Breaking News

ಶ್ರೀ ಶಂಕರಾಚಾರ್ಯ ವಾಹ್ಮಯಸೇವಾ ಪರಿಷತ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ.

Cnewstv.in / 29.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶ್ರೀ ಶಂಕರಾಚಾರ್ಯ ವಾಹ್ಮಯಸೇವಾ ಪರಿಷತ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ.

ನವದೆಹಲಿ : ಕರ್ನಾಟಕದ ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಯಡತೂರ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಶಂಕರ ಭಗವತ್ಪಾದಾಚಾರ್ಯರ ಸಂಪ್ರದಾಯವನ್ನು ಅನುಸರಿಸುವ ಸಂಸ್ಥೆಗಳ ಪ್ರತಿನಿಧಿಗಳು ಅಖಿಲಭಾರತ ಅಖಾಡಾ ಪರಿಷತ್ ಅಧ್ಯಕ್ಷರಾದ ಮಹಾಮಂಡಲೇಶ್ವರ ಸ್ವಾಮಿ ಶ್ರೀ ರವೀಂದ್ರಪುರೀಜಿ, ಹರಿದ್ವಾರದ ಮೃತ್ಯುಂಜಯ ಆಶ್ರಮದ ಅಧ್ಯಕ್ಷರಾದ ಮಹಾಮಂಡಲೇಶ್ವರ ಸ್ವಾಮಿ ಶ್ರೀ ಚಿದಂಬರಾನಂದ ಸರಸ್ವತೀ ಜೀ, ರಾಮಜನ್ಮ ಭೂಮಿ’ ತೀರ್ಥಕ್ಷೇತ್ರ ಟ್ರಸ್ಸಿನ ಖಜಾಂಚಿಗಳಾದ ಶ್ರೀ ಸ್ವಾಮಿ ಗೋವಿಂದದೇವಗಿರಿ ಜೀ, ರೋಹತಕ್ ನ ಬ್ರಹ್ಮವೇದಾಮೃತ ಆಶ್ರಮದ ಅಧ್ಯಕ್ಷರಾದ ಮಹಾಮಂಡಲೇಶ್ವರ ಸ್ವಾಮಿ ಶ್ರೀ ವಿಶ್ವೇಶ್ವರಾನಂದಗಿರಿಜೀ, ಉತ್ತರಕಾಶಿಯ ಆದಿಶಂಕರ ಬ್ರಹ್ಮವಿದ್ಯಾಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಹರಿಬ್ರಹ್ಮಂದ್ರಾನಂದತೀರ್ಥ ಜೀ, ಮತ್ತು ಪೂಜ್ಯ ಯೋಗಿ ಸಹಜಾನಂದನಾಥ್ ಇವರು ಇಂದು ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ, ಶೃಂಗೇರಿಯಲ್ಲಿ, ಹರಿದ್ವಾರದ ಮಹಾಕುಂಭಮೇಳದ ಸಂದರ್ಭದಲ್ಲಿ ನಡೆದ ಸಂತ ಸಮಾಜದ ಸಭೆಗಳ ನಡಾವಳಿಗಳ ಕುರಿತು ಮಾಹಿತಿ ನೀಡಿದರು.

ವಾರಾಣಸಿಯಲ್ಲಿ ಮತ್ತು ಕೇದಾರದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಸ್ಮಾರಕವನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಪುಣ್ಯ ಕ್ಷೇತ್ರಗಳ ಪುನರುತ್ಥಾನದ ಅಭೂತಪೂರ್ವ ಕಾರ್ಯ ಕೈಗೊಂಡು ಅವರ ಹಿರಿಮೆ ಹಾಗೂ ಅವರು ನೀಡಿದ ಸಂದೇಶದ ಬಗ್ಗೆ ಆಗಾಗ ಪ್ರಶಂಸೆ ಮಾಡುತ್ತಿರುವ ಗೌರವಾನ್ವಿತ ಪ್ರಧಾನಮಂತ್ರಿಗಳನ್ನು ಅಭಿನಂದಿಸಿದರು.

ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿದ ಉಪನಿಷತ್ತುಗಳ ಏಕಾತ್ಮವಾದ/ವಿಶ್ವಾತ್ಮತಾವಾದದ ಪ್ರಚಾರಕ್ಕಾಗಿ ಶ್ರೀ ಶಂಕರ ಭಗವತ್ಪಾದಾಚಾರ್ಯರಿಗೆ ನಿಷ್ಠರಾಗಿರುವ ಎಲ್ಲಾ ಸಂಸ್ಥೆಗಳನ್ನು ಒಳಗೊಂಡ ಶ್ರೀ ಶಂಕರಾಚಾರ್ಯ ವಾಹ್ಮಯಸೇವಾ ಪರಿಷತ್ತಿನ ಸ್ಥಾಪನೆಯ ಕುರಿತಾದ ಮಾಹಿತಿಯನ್ನು ಶ್ರೀಯುತ ಪ್ರಧಾನಮಂತ್ರಿಯವರ ಗಮನಕ್ಕೆ ತರುವುದು. ಈ ಭೇಟಿಯ ಮುಖ್ಯ ಭಾಗವಾಗಿತ್ತು. ನಾಡಿನಾದ್ಯಂತ ಸೌಂದರ್ಯಲಹರಿ, ದಕ್ಷಿಣಾಮೂರ್ತಿ ಅಷ್ಟಕ ಮುಂತಾದ ಸ್ತೋತ್ರಗಳ ಪಠಣ, ಸಮಗ್ರತೆಯ ಸಂದೇಶ ಸಾರುವ ಕರಪತ್ರವನ್ನು ಮತ್ತು ಪುಸ್ತಕಗಳನ್ನು ಎಲ್ಲ ಭಾಷೆಗಳಲ್ಲಿ. ಪ್ರಕಟಿಸುವುದು, ಉಪನ್ಯಾಸ ಮಾಲಿಕೆಗಳನ್ನು ಆಯೋಜಿಸುವುದು ಮುಂತಾದ ಸಾಮೂಹಿಕ ಅಂದೋಲನಗಳನ್ನು ಸಂಘಟಿಸುವ ಉದ್ದೇಶವನ್ನು ಮಾನ್ಯ ಪ್ರಧಾನ ಮಂತ್ರಿಯವರಿಗೆ ತಿಳಿಸಲಾಯಿತು. ಈ ಸಂಬಂಧ ಶ್ರೀ ಶಂಕರ ಭಾರತೀ ಸ್ವಾಮೀಜಿಯವರು ಉತ್ತರಭಾರತ ಯಾತ್ರೆಯ ಸಂದರ್ಭದಲ್ಲಿ ಭೇಟಿನೀಡಿದ ಎಲ್ಲಾ ಸ್ಥಳಗಳಲ್ಲಿ ಯತಿವರೇಣ್ಯರು, ಪ್ರಸಿದ್ಧ ಸಂಸ್ಥೆಗಳ ಮುಖ್ಯಸ್ಥರು ಮತ್ತು ಗಣ್ಯವ್ಯಕ್ತಿಗಳಿಂದ ವ್ಯಕ್ತವಾದ ಸಕಾರಾತ್ಮಕ ಪ್ರತಿಕ್ರಿಯೆಯ ಬಗ್ಗೆಯೂ ಅವರಿಗೆ ತಿಳಿಸಲಾಯಿತು.

2017ರಲ್ಲಿ ಬೆಂಗಳೂರಿನಲ್ಲಿ ವೇದಾಂತಭಾರತಿಯು ಆಯೋಜಿಸಿದ್ದ ಬೃಹತ್‌ ಸೌಂದರ್ಯಲಹರಿ ಕಾರ್ಯಕ್ರಮದಲ್ಲಿ ಶ್ರೀ ನರೇಂದ್ರ ಮೋದಿಜಿಯವರು ಭಾಗವಹಿಸಿದ್ದರಿಂದಾಗಿ ಸಮಾಜದ ಮೇಲೆ ಆದ ವ್ಯಾಪಕಪರಿಣಾಮವನ್ನು ಅವರ ಗಮನಕ್ಕೂ ತರಲಾಯಿತು.

ಇದನ್ನು ಒದಿ : https://cnewstv.in/?p=8044

ಪ್ರಸಿದ್ಧ ಅಯೋಧ್ಯಾನಗರದಲ್ಲಿ ಶ್ರೀ ಶಂಕರಾಚಾರ್ಯರ ಮಂದಿರ ಹಾಗೂ ಅದೈತ ಮತ್ತು ಭಾರತೀಯ ತತ್ತ್ವ ಶಾಸ್ತ್ರದ ಇತರ ವಿಷಯಗಳಲ್ಲಿ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನೆಯ ಸಂಸ್ಥೆಯನ್ನು ಸ್ಥಾಪಿಸಲು ಸಂಕಲ್ಪಿಸಿದ ವಿಷಯವನ್ನು ಮಾನ್ಯ ಪ್ರಧಾನಮಂತ್ರಿಗಳ ಗಮನಕ್ಕೆ ತರುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು. ಈ ಉದ್ದೇಶಕ್ಕಾಗಿ ಅಯೋಧ್ಯೆಯಲ್ಲಿ ಭೂಮಿಯನ್ನು ಪಡೆಯಲು ನಡೆಸುತ್ತಿರುವ ಪ್ರಕ್ರಿಯೆಯ ಬಗ್ಗೆ ಅವರಿಗೆ ತಿಳಿಸಲಾಯಿತು.

ಗೌರವಾನ್ವಿತ ಪ್ರಧಾನ ಮಂತ್ರಿಗಳು ಎಲ್ಲಾ ಪ್ರಸ್ತಾಪಗಳನ್ನು ಆಸಕ್ತಿಯಿಂದ ಆಲಿಸಿದರು ಮತ್ತು ವಿಭಜಕ ಶಕ್ತಿಗಳು ವಿವಿಧ ರೂಪಗಳಲ್ಲಿ ಸಕ್ರಿಯವಾಗಿರುವ ಪ್ರಸ್ತುತ ಕಾಲದಲ್ಲಿ ಏಕತೆಯ ಸಂದೇಶವನ್ನು ಹರಡಲು ಸಂತ ಸಮಾಜವು ಮಾಡುತ್ತಿರುವ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಾರ್ಶನಿಕ ಶ್ರೇಷ್ಠರಾದ ಶ್ರೀ ಆದಿಶಂಕರಾಚಾರ್ಯರನ್ನು ವಿಚ್ಛಿದ್ರ ಸಮಾಜವನ್ನು ಒಗ್ಗೂಡಿಸಿದ ಮಹಾನ್ ಚೇತನ ಎಂದು ಸ್ಮರಿಸಿ, ಅಚ್ಚರಿಯ ಮಾತುಗಳಲ್ಲಿ ಶ್ಲಾಘನೆ ವ್ಯಕ್ತಪಡಿಸಿದರು. ಮತ್ತು ಆಧ್ಯಾತ್ಮಿಕ ಮಾರ್ಗಗಳ ಮೂಲಕ ಸಮಾಜವನ್ನು ಒಗ್ಗೂಡಿಸಲು ಸಂತರು ಸಂಕಲ್ಪಿಸಿದ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

ಇದನ್ನು ಒದಿ : https://cnewstv.in/?p=8046

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments