Cnewstv.in / 14.03.2022 / ಚೀನಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚೀನಾದಲ್ಲಿ ಹೆಚ್ಚಿದ ಕೊರೊನಾ ಅಬ್ಬರ, ಅನೇಕ ನಗರಗಳು ಲಾಕ್ ಡೌನ್.
ಪ್ರಪಂಚದಾದ್ಯಂತ ಕೋವಿಡ್ 19 ಅಬ್ಬರ ಕಡಿಮೆಯಾಗಿದ್ದು ಜನರು ಸಾಮಾನ್ಯ ಜೀವನ ನಡೆಸಲು ಆರಂಭಿಸಿದ್ದಾರೆ. ಆದರೆ ಇದರ ಮಧ್ಯದಲ್ಲೇ ಇದೀಗ ಚೀನಾ ಮತ್ತೊಂದು ಶಾಕ್ ನೀಡಿದೆ.
ಚೀನಾದಲ್ಲಿ ಒಂದೇ ದಿನ ಸುಮಾರು 3400 ಹೊಸ ಸ್ಥಳೀಯ ಪ್ರಕರಣಗಳು ಪತ್ತೆಯಾಗಿದ್ದು ಇದು ಎರಡು ವರ್ಷಗಳಲ್ಲಿ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಮತ್ತೊಮ್ಮೆ ಕೊರೋನಾ ಮಹಾಮಾರಿ ತನ್ನ ಆರ್ಭಟ ಆರಂಭ ಮಾಡಿದೆ.
ಚೀನಾದ ಹಲವು ನಗರಗಳನ್ನು ಈಗಾಗಲೇ ಲಾಕ್ ಡೌನ್ ಮಾಡಲಾಗಿದೆ. ಅದರಲ್ಲಿಯೂ ಜಿಲಿನ್ ನಗರ ಸಂಪೂರ್ಣ ಲಕ್ ಡೌನ್ ಮಾಡಲಾಗಿದೆ. ಶಾಲೆಗಳನ್ನು ಬಂದ್ ಮಾಡಲು ಸ್ಥಳೀಯ ಅಧಿಕಾರಿಗಳು ಆದೇಶ ನೀಡಿದ್ದಾರೆ. ಸಾಮೂಹಿಕ ಸಾರಿಗೆ ಸಂಚಾರ ಬಂದ್ ಮಾಡಲಾಗಿತ್ತು. ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ.
ಉತ್ತರ ಕೊರಿಯಾಕ್ಕೆ ಹೊಂದಿಕೊಂಡಿರುವ ಗಡಿ ನಗರ ಯಾಂಜಿಯನ್ನು ಸಂಪೂರ್ಣವಾಗಿ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ. ಇಡೀ ಈಶಾನ್ಯ ನಗರಗಳು, ಬಹುತೇಕ 18 ಪ್ರಾಂತ್ಯಗಳು ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳ ಸಮೂಹಗಳೊಂದಿಗೆ ಹೋರಾಡುತ್ತಿವೆ.
ಇದನ್ನು ಒದಿ : https://cnewstv.in/?p=9009
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv