Cnewstv.in / 31.12.2021/ ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮುಂಬೈ : ಕೇಂದ್ರ ಸರಕಾರದ ವಿವಿಧ ಅಂಗಸಂಸ್ಥೆ ಗಳು ಜನರಿಗೆ ನೀಡಿದ್ದ ವಿವಿಧ ಗಡುವುಗಳನ್ನು ವಿಸ್ತರಿಸಿವೆ. ಒಮಿ ಕ್ರಾನ್ ಸಹಿತ ವಿವಿಧ ಕಾರಣಗಳಿಗಾಗಿ ಜನರ ಮೇಲಿನ ಒತ್ತಡ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆರ್‌ಬಿಐ ಕೆವೈಸಿ ಗಡುವನ್ನು ಡಿ.31ರಿಂದ ಮಾ.31ಕ್ಕೆ ವಿಸ್ತರಿಸಿ ದೆ. ಜಿಎಸ್‌ಟಿ ವಾರ್ಷಿಕ ಹಿಂಪಾ ವತಿ ಸಲ್ಲಿಕೆ ಅವಧಿಯನ್ನು ಡಿ.31 ರಿಂದ ಫೆ.28ಕ್ಕೆ ವಿಸ್ತರಿಸಲಾಗಿದೆ.
ಇಪಿಎಫ್ಒ, ವೇತನದಾರರು ತಮ್ಮ ಉದ್ಯೋಗನಿಧಿ ಪಡೆಯ ಬಲ್ಲ ನಾಮ ನಿರ್ದೇಶಿತರನ್ನು ಸೂಚಿಸಲೂ ಗಡುವು ವಿಸ್ತರಿಸಿ ದೆ. ಈ ಹಿಂದೆ ಇದಕ್ಕೂ ಡಿ.31 ಕೊನೆ ದಿನವಾಗಿತ್ತು. ಆದರೆ ಅಂತಿಮ ದಿನಾಂಕವನ್ನು ಸೂಚಿಸಿಲ್ಲ. ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲೇ ಮುಗಿಸಲು ಅವಕಾಶ ನೀಡಲಾಗಿದೆ.
ಬ್ಯಾಂಕ್ ಖಾತೆಗಳಿಗೆ ಗ್ರಾಹಕರು ಕೆವೈಸಿ (ಖಾತೆಗೆ ಆಧಾರ್, ಪಾನ್ ಕಾರ್ಡ್ ನಂಥ ಇತರ ಸಂಗತಿಗಳ ಜೋಡಣೆ) ಪ್ರಕ್ರಿಯೆಗೆ ಗಡುವು ವಿಸ್ತರಿಸಿರುವುದು ಜನರಿಗೆ ಅನುಕೂಲವಾಗಿದೆ. ಕೆವೈಸಿ ಪ್ರಕ್ರಿಯೆ ಪೂರೈಸದ ಗ್ರಾಹಕರ ಮೇಲೆ ಯಾವುದೇ ಕಠಿನ ಕ್ರಮ ಕೈಗೊಳ್ಳಬೇಡಿ ಎಂದೂ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ. ಈ ಹಿಂದೆ ಕೊರೊನಾ 2ನೇ ಅಲೆ ಕಾಣಿಸಿಕೊಂಡಿದ್ದರಿಂದ ಕೆವೈಸಿ ಅವಧಿಯನ್ನು ಡಿಸೆಂಬರ್ ಕೊನೆ ಯವರೆಗೆ ವಿಸ್ತರಿಸಿತ್ತು.
ಇದನ್ನು ಒದಿ : https://cnewstv.in/?p=7288
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments