Cnewstv.in / 23.12.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ರಾಜ್ಯದಲ್ಲಿ ಒಂದೇ ದಿನ 12 ಒಮಿಕ್ರಾನ್ ಪ್ರಕರಣಗಳು ಪತ್ತೆ.
ಬೆಂಗಳೂರು : ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಆರ್ಭಟ ಆರಂಭವಾಗುತ್ತಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೆಯ ಅಲೆ ಆರಂಭವಾಗುತ್ತಾ ಎಂಬ ಅನುಮಾನವನ್ನು ಸೃಷ್ಟಿಸುತ್ತಿದೆ.
ಇಂದು ಒಂದೇ ದಿನ ರಾಜ್ಯದಲ್ಲಿ 12 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಒಟ್ಟು ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 269 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಖಾತೆ ಸಚಿವ ಡಾ. ಕೆ ಸುಧಾಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ 10, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದೆ. ಇಂಗ್ಲೆಂಡ್ ನಿಂದ ಬೆಂಗಳೂರಿಗೆ ಬಂದಿದ್ದಾಗ ಐವರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಬಹುಪಾಲು ಮಂದಿ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ.
ನಯಾಗಾರ ದಿಂದ ಬೆಂಗಳೂರಿಗೆ ಬಂದಿದ್ದ 59 ವರ್ಷದ ಮಹಿಳೆ. ಡೆನ್ಮಾರ್ಕ್ ನಿಂದ ಬೆಂಗಳೂರಿಗೆ ಬಂದಿದ್ದ 49ವರ್ಷದ ಮಹಿಳೆ, ಘಾನಾದಿಂದ ಮಂಗಳೂರಿಗೆ ಬಂದಿದ್ದ 27 ವರ್ಷದ ಯುವಕ, ಮೈಸೂರಿನ 9 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ದೃಡಪಟ್ಟಿದೆ.
ಇಂಗ್ಲೆಂಡ್ ನಿಂದ ಬೆಂಗಳೂರಿಗೆ ಬಂದ 26 ವರ್ಷದ ಮಹಿಳೆಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರಲು ಬಂದಿದ್ದ ಇಡೀ ಕುಟುಂಬಕ್ಕೆ ಸೋಂಕು ತಗುಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 64, ಮಹಾರಾಷ್ಟ್ರ 65, ತಮಿಳುನಾಡು 34, ಕರ್ನಾಟಕ 19, ತೆಲಂಗಾಣ 24, ರಾಜ್ಯಸ್ಥಾನ 21, ಗುಜರಾತ್ 14, ಕೇರಳ 29, ಕಾಶ್ಮೀರ – ಕಾಶ್ಮೀರ 3, ಉತ್ತರಪ್ರದೇಶ 2, ಆಂಧ್ರಪ್ರದೇಶ 2, ಪಶ್ಚಿಮಬಂಗಾಳದಲ್ಲಿ ಒಂದು ಪ್ರಕರಣಗಳು ವರದಿಯಾಗಿದೆ.
ಇದನ್ನು ಒದಿ : https://cnewstv.in/?p=7213
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments