Breaking News

ಭಾರತ-ಅಮೆರಿಕ ಮಹತ್ವದ ಭೇಟಿ.. ಪ್ರಮುಖ ಒಪ್ಪಂದಗಳು..

Cnewstv / 26.06.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಭಾರತ-ಅಮೆರಿಕ ಮಹತ್ವದ ಭೇಟಿ.. ಪ್ರಮುಖ ಒಪ್ಪಂದಗಳು..

ಭಾರತ-ಅಮೆರಿಕ ಸಂಬಂಧಗಳಿಗೆ ಐತಿಹಾಸಿಕ ತಿರುವನ್ನು ಕೊಟ್ಟಿದ್ದಾರೆ. ಹಿಂದೆಂದು ಸಿಗದ ಮಹತ್ವ ಮಾನ್ಯತೆ ಬಲಿಷ್ಠ ಭಾರತಕ್ಕೆ ಸಿಕ್ಕಿರುವುದು ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುವ ಆಗುಹೋಗುಗಳಲ್ಲಿ ಮಹತ್ವದ ಪಾತ್ರ ಭಾರತ ವಹಿಸಲಿದೆ ಎನ್ನುದರ ದಿಕ್ಸೂಚಿಯಂತಿದೆ ಈ ಅಮೆರಿಕ ಭೇಟಿ. ರಕ್ಷಣ ವಲಯ, ತಂತ್ರಜ್ಞಾನ ವಲಯ ಮತ್ತು ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಭಾರತ ಅತ್ತು ಅಮೆರಿಕ ಸಹಿ ಹಾಕಿದೆ.

ರಕ್ಷಣ ವಲಯದ ಉತ್ಪಾದನೆಗೆ ಪುಷ್ಟಿ ನೀಡುವ ಪ್ರಮುಖ ಒಪ್ಪಂದವೆಂದರೆ ಜನರಲ್‌ ಎಲೆಕ್ಟ್ರಿಕ್‌(ಜೆಇ) ಮತ್ತು ಎಚ್‌ಎಎಲ್‌ ನಡುವೆ ಎಫ್‌414 ವಿಮಾನ ಎಂಜಿನ್‌ ಅನ್ನು ಜಂಟಿಯಾಗಿ ಭಾರತ ದಲ್ಲೇ ಇನ್ಮುಂದೆ ತಯಾರು ಮಾಡುವ ತೀರ್ಮಾನ. ಎಫ್‌414 ಎಂಜಿನ್‌ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಈ ಎಂಜಿನ್‌ ಅನ್ನು ಯುದ್ಧ ವಿಮಾನಗಳಲ್ಲಿ ಬಳಸಲಾಗುತ್ತದೆ. ಇನ್ಮುಂದೆ ಇದು ಭಾರತದಲ್ಲೇ ತಯಾರಾಗುತ್ತದೆ. ಮತ್ತೂಂದು ಮಹತ್ವದ ಒಪ್ಪಂದವೆಂದರೆ ಎಮ್‌ಕ್ಯೂ-9ಬಿ ಡ್ರೋನ್‌. ಇದು ಕರಾವಳಿ ರೇಖೆಯನ್ನು ಕಾಯುವ ವಿಶೇಷ ಡ್ರೋನ್‌. ಇದನ್ನು ಭಾರತಕ್ಕೆ ನೀಡಲು ಅಮೆರಿಕ ಒಪ್ಪಿದೆ. ಈ ಡ್ರೋನ್‌ನ ಮಾಲಕತ್ವ ಹೊಂದಿರುವ ಜನರಲ್‌ ಅಟೋಮಿಕ್ಸ್‌ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತ-ಅಮೆರಿಕ ರಕ್ಷಣ ನಾವೀನ್ಯತೆ ಮತ್ತು ಅವಿಷ್ಕಾರಿ ಸ್ಟಾರ್ಟ್‌ಅಪ್‌ಗ್ಳಿಗೆ ಪ್ರೋತ್ಸಾಹಿಸಲು ಇಂಡಸ್‌-ಎಕ್ಸ್‌ ಎಂಬ ಸಹಯೋಗ ಮತ್ತು ಪಾಲುದಾರಿಕೆಯ ಒಪ್ಪಂದಕ್ಕೆ ಸಹಿಹಾಕಿವೆ.

ಇನ್ನು ತಂತ್ರಜ್ಞಾನ ವಲಯದಲ್ಲಿ ಮೈಕ್ರಾನ್‌ ಟೆಕ್ನಾಲಜಿ ಸಂಸ್ಥೆ ಒಂದು ನೂತನ ಚಿಪ್‌ ಅಸೆಂಬ್ಲಿ ಪ್ಲಾಂಟ್‌ ಭಾರತದಲ್ಲಿ ಸ್ಥಾಪಿಸಲು ಸಮ್ಮತಿಸಿದೆ. ಆರಂಭಿಕ ಬಂಡವಾಳ 825 ಮಿಲಿಯನ್‌ ಡಾಲರ್‌ ಹೂಡುವುದಲ್ಲದೆ ಒಟ್ಟಾರೆಯಾಗಿ 2.75 ಬಿಲಿ ಯನ್‌ ಡಾಲರ್‌ ಬಂಡವಾಳ ಹೂಡಲು ಮುಂದಾ ಗಿದೆ. ಇದರಿಂದ 5,000 ಹುದ್ದೆ ನೇರವಾಗಿ ಸೃಷ್ಟಿ ಯಾಗಲಿದೆ. ಮತ್ತೂಂದು ಮಹತ್ವದ ನಿರ್ಧಾರವೆಂದರೆ ಎಚ್‌1ಬಿ ವೀಸಾ ನವೀಕರಣಕ್ಕೆ ಭಾರತಕ್ಕೆ ಬರುವ ಆವಶ್ಯಕತೆ ಇರುವುದಿಲ್ಲ. ಅಮೆರಿಕದಲ್ಲೆ ಇದ್ದುಕೊಂಡು ನವೀಕರಿಸಬಹುದು. ಇದು ನಮ್ಮ ಐಟಿ ಬಿಟಿ ಕಂಪೆನಿಗಳಿಗೆ ಬಹಳ ಉಪಯೋಗಿ. ಅದೇ ರೀತಿ ಬಹಳ ದಿನಗಳಿಂದ ಹಾಗೆ ಉಳಿದಿದ್ದ ಬೇಡಿಕೆಯೆಂದರೆ ನಮ್ಮ ಬೆಂಗಳೂರಿನಲ್ಲೇ ಅಮೆರಿಕದ ಒಂದು ರಾಯ ಭಾರ ಕಚೇರಿ ಪ್ರಾರಂಭ ಮಾಡುವುದು. ಕನ್ನಡಿಗರು ಇನ್ನು ಚೆನ್ನೈ, ಹೈದರಾಬಾದ್‌, ಮುಂಬಯಿಗೆ ವೀಸಾಕ್ಕಾಗಿ ಹೋಗಬೇಕಾಗಿಲ್ಲ

ಇನ್ನು ಕ್ರಿಟಿಕಲ್‌ ಮತ್ತು ಎಮರ್ಜಿಂಗ್‌ ಟೆಕ್ನಾಲಜಿ ಉಪಕ್ರಮದಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು, ಸ್ಟಾರ್ಟ್‌ಅಪ್‌ಗ್ಳು, ಖಾಸಗಿ ಸಂಸ್ಥೆಗಳು ತಂತ್ರಜ್ಞಾನ ಸಂಶೋಧನೆಯನ್ನು ಅಮೆರಿಕದ ಸಂಸ್ಥೆಗಳ ಜತೆ ಜಂಟಿಯಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಕ್ವಾಂಟಮ್‌ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನೆಗೆ 2 ಮಿಲಿಯನ್‌ ಡಾಲರ್‌ ಅನುದಾನದ ವಿನೂತನ ಕಾರ್ಯಕ್ರಮಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ.

ಅದೇ ರೀತಿ ಭಾರತ ಸರಕಾರದ ಸ್ವಾಮ್ಯದ ಸೆಂಟರ್‌ ಫಾರ್‌ ಡೆವೆಲಪ್‌ಮೆಂಟ್‌ ಆಫ್‌ ಅಡ್ವಾನ್ಸಡ್‌ ಕಂಪ್ಯೂಟಿಂಗ್‌ (ಸಿ- ಡಿಎಸಿ) ಮತ್ತು ಅಮೆರಿಕದ ಅನಲಿಟಿಕ್ಸ್‌ ಮತ್ತು ಕಂಪ್ಯೂಟಿಂಗ್‌ ಸಂಸ್ಥೆಗಳು (ಎಎಸಿಐ) ಜಂಟಿಯಾಗಿ ಸಂಶೋಧನೆ ನಡೆಸುವ ಒಪ್ಪಂದ ಆಗಿದೆ. ಅಮೆರಿ ಕದ ವಿಜ್ಞಾನ ಸಂಸ್ಥೆ , ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಜಂಟಿಯಾಗಿ ಸೈಬರ್‌ ಸೆಕ್ಯುರಿಟಿ ಕುರಿತು ಸಂಶೋಧನೆ ಮಾಡಲು ಒಪ್ಪಂದ ಮಾಡಿಕೊಂಡಿದೆ.

ಅಮೆರಿಕದ ದೈತ್ಯ ಶಕ್ತಿಗಳಲ್ಲಿ ಒಂದಾದ ಗೂಗಲ್‌ ತನ್ನ ಕೃತಕ ಬುದ್ಧಿಮತ್ತೆ ಸಂಶೋಧನ ಕೇಂದ್ರ ಸ್ಥಾಪನೆಗೆ ಭಾರತದಲ್ಲಿ 10 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಸಮ್ಮತಿಸಿದೆ. ಸೆಮಿಕಂಡಕ್ಟರ್‌ ತಂತ್ರಜ್ಞಾನ ಭಾರತದಲ್ಲಿ ಆರಂಭಿಕ ಹಂತದಲ್ಲಿ ರುವುದರಿಂದ ಲಾಮ್‌ ರಿಸರ್ಚ್‌ ಎಂಬ ಸಂಸ್ಥೆಯು ಭಾರತದ 60,000 ಎಂಜಿನಿಯರ್‌ಗಳನ್ನು ತನ್ನ ಸೆಮಿವರ್ಸ್‌ ತರಬೇತಿ ಪ್ಲಾಟ್‌ಫಾರ್ಮ್ ಮೂಲಕ ತರಬೇತಿ ನೀಡಲು ಮುಂದಾಗಿದೆ. ಅಪ್ಲೆ„ಡ್‌ ಮೆಟೀರಿಯಲ್‌ ಸಂಸ್ಥೆ ತನ್ನ ನೂತನ ಎಂಜಿ ನಿಯರಿಂಗ್‌ ಕೇಂದ್ರವನ್ನು ಪ್ರಾರಂಭಿಸಲು 400 ಮಿಲಿಯನ್‌ ಡಾಲರ್‌ ಬಂಡವಾಳ ಹೂಡಲು ಒಪ್ಪಂದ ಮಾಡಿಕೊಂಡಿದೆ. ಇನ್ನು ಭಾರತದಲ್ಲಿ ಮೊಬೈಲ್‌ ನೆಟ್‌ವರ್ಕ್‌ನ 6ಜಿ ಟೆಕ್ನಾಲಜಿ ಅಳವಡಿಸುವ ಬಗ್ಗೆ ಒಪ್ಪಂದವಾಗಿದೆ.

ಬಾಹ್ಯಾಕಾಶ ಸಂಶೋಧನೆ ವಲಯದಲ್ಲಿ ಆದ ಮಹತ್ವದ ಒಪ್ಪಂದಗಳೆಂದರೆ ನಾಸಾ ಮತ್ತು ಇಸ್ರೋ ಬಾಹ್ಯಾಕಾಶಕ್ಕೆ ಮಾನವ ಮಿಷನ್‌ ಕುರಿತು ಜಂಟಿ ಯಾಗಿ ಸಂಶೋಧನೆ ಮಾಡಲಿದ್ದಾರೆ. ಇದರಲ್ಲಿ ನಾಸಾ ತನ್ನ ಟೆಕ್ಸಾಸ್‌ ನಗರದಲ್ಲಿರುವ ಜಾನ್ಸನ್‌ ಸ್ಪೇಸ್‌ ಸೆಂಟರ್‌ನಲ್ಲಿ ಭಾರತದ

ಗಗನ ಯಾತ್ರಿಗಳಿಗೆ ಸುಧಾರಿತ ತರಬೇತಿ ನೀಡ ಲಿದೆ, ಇದರ ಉದ್ದೇಶ ಜಂಟಿಯಾಗಿ ಭಾರತ ಮತ್ತು ಅಮೆರಿಕ ಸ್ಪೇಸ್‌ ಸ್ಟೇಶನ್‌ ಸ್ಥಾಪಿಸುವುದು. ನಾಸಾ ಇಸ್ರೋ ಈಗಾಗಲೆ ಪರಸ್ಪರ ಸಹಯೋಗದಲ್ಲಿ ತಯಾರಿಸಿದ ಸಿಂತೆಟಿಕ್‌ ಅಪರ್ಚರ್‌ ಉಪಗ್ರಹವನ್ನ (ಎನ್‌ಐಎಸ್‌ಎಆರ್‌) ಯು.ಆರ್‌.ರಾವ್‌ ಉಪ ಗ್ರಹ ಕೇಂದ್ರಕ್ಕೆ ಈ ಸಂದರ್ಭದಲ್ಲಿ ಸಮರ್ಪಿ ಸಲಾಯಿತು. ಭಾರತ ಬಾಹ್ಯಾಕಾಶ ನೀತಿ-2023ರನ್ನ ಅಮೆರಿಕ ಸ್ವಾಗತಿಸಿ ವಾಣಿಜ್ಯ ಉಪಗ್ರಹ ಉಡಾ ವಣೆ ಮಾಡುವುದರ ಬಗ್ಗೆ ಒಪ್ಪಂದ ಮಾಡಿ ಕೊಂಡಿದೆ. ಇದರಿಂದ “ಸ್ಪೇಸ್‌ ಎಕಾನಮಿ’ಯಲ್ಲಿ ಭಾರತ ಇನ್ನಷ್ಟು ಆರ್ಥಿಕವಾಗಿ ಬಲಿಷ್ಠವಾಗಲಿದೆ. 2025-26ರರಲ್ಲಿ ಚಂದ್ರಗ್ರಹಕ್ಕೆ ಮಾನವನನ್ನು ಕಳುಹಿಸುವ “ಆರ್ಟೆಮಿಸ್‌ ಒಪ್ಪಂದಕ್ಕೆ’ ಭಾರತ ಸಹಿ ಹಾಕಿ, ಅಮೆರಿಕದ ಈ ಪ್ರಯತ್ನದಲ್ಲಿ ಪಾಲುದಾರನಾಗಿದೆ.

ಪರಮಾಣು ಸಂಶೋಧನೆಗೆ ಸಂಬಂಧಿಸಿದಂತೆ ಸರಿಸುಮಾರು 140 ಮಿಲಿಯನ್‌ ಡಾಲರ್‌ ಆರಂಭಿಕ ಬಂಡವಾಳ ಹೂಡಿಕೆಯ ಮುಖಾಂತರ ಭಾರತದ ಪರಮಾಣು ಶಕ್ತಿ ಸಂಸ್ಥೆ ಮತ್ತು ಅಮೆ ರಿಕದ ಡಿಪಾರ್ಟ್‌ಮೆಂಟ್‌ ಅಫ್‌ ಎನರ್ಜಿ ಜಂಟಿ ಯಾಗಿ ಹಲವಾರು ಶಂಶೋಧನ ಕಾರ್ಯಕ್ರಮ ಗಳನ್ನು ನಡೆಸುವ ಬಗ್ಗೆ ಒಪ್ಪಂದಗಳಾಗಿವೆ.

ಭಾರತದ ಶಿಪ್‌ ಯಾರ್ಡ್‌ಗಳ ಜತೆ ಮಾಸ್ಟರ್‌ ಶಿಪ್‌ ರಿಪೇರ್‌ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ. ಇದರಿಂದ ದೊಡ್ಡ ದೊಡ್ಡ ಪ್ಯಾನಾಮ್ಯಾಕ್ಸ್‌ ರೇಂಜ್‌ ಶಿಪ್‌ಗ್ಳನ್ನ ರಿಪೇರಿ ಮಾಡುವ, ಸರ್ವಿಸ್‌ ಮಾಡುವ ತಂತ್ರಜ್ಞಾನ ನಮ್ಮ ಶಿಪ್‌ಯಾರ್ಡ್‌ಗಳಿಗೆ ದೊರೆ ಯಲಿದೆ. ಇದರಿಂದ ಹೊಸ ಹೊಸ ಆರ್ಥಿಕ ಅವಕಾಶಗಳು ಶೃಷ್ಟಿಯಾಗಲಿವೆ.

ಕೇವಲ ಬಾಹ್ಯಾಕಾಶ, ತಂತ್ರಜ್ಞಾನ ಮತ್ತು ರಕ್ಷಣ ವಲಯದಲ್ಲಿ ಆದ ಒಪ್ಪಂದಗಳು ಇವು. ಇನ್ನೂ ಹಲವಾರು ಆಯಾಮದಲ್ಲಿ ಅಂದರೆ ಬಿಡಿಭಾಗ ಗಳ ತಯಾರಿಕೆ, ಔಷಧ, ಅರೋಗ್ಯ, ಕ್ಲೀನ್‌ ಎನರ್ಜಿ, ಕ್ಯಾನ್ಸರ್‌ ಕ್ಯೂರ್‌ ಟೆಕ್ನಾಲಜಿ ಹೀಗೆ ಭಾರತಕ್ಕೆ ಬಹ ಳಷ್ಟು ಅನುಕೂಲಕರವಾದ ಒಪ್ಪಂದಗಳು ಆಗಿವೆ.

ಇನ್ನು ಅತ್ಯಂತ ಸಂತೋಷದ ವಿಷಯವೆಂದರೆ ಭಾರತದ ಇತಿಹಾಸ ಮತ್ತು ಸಂಸ್ಕೃತಿ ಸಂಶೋಧನೆಗೆ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿದ್ದ “ಸ್ವಾಮಿ ವಿವೇಕಾನಂದ ಚೇರ್‌” ಮರುಸ್ಥಾಪಿಸಲಾಗಿದೆ.

ಹಿಂದೆಂದು ಸಿಗದ ಮಹತ್ವ ಮತ್ತು ಪ್ರಾಮುಖ್ಯ ಭಾರತಕ್ಕೆ ತನ್ನ ಅಮೃತಕಾಲದಲ್ಲಿ ಸಿಕ್ಕಿದೆ. ಇದರ ದೂರದೃಷ್ಟಿಯ ಪ್ರಯೋಜನಗಳು ಮುಂಬರುವ ದಶಕದಲ್ಲಿ ನಮಗೆ ಸಿಗಲಿದೆ. ಉದ್ಯೋಗ ಸೃಷ್ಟಿ, ಆರ್ಥಿಕ ಸಂಪನ್ಮೂಲ ಸೃಷ್ಟಿ, ಕೈಗಾರಿಕೆಗಳು, ಉತ್ಪಾ ದನೆ ಹೀಗೆ ಎಲ್ಲ ಆಯಾಮಗಳಲ್ಲೂ ಭಾರತಕ್ಕೆ ದೊಡ್ಡ ಮಟ್ಟದ ಅವಕಾಶಗಳು ಹರಿದು ಬರುತ್ತಿವೆ. ಭಾರತ ಅಂತಾರಾಷ್ಟ್ರೀಯ ಸ್ತರದಲ್ಲಿ ಪ್ರಮುಖ ಪಾತ್ರ ಮುಂಬರುವ ದಿನಗಳಲ್ಲಿ ವಹಿಸಲಿದೆ. ಭಾರತವನ್ನು “ವಿಶ್ವಗುರು’ ಆಗಿಸಬೇಕು ಎಂಬ ಗುರಿ ಧ್ಯೇಯದೊಂದಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಇವೆಲ್ಲವೂ ಸಾಧ್ಯವಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವೇ ಹೌದು

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments