Cnewstv.in / 10.4.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಎಲ್ಲೆಡೆ ಸಡಗರ ಸಂಭ್ರಮದ ಶ್ರೀರಾಮನವಮಿ..
ಇಂದು ಎಲ್ಲೆಡೆ ಸಡಗರ ಸಂಭ್ರಮದಿಂದ ಶ್ರೀರಾಮನವಮಿಯನ್ನು ಆಚರಿಸಲಾಗುತ್ತಿದೆ. ಇಂದು ಬೆಳಗಿನಿಂದಲೇ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಆರಂಭವಾಗಿದೆ.
ವಿಷ್ಣುವಿನ 7ನೇ ಅವತಾರವಾದ ಮರ್ಯಾದೆ ಪುರುಷೋತ್ತಮ ಭಗವಾನ್ ಶ್ರೀರಾಮಚಂದ್ರನ ಹುಟ್ಟಿದ ದಿನವಾದ ಇಂದು ಎಲ್ಲಾ ಆಂಜನೇಯ ಹಾಗೂ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ರಾಮಭಕ್ತರು ಇಂದು ರಾಮ ನಾಮ ಜಪಿಸಿ ಉಪವಾಸವಿದ್ದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ.
ವರ್ಷಕ್ಕೆ ಎರಡು ಬಾರಿ ನವರಾತ್ರಿ ಆಚರಿಸಲಾಗುತ್ತದೆ. ಒಂದು ಚೈತ್ರ ನವರಾತ್ರಿ ಮತ್ತೊಂದು ಶಾರದೀಯಾ ನವರಾತ್ರಿ. ಚೈತ್ರ ನವರಾತ್ರಿ ರಾಮನವಮಿಯಂದು ಮುಕ್ತಾಯವಾಗುತ್ತದೆ. ಶಾರದೀಯ ನವರಾತ್ರಿ ವಿಜಯದಶಮಿಯಂದು ಮುಕ್ತಾಯವಾಗುತ್ತದೆ.
ಕೆಲವುಕಡೆ ರಾಮನ ವಿಗ್ರಹವನ್ನು ಸ್ಥಾಪಿಸಿ ಅದಕ್ಕೆ ಹೂವು, ತುಳಸಿ ಮಲೆಗಳಿಂದ ಅಲಂಕಾರ ಮಾಡುತ್ತಾರೆ ಮತ್ತೆ ಕೆಲವು ಕಡೆಯಲ್ಲಿ ತೊಟ್ಟಿಲಿನಲ್ಲಿ ರಾಮನ ಮೂರ್ತಿಯನ್ನು ಇಟ್ಟು ತೂಗುವ ಪದ್ಧತಿಯಿದೆ
ಇದನ್ನು ಒದಿ : https://cnewstv.in/?p=9334
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments