Cnewstv.in / 13.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕಾಶಿಯಲ್ಲಿ ನಮೋ : ದಿವ್ಯ-ಕಾಶಿ ಭವ್ಯ- ಕಾಶಿ.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಬಹು ಕನಸಿನ ಯೋಜನೆಯಾದ ಕಾಶಿವಿಶ್ವನಾಥ ಕಾರಿಡಾರ್ ಯೋಜನೆಯನ್ನೂ ಲೋಕಾರ್ಪಣೆ ಮಾಡಲಿದ್ದಾರೆ. ವಿಶ್ವನಾಥ ಮಂದಿರ ಮತ್ತು ಗಂಗಾನದಿಗೆ ಸಂಪರ್ಕ ಕಲ್ಪಿಸುವ ಈ ಯೋಜನೆ ಸುಮಾರು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾಗಿದೆ. ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ಈ ಯೋಜನೆ ಉದ್ಘಾಟನೆಗೂ ಮೊದಲು, ಗಂಗೆಯಲ್ಲಿ ಮೂರುಬಾರಿ ಮುಳುಗೆದ್ದು, ಕಾಲಭೈರವನಿಗೆ ಪ್ರಾರ್ಥನೆ ಮಾಡಿ, ಆರತಿ ಬೆಳಗಿದರು. ನಂತರ ವಿಶ್ವನಾಥನಿಗೆ ಕ್ಷೀರಾಭಿಷೇಕ ಮಾಡಿದರು. ಉದ್ಘಾಟನೆಗೆ ಆಗಮಿಸಿದಂತಹ ನರೇಂದ್ರ ಮೋದಿಯವರನ್ನ ಜನರು ರಸ್ತೆ ಬದಿಯಲ್ಲಿ ನಿಂತು ಅದ್ಧೂರಿಯಾಗಿ ಸ್ವಾಗತಿಸಿದರು.
ಪ್ರಧಾನಿ ಮೋದಿಯ ಕನಸಿನ ಯೋಜನೆ :
ಕಾಶಿ ವಿಶ್ವನಾಥ ಕಾರಿಡಾರ್ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿತ್ತು. 2019 ರಲ್ಲಿಯೇ ಭೂಮಿ ಪೂಜೆ ನೆರವೇರಿಸಿದರು. ಬರೋಬ್ಬರಿ 5 ಸಾವಿರ ಹೆಕ್ಟೇರ್ ನಲ್ಲಿ ಈ ಪ್ರಾಜೆಕ್ಟ್ ಮುಗಿಸಲಾಗಿದೆ. ಇದಕ್ಕೆ ಬರೋಬ್ಬರಿ 800 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಿದೆ. ವಿಶ್ವನಾಥನ ಮೂಲ ಮಂದಿರಕ್ಕೆ ಯಾವುದೇ ಧಕ್ಕೆಯಾಗದಂತೆ ಪ್ರಾಜೆಕ್ಟ್ ಮೂಗಿಸಲಾಗಿದೆ.
ಒಟ್ಟಿನಲ್ಲಿ ಕಾಶಿ ವಿಶ್ವನಾಥನ ಗತವೈಭವ ಮರುಕಳಿಸಿದೆ. ದೇಶದ ಅತಿದೊಡ್ಡ ದೇವಾ ಕಾರ್ಯಕ್ಕೆ ಸಕಲ ಸಿದ್ಧತೆ ಯಾಗಿದೆ. ವಿಶ್ವನಾಥನ ದರ್ಶನಕ್ಕೆ ಇದ್ದ ಸಮಸ್ಯೆಗೆ ಸಂಪೂರ್ಣ ಮುಕ್ತಿ ಸಿಕ್ಕಿದಂತಾಗಿದೆ.
ಇದನ್ನು ಒದಿ : https://cnewstv.in/?p=7128
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments