Cnewstv.in / 22.12.2021/ ಕೇರಳ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ ಪ್ರಶ್ನಿಸಿ ಅರ್ಜಿ. ಹೈಕೋರ್ಟ್ ಮೆಟ್ಟಿಲೇರಿದ್ದರು ಅರ್ಜಿದಾರನಿಗೆ 1 ಲಕ್ಷ ರೂ ದಂಡ.
ಕೇರಳ : ಕೋವಿಡ್ 19 ಲಸಿಕೆ ಪ್ರಮಾಣಪತ್ರದ ಮೇಲೆ ಮೋದಿ ಚಿತ್ರ ಹಾಕಿರುವುದನ್ನು ವಿರೋಧಿಸಿ ಅರ್ಜಿದಾರರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರಿಗೆ ಕೇರಳ ಉಚ್ಚ ನ್ಯಾಯಾಲಯ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ಮೋದಿ ಇರುವ ಚಿತ್ರ ಹಾಕಿರುವುದು ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದೆ ಎಂದು ಹಿರಿಯ ನಾಗರಿಕರು ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿವಿ ಕುಂಇಕೃಷ್ಣನ್ ಅರ್ಜಿದಾರರು ಹಾಕಿರುವ ಈ ವಿಷಯ ಕ್ಷುಲ್ಲಕವಾಗಿದೆ ಹಾಗೂ ಪ್ರಚಾರ ಉದ್ದೇಶ ಹೊಂದಿದ ರಾಜಕೀಯ ಪ್ರೇರಿತವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾ ಮಾಡಿದೆ.
ಅತ್ಯಂತ ತುರ್ತಾಗಿ ಇತ್ಯರ್ಥ ಆಗಬೇಕಿರುವ ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿದೆ. ಅದರ ಮಧ್ಯೆ ಇಂತಹ ಕ್ಷುಲ್ಲಕ ಅರ್ಜಿಗಳನ್ನು ಹಾಕಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಾರೆ. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುವ ಈ ರೀತಿಯ ಮನವಿಯನ್ನು ನ್ಯಾಯಾಲಯವು ಪರಿಗಣಿಸುವುದಿಲ್ಲ ಎಂದು ಜನರಿಗೆ ಮತ್ತು ಸಮಾಜಕ್ಕೆ ತಿಳಿಸಲು ಈ ಹಣವನ್ನು ವಿಧಿಸಲಾಗುತ್ತಿದೆ. ಹಾಗೂ ಈ ರೀತಿಯ ಕ್ಷುಲ್ಲಕ ವಿವಾದಗಳನ್ನು ಮೂಡಿಸುವ ವರ್ತನೆ ದೇಶದ ನಾಗರಿಕರಿಂದ ನಿರೀಕ್ಷಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪರವಾಗಿ ವೆಚ್ಚವನ್ನು ಠೇವಣಿ ಮಾಡುವಂತೆ ಸೂಚಿಸಿದೆ. ನಿಗದಿತ ಅವಧಿಯೊಳಗೆ ದಂಡವನ್ನು ಠೇವಣಿ ಮಾಡಲು ವಿಫಲವಾದಲ್ಲಿ ಕೆಎಲ್ಎಸ್ಎ ಅವರ ವಿರುದ್ದ ಆದಾಯದ ವಸೂಲಾತಿ ಪ್ರಕ್ರಿಯೆಗಳನ್ನು ಆರಂಭಿಸುವ ಮೂಲಕ ಅವರ ಆಸ್ತಿಯಿಂದ ಮೊತ್ತವನ್ನು ವಸೂಲಿ ಮಾಡುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಇದನ್ನು ಒದಿ : https://cnewstv.in/?p=7194
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments