Cnewstv.in / 21.01.2022/ ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವೀಕೆಂಡ್ ರಿಲೀಫ್, ಈ ನಿಯಮಗಳನ್ನು ಮರೆತರ ಮತ್ತೆ ಲಾಕ್.
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಗೃಹ ಕಛೇರಿ ಕೃಷ್ಣದಲ್ಲಿ ತಜ್ಞರ ಸಭೆಯನ್ನು ನಡೆಸಲಾಯಿತು. ಸಭೆಯ ನಂತರ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಕೊರೋನಾ ನಿಯಮಾವಳಿಗಳ ಬಗ್ಗೆ ಹಾಗೂ ಮಾರ್ಗಸೂಚಿಯಲ್ಲಿ ನ ಬದಲಾವಣೆ ಇತರ ನಿರ್ಧಾರಗಳ ಕುರಿತು ಚರ್ಚಿಸಲಾಯಿತು. ಸಭೆಯ ನಂತರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆಯಲಾಗಿದೆ ಆದರೆ ನೈಟ್ ಕರ್ಫ್ಯೂ ಮುಂದುವರೆಯಲಿದೆ. ಉಳಿದಂತೆ ರಾಜ್ಯದಲ್ಲಿ 50:50 ರೂಲ್ಸ್ ಮುಂದುವರೆಯಲಿದೆ.
ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಹಿಂಪಡೆಯಲಾಗಿದೆ ಆದರೆ ಜನರು ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಸದ್ಯ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಇದೆ. ಒಂದು ವೇಳೆ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ಮತ್ತೆ ವೀಕೆಂಡ್ ಕರ್ಫ್ಯೂ ಮುಂದುವರೆಸಲಾಗುವುದು ಎಂದು ಎಚ್ಚರಿಕೆಯನ್ನು ಸಹ ಇದೇ ಸಮಯದಲ್ಲಿ ನೀಡಲಾಗಿದೆ.
* ವೈಜ್ಞಾನಿಕ ನೆಲೆಗಟ್ಟಿನಲ್ಲಿ ವೀಕೆಂಡ್
ಕರ್ಫ್ಯೂ ಹಿಂಪಡೆದ ಸರ್ಕಾರ.
* ರಾತ್ರಿ 10 ಗಂಟೆಯಿಂದ 5 ಗಂಟೆಯ ತನಕ ನೈಟ್ ಕರ್ಫ್ಯೂ ಮುಂದುವರಿಕೆ.
* ಪಾಸಿಟಿವಿಟಿ ದರ ಹೆಚ್ಚಾದರೆ ಮತ್ತೆ ವೀಕೆಂಡ್ ಕರ್ಫ್ಯೂ ಮುಂದುವರೆಸಲಾಗುವುದು.
* ಮಾಲ್, ಹೋಟೆಲ್, ಬಾರ್ ಗಳಲ್ಲಿ 50:50 ಮುಂದುವರಿಕೆ. ಹಾಗೂ ಹೋಟೆಲ್ ಗಳಲ್ಲಿ ವೀಕೆಂಡ್ ಸರ್ವೀಸ್ ಗೆ ಅವಕಾಶ.
* ಜಿಮ್, ಥಿಯೇಟರ್ಗಳಲ್ಲಿ 50;50 ರೂಲ್ಸ್.
ಇದನ್ನು ಒದಿ : https://cnewstv.in/?p=7808
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments