Breaking News

BOB : ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ.

Cnewstv.in / 24.01.2022 /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

BOB : ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ.

ಬ್ಯಾಂಕ್ ಆಫ್ ಬರೋಡಾ (Bank Of Baroda) ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ಸೈಟ್ bankofbaroda.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು 2022ರ ಫೆಬ್ರವರಿ 1 ಕೊನೆಯ ದಿನವಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 198 ಪೋಸ್ಟ್‌ಗಳನ್ನು ಭರ್ತಿ ಮಾಡಲಾಗುತ್ತದೆ. ಯಾವುದೇ ಸಂಸ್ಥೆಯಲ್ಲಿನ 6 ತಿಂಗಳ ಕೆಳಗಿನ ಅರ್ಹತಾ ಅನುಭವವನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಇಲ್ಲಿದೆ.

ಇದನ್ನು ಒದಿ : https://cnewstv.in/?p=7880

ಖಾಲಿಯಿರುವ ಹುದ್ದೆಗಳು:

ಹೆಡ್ ಸ್ಟ್ರಾಟೆಜಿ (Head Strategy): 1 ಹುದ್ದೆ

ನ್ಯಾಷನಲ್ ಮ್ಯಾನೇಜರ್ ಟೆಲಿಕಾಲಿಂಗ್ (National Manager Telecalling): 1 ಹುದ್ದೆ

ಪ್ರಾಜೆಕ್ಟ್ ಮತ್ತು ಪ್ರೋಸೆಸ್ ನ ಮುಖ್ಯಸ್ಥ (Head Project & Process): 1 ಹುದ್ದೆ

ನ್ಯಾಷನಲ್ ರಿಸೀವೇಬಲ್ಸ್ ಮ್ಯಾನೇಜರು (National Receivables Manager): 3 ಹುದ್ದೆಗಳು

ವಲಯ ಸ್ವೀಕೃತಿ ವ್ಯವಸ್ಥಾಪಕರು (Zonal Receivables Manager): 21 ಹುದ್ದೆಗಳು

ಸ್ಟ್ರಾಟೆಜಿ ಮ್ಯಾನೇಜರ್- ಉಪಾಧ್ಯಕ್ಷ (Vice President – Strategy Manager): 3 ಹುದ್ದೆಗಳು

ಸ್ಟ್ರಾಟೆಜಿ ಮ್ಯಾನೇಜರ್- ಡೆಪ್ಯುಟಿ ವೈಸ್ ಪ್ರೆಸಿಡೆಂಟ್ (Dy. Vice President – Strategy Manager): 3 ಹುದ್ದೆಗಳು

ವೆಂಡರ್ ಮ್ಯಾನೇಜರ್ (Vendor Manager): 3 ಹುದ್ದೆಗಳು

ಕಾಂಪ್ಲಿಯನ್ಸ್ ಮ್ಯಾನೇಜರ್ (Compliance Manager): 1 ಹುದ್ದೆ

ಪ್ರಾದೇಶಿಕ ಸ್ವೀಕೃತಿ ವ್ಯವಸ್ಥಾಪಕ (Regional Receivables Manager): 48 ಹುದ್ದೆಗಳು

ಎಂಐಎಸ್ ಮ್ಯಾನೇಜರ್ (MIS Manager): 4 ಹುದ್ದೆಗಳು

ಕಂಪ್ಲೈಂಟ್ ಮ್ಯಾನೇಜರ್ (Complaint Manager): 1 ಹುದ್ದೆ

ಪ್ರೊಸೆಸ್ ಮ್ಯಾನೇಜರ್ (Process Manager): 4 ಪೋಸ್ಟ್ ಗಳು

ಸ್ಟ್ರಾಟೆಜಿ ಮ್ಯಾನೇಜರ್- ಸಹಾಯಕ ಉಪಾಧ್ಯಕ್ಷ (Asst. Vice President – Strategy Manager): 1 ಹುದ್ದೆ

ಏರಿಯಾ ರಿಸೀವೇಬಲ್ ಮ್ಯಾನೇಜರ್ (Area Receivables Manager): 50 ಹುದ್ದೆಗಳು

ಸಹಾಯಕ ಉಪಾಧ್ಯಕ್ಷ (Assistant Vice President): 50 ಹುದ್ದೆಗಳು

ಪ್ರಾಡಕ್ಟ್ ಮ್ಯಾನೇಜರ್- ಸಹಾಯಕ ಉಪಾಧ್ಯಕ್ಷ (Assistant Vice President – Product Manager): 3 ಹುದ್ದೆಗಳು

ಆಯ್ಕೆ ಪ್ರಕ್ರಿಯೆ ಹೇಗೆ?

ಆಯ್ಕೆಯು ಶಾರ್ಟ್‌ಲಿಸ್ಟಿಂಗ್ ನಂತರ ವೈಯಕ್ತಿಕ ಸಂದರ್ಶನ ಮತ್ತು/ಅಥವಾ ಯಾವುದೇ ಇತರ ಆಯ್ಕೆ ವಿಧಾನವನ್ನು ಆಧರಿಸಿರುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ, EWS ಮತ್ತು OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹600/- ಮತ್ತು SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹100/- ಪಾವತಿಸಬೇಕಾಗುತ್ತದೆ.

ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: https://www.bankofbaroda.in/-/media/Project/BOB/CountryWebsites/India/Career/detailed-advertisement-11-20.pdf

ಇದನ್ನು ಒದಿ : https://cnewstv.in/?p=7893

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments