Cnewstv.in / 16.12.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕಾನೂನು ಪದವಿ ಮುಗಿಸುವ ಮೊದಲೇ ನ್ಯಾಯಾಲದಲ್ಲಿ ವಾದಿಸಿ ಗೆದ್ದ ಯುವಕ.
ಲಂಡನ್ : ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಪದವಿ ಮುಗಿಯುವ ಮೊದಲೇ ವಾದಿಸಿ ಗೆದ್ದಿದ್ದಾನೆ.
ಹೌದು ಈ ಘಟನೆ ನಡೆದಿರುವುದು ಲಂಡನ್‌ನಲ್ಲಿ. ಜ್ಯಾಕ್ ಸಿಮ್ ಎಂಬ 19 ವರ್ಷದ ಬ್ರಿಟನಿನ ಯುವಕ ಈಸ್ಟ್ ಆಂಗ್ಗಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಗೆ ಸೇರಿಕೊಂಡಿದ್ದ.
ತನ್ನ ವಿದ್ಯಾಬ್ಯಾಸಗಾಗಿ ಅವನು ಆನ್ಲೈನ್ನಲ್ಲಿ ಬಾಡಿಗೆ ಮನೆಯನ್ನು ಹುಡುಕಿದ ಹಾಗೂ ಅದರಲ್ಲಿ ವಾಸವಿರಲು ಮುಂದಾಗಿದ್ದ. ಆದರೆ ಆನ್ಲೈನ್ನಲ್ಲಿ ನೋಡಿದ ಫೋಟೋಗೂ, ಮನೆಗೂ ಬಹಳ ವ್ಯತ್ಯಾಸವಿತ್ತು ಹಾಗಾಗಿ ಆತ ಮನೆ ಖಾಲಿ ಮಾಡಲು ಮುಂದಾದ. ಆದರೆ ಮನೆಯ ಮಾಲೀಕ ಅಡ್ವಾನ್ಸ್ ವಾಪಸ್ ಕೊಡುವುದಿಲ್ಲ ಎಂದು ತಕರಾರು ತೆಗೆದನು.
ಮನೆ ಮಾಲೀಕನ ವಿರುದ್ಧ ಯುವಕನು ನ್ಯಾಯಾಲಯದಲ್ಲಿ ಸ್ವತಹ ದಾವೆಯನ್ನು ಹುಡಿಯನು. ನ್ಯಾಯಾಲಯದಲ್ಲಿ ವಾದಿಸಿ ತನ್ನ ಕೇಸನ್ನ ತಾನೇ ಗೆದ್ದನು. ನ್ಯಾಯಾಲಯವು ಮನೆ ಮಾಲೀಕನಿಗೆ ಅಡ್ವಾನ್ಸ್ ಜೊತೆಗೆ ಒಂದು ತಿಂಗಳ ಬಾಡಿಗೆಯನ್ನು ಸಹ ವಾಪಸ್ ಕೊಡುವಂತೆ ಆದೇಶವನ್ನು ನೀಡಿತ್ತು.
ಇದನ್ನು ಒದಿ : https://cnewstv.in/?p=7147
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments