜನ ಸಾಗರವೇ ಸೇರಿತ್ತು. ಆದರೆ ಚಂಡಮಾರುತದ ಪರಿಣಾಮವಾಗಿ ಸಮುದ್ರದಲ್ಲಿ ಬೃಹತ್ ಅಲೆಗಳ ಅಬ್ಬರ ಹೆಚ್ಚಾಗಿತ್ತು.
ಕಡಲ ಅಬ್ಬರಕ್ಕೆ ಹೊಸ ತೇಲುವ ಸೇತುವೆಯ ಲಾಕ್ ತೆಗೆಯುವ ವೇಳೆ ಸೇತುವೆಯ ಭಾಗವನ್ನು ಕಳಚಿಕೊಂಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೊಸ ತೇಲುವ ಸೇತುವೆಯನ್ನು ನೋಡಲು ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು ಆದರೆ ನಿನ್ನೆ ಕಡಲ ಅಬ್ಬರ ಹೆಚ್ಚಿರುವ ಕಾರಣ ಪ್ರವಾಸಿಗರನ್ನು ನೀರಿಗೆ ಇಳಿಯದಂತೆ ಮುಂಜಾಗ್ರತೆ ವಹಿಸಲಾಗಿತ್ತು.
ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಸಂಜೆ 4 ಗಂಟೆಯ ನಂತರ ಬೀಚ್ ನಲ್ಲಿ ವಾಟರ್ ಸ್ಪೋರ್ಟ್ಸ್ ಬಂದ್ ಮಾಡಲಾಗಿತ್ತು. ಹಾಗೂ ನೀರಿನಲ್ಲಿ ಈಜಲು ಹೋದ ಹೊರ ಜಿಲ್ಲೆಯ ಮೂವರು ನೀರು ಪಾಲಾಗುತ್ತಿದ್ದರು, ಅದರೆ ಅವರನ್ನು ಅಲ್ಲಿದ್ದಂತಹ ಲೈಫ್ ಗಾರ್ಡ್ ಗಳು ಕಾಪಾಡಿದ್ದಾರೆ.
ಹಾನಿಯಾಗಿರುವ ತೇಲುವ ಸೇತುವೆ ಮತ್ತೆ ಸುರಕ್ಷಿತವಾಗಿ ಕಾರ್ಯಾರಂಭ ಮಾಡಲಿದೆ. ಲೈವ್ ಜಾಕೆಟ್ ಧರಿಸಿದ ನಂತರವೇ ಸೇತುವೆಯ ಮೇಲೆ ನಡೆಯಲು ಅವಕಾಶ ನೀಡಲಾಗುತ್ತದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕರಾದ ಸಂದೇಶ ಶೆಟ್ಟಿ ಹೇಳಿದ್ದಾರೆ.
ಇದನ್ನು ಒದಿ : https://cnewstv.in/?p=9750
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಕಡಲ ಅಬ್ಬರಕ್ಕೆ ವಾರದೊಳಗೆ ಹಾನಿಯಾದ ರಾಜ್ಯದ ಪ್ರಥಮ ತೇಲುವ ಸೇತುವೆ.. 2022-05-09
Recent Comments