Cnewstv.in / 23.01.2022/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ಈಗಾಗಲೇ 10 ತಂಡಗಳು ಒಟ್ಟು 33 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.
ಈ ಬಾರಿ ಐಪಿಎಲ್ ಹರಾಜಿಗೆ ಒಟ್ಟು 1,214 ಕ್ರಿಕೆಟಿಗರ ಹೆಸರು ನೋಂದಾಯಿಸಲ್ಪಟ್ಟಿದೆ. ಇದರಲ್ಲಿ 896 ಆಟಗಾರರು ಭಾರತದವರಾದರೆ, 318 ಆಟಗಾರರು ವಿದೇಶಿಯರು. ಉಳಿದಂತೆ 33 ಕ್ರಿಕೆಟಿಗರನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡಿವೆ.
ಇವರಲ್ಲಿ ಪ್ರಮುಖರೆಂದರೆ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ. ಹಾಗೆಯೇ ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜ, ಕೇನ್ ವಿಲಿಯಮ್ಸನ್, ಜಾಸ್ ಬಟ್ಲರ್, ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಆಯಾ ಫ್ರಾಂಚೈಸಿಗಳಲ್ಲಿ ಉಳಿದುಕೊಂಡಿದ್ದಾರೆ.
ಬೆನ್ ಸ್ಟೋಕ್ಸ್, ಆರ್ಚರ್, ಮಿಚೆಲ್ ಸ್ಟಾರ್ಕ್, ಸ್ಯಾಮ್ ಕರನ್, ಅವರೆಲ್ಲ ಕೈಬಿಡಲ್ಪಟ್ಟ ಪ್ರಮುಖ ಆಟಗಾರರು. ಗೇಲ್, ಎಬಿಡಿ ಈ ಬಾರಿ ಆಡುವುದಿಲ್ಲ. ಮೊದಲ ಸಲ ಭೂತಾನ್ ಕ್ರಿಕೆಟರ್ ಒಬ್ಬರು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಲದ ವಿಶೇಷ. ಹಾಗೆಯೇ ಅಮೆರಿಕದ ದಾಖಲೆ ಸಂಖ್ಯೆಯ 14 ಆಟಗಾರರೂ ಇದ್ದಾರೆ.
ವಿದೇಶಿ ಕ್ರಿಕೆಟಿಗರಲ್ಲಿ ಆಸ್ಟ್ರೇಲಿಯಕ್ಕೆ ಅಗ್ರಸ್ಥಾನ. ಕಾಂಗರೂ ನಾಡಿನ 59 ಕ್ರಿಕೆಟಿಗರು ರೇಸ್‌ನಲ್ಲಿದ್ದಾರೆ. ದ್ವಿತೀಯ ಸ್ಥಾನ ದಕ್ಷಿಣ ಆಫ್ರಿಕಾಕ್ಕೆ. ಇಲ್ಲಿನ 48 ಆಟಗಾರರಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸ್‌ನ 41, ಶ್ರೀಲಂಕಾದ 36, ಇಂಗ್ಲೆಂಡ್‌ನ 30, ನ್ಯೂಜಿಲ್ಯಾಂಡ್‌ನ 29 ಮತ್ತು ಅಫ್ಘಾನಿಸ್ಥಾನದ 20 ಕ್ರಿಕೆಟಿಗರು ಹೆಸರು ನೋಂದಾಯಿಸಿದ್ದಾರೆ.
ಹಾಗೆಯೇ ನಮೀಬಿಯಾ (5), ನೇಪಾಲ (15), ನೆದರ್ಲೆಂಡ್ಸ್ (1), ಒಮಾನ್ (3), ಸ್ಕಾಟ್ಲೆಂಡ್ (1), ಜಿಂಬಾಬ್ವೆ (2), ಐರ್ಲೆಂಡ್ (3), ಯುಎಇ (1) ಕ್ರಿಕೆಟಿಗರೂ ಐಪಿಎಲ್ ಆಡಲು ಉತ್ಸುಕರಾಗಿದ್ದಾರೆ.
ಇದನ್ನು ಒದಿ : https://cnewstv.in/?p=7839
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments