ನಾನು ನಿಮ್ಮ ಬಿಜೆಪಿ ಕಚೇರಿಗೆ ದಾಖಲೆಗಳನ್ನೆಲ್ಲ ತೆಗೆದುಕೊಂಡು ಬರುತ್ತೇನೆ. ನೀವು ನಿಮ್ಮ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಳ್ಳಿ – ಸವಾಲು ಸಾಕಿದ KPCC ವಕ್ತಾರ ಎಂ.ಲಕ್ಷಣ್.
Cnewstv.in / 08.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಾನು ನಿಮ್ಮ ಬಿಜೆಪಿ ಕಚೇರಿಗೆ ದಾಖಲೆಗಳನ್ನೆಲ್ಲ ತೆಗೆದುಕೊಂಡು ಬರುತ್ತೇನೆ. ನೀವು ನಿಮ್ಮ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಳ್ಳಿ – ಸವಾಲು ಸಾಕಿದ KPCC ವಕ್ತಾರ ಎಂ.ಲಕ್ಷಣ್.
ಬೆಂಗಳೂರು : ನೀರವ್ ಮೋದಿ, ವಿಜಯ್ ಮಲ್ಯ, ಮೆಕುಲ್ ಚೋಕ್ಸಿ ಪ್ರಕರಣದಂತೆ ರಾಜ್ಯದಲ್ಲಿ ಮಹಾ ವಂಚನೆ ನಡೆದಿದ್ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ 660 ಕೋಟಿ ರೂ. ಸಾಲ ಪಡೆದಿದ್ದು, ರಾಜ್ಯ ಸರ್ಕಾರದಿಂದ ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪಿಸಿದ್ದಾರೆ.
ಸತ್ಯ ಹರಿಶ್ಚಂದ್ರದ ಮೊಮ್ಮಕ್ಕಳಂತೆ ವರ್ತಿಸುವ ಸಿ.ಟಿ ರವಿ ಅವರೇ ಮುಂದಿನ ವಾರ ನಿಮ್ಮ ದಾಖಲೆಗಳನ್ನು ಬಹಿರಂಗ ಪಡಿಸುತ್ತೇನೆ. ನಾನು ಈ ವಿಚಾರವಾಗಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ನನಗೆ ಲೀಗಲ್ ನೊಟೀಸ್ ನೀಡಿದ್ದು ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ ಎಂದರು.
ಸಿ.ಟಿ ರವಿ ಅವರೇ ನಾನು ನಿಮ್ಮ ಬಿಜೆಪಿ ಕಚೇರಿಗೆ ನಾನು ಈ ದಾಖಲೆಗಳನ್ನೆಲ್ಲ ತೆಗೆದುಕೊಂಡು ಬರುತ್ತೇನೆ. ನೀವು ನಿಮ್ಮ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಂಡು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕು ಸೌಭಾಗ್ಯಲಕ್ಷಿ ಶುಗರ್ ಲಿಮಿಟೆಡ್ ಅಪೆಕ್ಸ್ ಬ್ಯಾಂಕುಗಳ ಅಡಿಯಲ್ಲಿ ಬರುವ ಸುಮಾರು 15 ಬ್ಯಾಂಕುಗಳಿಂದ 366 ಕೋಟಿ ರೂ. ಸಾಲ ಮಾಡಿದ್ದು, ಯೂನಿಯನ್ ಬ್ಯಾಂಕಿನಿಂದ 20 ಕೋಟಿ ರೂ. ಸಾಲ, ತೆರಿಗೆ ಇಲಾಖೆಯಿಂದ 200 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಹರಿಯಂತ್ ಸಹಕಾರಿ ಬ್ಯಾಂಕ್ ನಿಂದ 20 ಕೋಟಿ ರೂ. ಸೇರಿ ಒಟ್ಟು 660 ಕೋಟಿ ರೂ. ಸಾಲ ಹೊಂದಿದ್ದಾರೆ. ಯಾವುದೇ ಪಾವತಿ ಮಾಡದೆ ಇದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
2017ರಲ್ಲಿ ಅಪೆಕ್ಸ್ ಬ್ಯಾಂಕಿನವರು ಸೌಭಾಗ್ಯ ಲಕ್ಷಿ$¾ ಶುಗರ್ಸ್ ಕಂಪನಿಯನ್ನು ಎನ್‌ಪಿಎ ಎಂದು ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮೊತ್ತದ ಎನ್‌ಪಿಎ ಆಗಿರುವ ಕಂಪನಿ ಸೌಭಾಗ್ಯ ಲಕ್ಷಿ$¾ ಶುಗರ್ಸ್. ಬ್ಯಾಂಕಿನವರು ನಿಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ನೊಟೀಸ್ ಜಾರಿಗೊಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಬಿಜೆಪಿ ಸರ್ಕಾರದ ಒತ್ತಡ ಹಾಗೂ ರಕ್ಷಣೆ ಇದೆ ಎಂದು ಆರೋಪಿಸಿದರು.
ಈ ಕಂಪನಿ ದಿವಾಳಿಯಾಗಿದೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೇರೆ ಬ್ಯಾಂಕುಗಳಿಗೆ ಮೂರು ನಾಮ ಹಾಕುವ ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ. ಸರ್ಕಾರ ಇಲ್ಲಿಯವರೆಗೂ ಯಾವುದೇ ಆಕ್ಷೇಪ ಸಲ್ಲಿಸಿಲ್ಲ. ಈ ಷಡ್ಯಂತ್ರದ ಹಿಂದೆ ರಾಜ್ಯ ಸರ್ಕಾರ, ಕೇಂದ್ರದ ಸಹಕಾರ ಸಚಿವಾಲಯದ ಮಂತ್ರಿಗಳು ಅಂದರೆ ಅಮಿತ್ ಶಾ ಅವರು ಇದ್ದಾರೆ ಎಂದು ದೂರಿದರು.
ರಮೇಶ್ ಜಾರಕಿಹೊಳಿ ಅವರು ಕಳೆದ 10 ತಿಂಗಳಲ್ಲಿ 8 ಬಾರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ಇಷ್ಟು ಬಾರಿ ಭೇಟಿ ಮಾಡಿರುವುದು ಏಕೆ ಎಂಬುದು ಈಗ ಅರ್ಥವಾಗುತ್ತದೆ ಎಂದರು. ಇದೆಲ್ಲವನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂತಿರುವುದೇಕೆ. ಎಸ್.ಟಿ ಸೋಮಶೇಖರ್ ಅವರು ಸಹಕಾರ ಮಂತ್ರಿಯಾಗಿದ್ದು, ಅವರು ಏನು ಮಾಡುತ್ತಿದ್ದಾರೆ.ಬೊಮ್ಮಾಯಿ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನು ಒದಿ : https://cnewstv.in/?p=9728
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ನಾನು ನಿಮ್ಮ ಬಿಜೆಪಿ ಕಚೇರಿಗೆ ದಾಖಲೆಗಳನ್ನೆಲ್ಲ ತೆಗೆದುಕೊಂಡು ಬರುತ್ತೇನೆ. ನೀವು ನಿಮ್ಮ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಳ್ಳಿ - ಸವಾಲು ಸಾಕಿದ KPCC ವಕ್ತಾರ ಎಂ.ಲಕ್ಷಣ್. 2022-05-08
Recent Comments