ಕೇವಲ 8 ದಿನಗಳ ಮಿಷನ್‌, 9 ತಿಂಗಳಿಗೆ ವಿಸ್ತರಣೆ ಅಗಿದ್ದು ಏಕೆ ??

Cnewstv | 19.03.2025 | ನವದೆಹಲಿ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕೇವಲ 8 ದಿನಗಳ ಮಿಷನ್‌, 9 ತಿಂಗಳಿಗೆ ವಿಸ್ತರಣೆ ಅಗಿದ್ದು ಏಕೆ ??

ನವದೆಹಲಿ : 8 ದಿನದ ಮಿಷನ್ 9 ತಿಂಗಳಿಗೆ ವಿಸ್ತರಣೆ ಬೋಯಿಂಗ್ ಸ್ಟಾರ್‌ಲೈನರ್ ನೌಕೆ ಮೂಲಕ 8 ದಿನಗಳ ಅಧ್ಯಯನ ಮಿಷನ್‌ಗಾಗಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಿದ್ದರು.

ಜೂನ್ 5 ರಂದು ನೌಕೆ ಉಡಾವಣೆಗೊಂಡಿತ್ತು. ನಾಸಾ ವೇಳಾಪಟ್ಟಿ ಪ್ರಕಾರ ಜೂನ್ 14 ರಂದು ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಲಿಯಂ ಸೋರಿಕೆ ಸರಿಪಡಿಸುವ ಪ್ರಯತ್ನಗಳು ನಡೆದಿತ್ತು. ಇದು ಮಾರ್ಗಮಧ್ಯದಲ್ಲೇ ಸ್ಫೋಟಗೊಳ್ಳುವ ಸಂಭವವಿತ್ತು. ಒಂದೊಮ್ಮೆ ಹೀಗಾಗಿದ್ದರೆ, ಕಲ್ಪನಾ ಚಾವ್ಲಾರನ್ನು ಕಳೆದುಕೊಂಡ ಕಹಿಘಟನೆ ಮತ್ತೊಮ್ಮೆ ಮರುಕಳಿಸುವ ಹಾಗೂ ಬೋಯಿಂಗ್‌ನ ಚೊಚ್ಚಲ ಸಿಬ್ಬಂದಿಸಹಿತ ಮಿಷನ್‌ ಮಣ್ಣುಪಾಲಾಗುವ ಆತಂಕವಿತ್ತು. ಈ ಅನಾಹುತವನ್ನು ತಪ್ಪಿಸಲು ಸುನಿತಾರನ್ನು ಐಎಸ್‌ಎಸ್‌ನಲ್ಲೇ ಇರಿಸಿ, ಸಿಬ್ಬಂದಿರಹಿತ ಕ್ಯಾಪ್ಸೂಲನ್ನು ಕರೆಸಿಕೊಳ್ಳಲಾಯಿತು. ಹೀಗಾಗಿ ಗಗನಯಾತ್ರಿಗಳು ಮರಳುವ ದಿನಾಂಕ ಹಂತ ಹಂತವಾಗಿ ಮುಂದೂಡುತ್ತಲೇ ಹೋಗಿತ್ತು.

ಆಗಸ್ಟ್ 24ರಂದು ಸ್ಟಾರ್‌ಲೈನರ್ ಭೂಮಿಗೆ ಮರಳಿತ್ತು. ಆದರೆ ಗಗನಯಾತ್ರಿಗಳು ಪ್ರಯಾಣಿಸುವಂತಿರಲಿಲ್ಲ. ಹೀಗಾಗಿ ಮರಳುವಿಕೆ ಮತ್ತಷ್ಟು ವಿಳಂಬಗೊಂಡಿತು. ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಜೊತೆ ಸೇರಿ ನಾಸಾ ಮಾರ್ಚ್ ತಿಂಗಳಲ್ಲಿ ಗನನಯಾತ್ರಿಗಳ ಕರೆತರಲು ಪ್ಲಾನ್ ಮಾಡಿತ್ತು. ಇದರಂತೆ ಇದೀಗ ಇಬ್ಬರು ಗನನಯಾತ್ರಿಗಳು ಭೂಮಿಗೆ ಲ್ಯಾಂಡ್ ಆಗಿದ್ದಾರೆ.

ಕೇವಲ 8 ದಿನಗಳ ಮಿಷನ್‌ ಒಂದರ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ 59ರ ಹರೆಯದ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಳಿಕ ಭುವಿಗೆ ಮರಳುವ ಸುಯೋಗ ಲಭಿಸಿತ್ತು. ಹಲವು ತೊಡಕುಗಳ ಬಳಿಕ ಗಗನಯಾತ್ರಿ ಸುನಿತಾ ಹಾಗೂ ಬುಚ್‌ ವಿಲ್ಮೋರ್‌ ಅವರನ್ನು ಹೊತ್ತ ಸ್ಟಾರ್‌ಲಿಂಕ್‌ ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿ ಐಎಸ್‌ಎಸ್‌ ತಲುಪಿದರೂ, ತಾಂತ್ರಿಕ ಕಾರಣಗಳಿಂದ ಅವರನ್ನು ಅಲ್ಲೇ ಬಿಟ್ಟು ಮರಳಬೇಕಾಗಿ ಬಂದಿತ್ತು. ಅದಾದ ನಂತರ ಅವರಿಬ್ಬರನ್ನು ಕರೆತರುವ ಯತ್ನಗಳು ನಾನಾಕಾರಣಗಳಿಂದ ವಿಫಲವಾದರೂ, ಇದೀಗ ನಾಸಾ ಹಾಗೂ ಎಲಾನ್‌ ಮಸ್ಕ್‌ರ ಜಂಟಿ ಪರಿಶ್ರಮ ಫಲ ಕೊಡುವ ನಿರೀಕ್ಷೆಯಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಖಾಸಗಿ ಸಂಸ್ಥೆಯಾದ ಬೋಯಿಂಗ್‌ ಜಂಟಿಯಾಗಿ, ಸಿಬ್ಬಂದಿ ಸಮೇತ ಉಡ್ಡಯನ ಪರೀಕ್ಷೆಗೆ ಮುಂದಾಗಿದ್ದು, ಸುನಿತಾ ವಿಲಿಯಮ್ಸ್‌ ಹಾಗೂ ಇನ್ನೋರ್ವ ಗಗನಯಾತ್ರಿ ಬುಚ್‌ ವಿಲ್ಮೋರ್‌ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್‌ಎಸ್‌)ಕ್ಕೆ ಕಳಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿ, ಬೋಯಿಂಗ್‌ ನಿರ್ಮಿಸಿದ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯು ಇವರಿಬ್ಬರನ್ನು ಹೊತ್ತು 2024ರ ಜೂ.5ರಂದು ಫ್ಲೋರಿಡಾದಲ್ಲಿರುವ ಕೇಪ್‌ ಕನವರಲ್‌ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಂಡು, ಜೂ.6ರಂದು ಐಎಸ್‌ಎಸ್‌ ತಲುಪಿತು. ಹೀಗೆ ಹೋದ ಸುನಿತಾ ಹಾಗೂ ಬುಚ್‌ 8 ದಿನ ಅಲ್ಲಿದ್ದು, ಬಳಿಕ ಭೂಮಿಗೆ ಮರಳುವುದೆಂದು ನಿಗದಿಯಾಗಿತ್ತು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಇದಿ…

Leave a Reply

Your email address will not be published. Required fields are marked *

*