Cnewstv.in / 21.12.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್, ಬ್ರಿಗೇಡ್ ರೋಡ್ ನಲ್ಲಿ ಈ ವರ್ಷನು ಇಲ್ಲ ಸೆಲೆಬ್ರೇಶನ್.
ಬೆಂಗಳೂರು : ಹೊಸವರ್ಷ ಸಂಭ್ರಮಾಚರಣೆ ಎಂದಕೂಡಲೇ ಬೆಂಗಳೂರಿಗರಿಗೆ ನೆನಪಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ. ಹೊಸ ವರ್ಷದ ಹಿಂದಿನ ದಿನ ಈ ರಸ್ತೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿರುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಗೆ ಯುವಕರು ಹಾಗೂ ಪಾರ್ಟಿ ಪ್ರಿಯರಿಂದಲೇ ಈ ರಸ್ತೆ ತುಂಬಿರುತ್ತದೆ.
ಅದರೆ ಈ ವರ್ಷ ಬ್ರಿಗೇಡ್ ರೋಡಿನಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಬ್ರಿಗೇಡ್ ರೋಡ್ ಶಾಪ್ ಅಂಡ್ ಎಸ್ತಬ್ಲಿಷ್ಮೆಂಟ್ ಅಸೋಶಿಯೇಶನ್ (Brigade road shops and Establishments Association) ವತಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕಳೆದ ವರ್ಷ ಸಹ ಕೊರೊನಾ ಕರಿ ನೆರಳಿನಿಂದಾಗಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷವೂ ಸಹ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಎಂದಿನಂತೆ ಬೀದಿದೀಪಗಳನ್ನು ಅಲಂಕರಿಸಲಾಗುವುದು. ಸಾಮಾನ್ಯವಾಗಿ ನಿಗದಿತ ಸಮಯಕ್ಕಿಂತಲೂ ಒಂದೆರಡು ಗಂಟೆ ಮೊದಲೇ ಅಂಗಡಿಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಜನದಟ್ಟನೆ ಸೇರಬಾರದು ಎಂಬುದು ನಮ್ಮ ಉದ್ದೇಶ ಎಂದು ಅಸೋಸಿಯೇಶನ ಕಾರ್ಯದರ್ಶಿ ಸುನಿಲ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ವರ್ಷ ಸಹ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರಿಗೇಡ್ ರೋಡ್ ನಲ್ಲಿ ಬ್ರೇಕ್ ಬಿದ್ದಿದೆ.
ಇದನ್ನು ಒದಿ : https://cnewstv.in/?p=7184
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments